ಅಥವಾ
(9) (5) (2) (1) (1) (0) (1) (0) (4) (0) (0) (2) (0) (0) ಅಂ (1) ಅಃ (1) (5) (0) (2) (0) (0) (2) (0) (0) (0) (0) (0) (0) (0) (0) (0) (2) (0) (3) (0) (7) (2) (0) (5) (2) (5) (0) (1) (0) (0) (0) (0) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೆನಹಿನ ನಲ್ಲನು ಮನೆಗೆ ಬಂದಡೆ ನೆನೆವುದಿನ್ನಾರ ಹೇಳವ್ವಾ. ನೆರೆವ ಕ್ರೀಯಲ್ಲಿ ಸುಖಿಸುವದಲ್ಲದೆ, ನೆನೆವುದಿನ್ನಾರ ಹೇಳವ್ವಾ. ನೆನೆದೆನೆಂಬ ಭರವೇಕವ್ವಾ. ಮಹಾಲಿಂಗ ಗಜೇಶ್ವರದೇವರ ಕಂಡಲ್ಲಿ ಅಗಲಿದಡೆ ಕರೆಗೊಂಬಲ್ಲಿ ನಾನೇನು ಕಲುಮನದವಳೆ ಕೇಳವ್ವಾ.
--------------
ಗಜೇಶ ಮಸಣಯ್ಯ
ನಲ್ಲನುಳಿದನೆಂದೊಂದು ಮಾತನಟ್ಟಿದಡೆ ಕರಸ್ಥಲದಲ್ಲಿ ನೆಯ್ದಿಲು ಮೂಡಿತ್ತ ಕಂಡೆನವ್ವಾ. ಉದಕದೊಳಗೆ ತಾವರೆ ಬಾಡಿತ್ತ ಕಂಡೆ. ಎನ್ನ ಮಹಾಲಿಂಗ ಗಜೇಶ್ವರನುಳಿದನೆಂದಡೆ ಒಂದೆಲೆಯಲ್ಲಿ ಹೂ ಮೂಡಿತ್ತ ಕಂಡೆನವ್ವಾ.
--------------
ಗಜೇಶ ಮಸಣಯ್ಯ
ನೇಹದ ಮುತ್ತು ಅಧರದ ಬಿತ್ತು. ಅದು ರಸವಿರಸಕ್ಕೆ ಘಟ್ಟಿಯಾಯಿತ್ತವ್ವಾ. ಅವ್ವಾ, ತನು ವಿಕಳಚಿತ್ತ ನಾಗೇಂದ್ರನ ಸೂತ್ರದ ದೃಷ್ಟದಂತೆಯವ್ವಾ. ನೇಹದ ಮುಗುದೆ ವಿಕಳೆಯಾಗಿ ಮಹಾಲಿಂಗ ಗಜೇಶ್ವರನಲ್ಲಿ ವಿಕಾರಗೊಂಡು ಇದ್ದಳವ್ವೆ.
--------------
ಗಜೇಶ ಮಸಣಯ್ಯ
ನೇಹದ ಸನ್ನೆಯ ಮನವರಿಯಲೊಡನೆ ನೋಡಲಮ್ಮೆನವ್ವಾ. ಕಂಗಳಲಿ ಹಿಸುಣವ ಹೇಳಿಹನೆಂದು ನೋಡಲಮ್ಮೆನವ್ವಾ. ಕಜ್ಜಲ ಕಲಕಿದಡೆ ಕುರುಹಳಿದೀತೆಂದು ನೋಡಲಮ್ಮೆನವ್ವಾ. ಕಜ್ಜಲ ಕಲಕಿದಡೆ ಕುರುಹಳಿದೀತೆಂದು ನೋಡಲಮ್ಮೆನವ್ವಾ. ಕಂಗಳಲಿ ಮಹಾಲಿಂಗ ಗಜೇಶ್ವರನೊಲವ! ಎನಗೆ ಕಲುದೇಹ, ತನಗೆ ಸುಖದ ಮೊದಲು ನೋಡವ್ವಾ
--------------
ಗಜೇಶ ಮಸಣಯ್ಯ
ನೇಹವೆಳದಾಯಿತ್ತಾಗಿ ನೋಟ ವಿಪುಳವಾಯಿತ್ತ ಕಂಡೆ. ಅಂಗದ ಕಳೆ ಕಂಗಳ ಮೋಹ ಎವೆಗೆವೆ ಸೈರಿಸದು. ಬೆಳಕಿನ ಮೇಲೆ ಕೆಂಪಡರಿತ್ತು. ಉದಕ ಪಲ್ಲಟ, ಮತ್ಸ ್ಯ ಬೆನ್ನು ಬಸುರ ತೋರಿತ್ತು. ಮಾಗಿಯ ಕೋಗಿಲೆಯಂತೆ ಮೂಗನಾಗಿದ್ದೆನವ್ವಾ. ಮಹಾಲಿಂಗ ಗಜೇಶ್ವರನೊಲವಿಂದೆನಗೆ ರಣದಣಕನವ್ವಾ
--------------
ಗಜೇಶ ಮಸಣಯ್ಯ
ನೀನೊಲಿದು ಕೂರ್ತವರು ನಿಮಗೊಲಿದು ಕೂರ್ತವರು. ನಿಮ್ಮ ಪರಿಯೇ ಅವರು, ನಿಮ್ಮರೂಹೇ ಅವರು. ಅವರನೇನ ಹೇಳುವೆ. ಆಳಾರು ಅರಸಾರು ಎಂದರಿಯಬಾರದು. ನಿಮ್ಮ ರೂಹೆ ಅವರು. ಮಹಾಲಿಂಗ ಗಜೇಶ್ವರನೊಲಿದು ಪೂಜಿಸಿದವರು ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಪದವಿಗಳ ಪಡೆವರು. ಎನಗೆ ನಿಮ್ಮ ಶರಣರೇ ನೀವೆಂದು ಅರಿದಿರ್ಪುದೇ ಸಾಕು.
--------------
ಗಜೇಶ ಮಸಣಯ್ಯ
ನೋಟಕ್ಕೆಯೂ ಕೂಟಕ್ಕೆಯೂ ಕಣ್ಣು ಮನವೆರಸವವ್ವಾ. ಅವ್ವಾ, ಕಂಗಳು ತಪ್ಪಿ ನೋಡಲಮ್ಮೇ; ಅಮ್ಮೆ ಕೇಳೆಲೆಯವ್ವಾ. ಅವ್ವಾ, ಕಿವಿಗಳ ತಪ್ಪಿ ಕೇಳಲಮ್ಮೆ; ಆಮ್ಮೆ ಕೇಳೆಲೆಯವ್ವಾ. ಅವ್ವಾ, ಕಲಿಗಳಾಗದಲ್ಲಿ ಸೋತಂತೆ. ತನು ಮನ ಧನದ ಭಂಗವಳಿದು ನೆರೆಯನವ್ವಾ ಮಹಾಲಿಂಗ ಗಜೇಶ್ವರನವ್ವಾ.
--------------
ಗಜೇಶ ಮಸಣಯ್ಯ