ಅಥವಾ
(9) (5) (2) (1) (1) (0) (1) (0) (4) (0) (0) (2) (0) (0) ಅಂ (1) ಅಃ (1) (5) (0) (2) (0) (0) (2) (0) (0) (0) (0) (0) (0) (0) (0) (0) (2) (0) (3) (0) (7) (2) (0) (5) (2) (5) (0) (1) (0) (0) (0) (0) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂದುವಿನಲ್ಲಿ ಉದಯವಾದ ಕಲ್ಲಿನಂತೆ ಮುನಿಸ ಮರೆದಿರ್ದಳವ್ವೆ. ಅವನ ಸೋಂಕಿನಲ್ಲಿ ಸುಖಿಯಾದಳು. ಆಗಲಿದಡೆ ಕರೆಗೊಂಡಳು. ಮಹಾಲಿಂಗ ಗಜೇಶ್ವರದೇವರಲ್ಲಿ ಮನಸೋಂಕಿ ಮನ ಲೀಯವಾದಳವ್ವೆ.
--------------
ಗಜೇಶ ಮಸಣಯ್ಯ
ಇರುಳಿನ ಜಕ್ಕವಕ್ಕಿಯಂತೆ ಅಗಲಿ ಹಲುಬುತಿರೆ ಇರುಳಿನ ತಾವರೆಯಂತೆ ಮುಖ ಬಾಡಿ, ಇರುಳಿನ ನೆಯ್ದಿಲಂತೆ ಕಣ್ಣಮುಚ್ಚದೆ, ಇರುಳಿನ ಸಮುದ್ರದಂತೆ ಘನವಾಗಿ, ಸಲೆ ಉಮ್ಮಳಿಸಿ ಸಂಜೆವರಿದು ಮಹಾಲಿಂಗ ಗಜೇಶ್ವರನ ಬರವಿಂಗೆ ಬೆಳಗಾಯಿತು.
--------------
ಗಜೇಶ ಮಸಣಯ್ಯ