ಬ ಪದದಿಂದ ಪ್ರಾರಂಭವಾಗುವ ವಚನಗಳು:
ಬರು ಮನವಾದೀತೆಂದು ಬೇರುವೋದಳು ನೋಡಾ ಅವ್ವಾ.ಕಮ್ಮರಿವರಿವಳು ನೋಡಾ ಅವ್ವಾ.ಸಮಧಾತುವಿಲ್ಲ ನೋಡೆಮಗೆ.ಮದ್ದು ಕುತ್ತದೊಳಗಾದಂತೆಮಹಾಲಿಂಗ ಗಜೇಶ್ವರದೇವರ ಒಲವು ನೋಡಾಅವ್ವಾ.
ಬಾಲಕ ಹಾಲ ಸವಿದಂತೆ,ಮರುಳಿನ ಮನದ ಹರ್ಷದಂತೆ,ಮೂಗರು ಕಂಡ ಕನಸಿನಂತೆ,ಬಂಜೆಯ ಮನದ ನೇಹದಂತೆ,ನೆಯಿ ಆರಿದ ನೆಳಲಂತೆ,ಮಹಾಲಿಂಗ ಗಜೇಶ್ವರನೊಲವು ನೋಡವ್ವಾ.
ಬಟ್ಟಬಯಲಲೊಂದು ದೃಷ್ಟವಪ್ಪ ಮೂರುತಿಯಾಗಿನಾನೊಂದು ಅಷ್ಟತನುವ ಪಡೆದೆ.ಬಾಳೆಯ ದಿಂಡು ಲಾಳಿಲು ನೂಲು ಘಳಿಯ ಶಬುದಉದಕದ ಬಿಂದು ಓ ಓ ಬಾಳೆಮಹಾಲಿಂಗ ಗಜೇಶ್ವರನಲ್ಲಿ ಉದಕ ದಿಟವೆಂದೆನು.
ಬೇರೆ ಗತಿ ಮತಿ ಚೈತನ್ಯವಿಲ್ಲದವಳು.ತೊತ್ತಿನ ಮುನಿಸು ಸಲುವುದೆ?ಅವಳು ಮುನಿದಡೆ ಆಗಲೇ ಕೆಡುವಳು.ಅರಸು ಮುನಿದಡೆ ಆಗಲೇ ಕೆಡುವಳು ತೊತ್ತು.`ರಾಜಾರಕ್ಷತೇ ಧರ್ಮಃ'ಮಹಾಲಿಂಗ ಗಜೇಶ್ವರಯ್ಯಾ.
ಬಿಟ್ಟ ತಲೆಯ ಬಿಡುಮುಡಿಯ ಬರುಮೈಯಕಿವಿಯ ಬಿಚ್ಚೋಲೆಯ ಬಿಟ್ಟ ನಿರಿಯಸಡಿಲಿದ ಕಳೆಯ ಘಳಿಲನೆ ನಡೆತಂದಳು.ನಚ್ಚಿ ಮಚ್ಚಿ ಮನಸಂದ ಕಳೆವಳು.ಬಂದಪ್ಪಿನ ಸೋಂಕಿನ ಸುಖವಮಹಾಲಿಂಗ ಗಜೇಶ್ವರ ತಾನೆ ಬಲ್ಲ.