ಅಥವಾ
(9) (5) (2) (1) (1) (0) (1) (0) (4) (0) (0) (2) (0) (0) ಅಂ (1) ಅಃ (1) (5) (0) (2) (0) (0) (2) (0) (0) (0) (0) (0) (0) (0) (0) (0) (2) (0) (3) (0) (7) (2) (0) (5) (2) (5) (0) (1) (0) (0) (0) (0) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸರ್ವಜ್ಞನ ಸನುಮತವೆಂಬ ಮಾತು ಸಾಮಾನ್ಯವೆ ಅವ್ವಾ? ತಾ ಮೆಚ್ಚ, ಕಲಿಯಾಗಿಪ್ಪವರ ಮೆಚ್ಚ, ಸುಖಿಯಾಗಿಪ್ಪವರನೊಬ್ಬರನಾರುವ ಕಾಣೆನವ್ವಾ! ತಾ ಸತ್ತು ಹೆರರ ಕೊಂದವಸ್ಥೆಯ ಚಂದವ ಚಂದ್ರಮತಿಯಲ್ಲಿ ಕಂಡೆನು. ಇಂದು ಕಂಡೆನು ಮಹಾಲಿಂಗ ಮಸಣಯ್ಯಗಳಲ್ಲಿ ಮಹಾಲಿಂಗ ಗಜೇಶ್ವರದೇವರು ಮಾಡಿದ.
--------------
ಗಜೇಶ ಮಸಣಯ್ಯ
ಸಮರಸದೊಳಗಣ ಸ್ನೇಹ ಮತ್ಸ ್ಯ ಕೂರ್ಮ ವಿಹಂಗದಂತೆ; ಸ್ನೇಹದ ನೋಟದಲ್ಲಿಯೇ ತೃಪ್ತಿ, ಸ್ನೇಹದ ನೆನಹಿನಲ್ಲಿಯೇ ತೃಪ್ತಿ, ಸ್ನೇಹದ ಸ್ಪರ್ಶನದಲ್ಲಿಯೇ ತೃಪ್ತಿ. ಈ ಪರಿಯಲ್ಲಿ ಎಮ್ಮ ಮಹಾಲಿಂಗ ಗಜೇಶ್ವರನಲ್ಲಿ ಲಿಂಗೈಕ್ಯವು ವಾರಿಕಲ್ಲ ಪುತ್ಥಳಿ ಕರಗಿ ಅಪ್ಪುವನೊಡಗೂಡಿದಂತಾಯಿತ್ತು.
--------------
ಗಜೇಶ ಮಸಣಯ್ಯ