ಅಥವಾ
(9) (5) (2) (1) (1) (0) (1) (0) (4) (0) (0) (2) (0) (0) ಅಂ (1) ಅಃ (1) (5) (0) (2) (0) (0) (2) (0) (0) (0) (0) (0) (0) (0) (0) (0) (2) (0) (3) (0) (7) (2) (0) (5) (2) (5) (0) (1) (0) (0) (0) (0) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೇಶಾಖಿಯಲ್ಲದ ರಾಗ, ಉಪ್ಪಿಲ್ಲದ ಊಟ ಸಪ್ಪೆ ಕಾಣಿರೋ ಅಯ್ಯಾ, ಮಿಕ್ಕಿನ ರಾಗ. ಶಿವನಲ್ಲದ ದೈವಫಲವಿಲ್ಲ ಕಾಣಿರೊ ಅಯ್ಯಾ. ಮಿಕ್ಕಿನ ತುಂಬುರ ನಾರದರು ಶಿವನ ಕೇಳಿಸುವ ರಾಗ, ಮಹಾಲಿಂಗ ಗಜೇಶ್ವರನ ನಚ್ಚಿನ ರಾಗ.
--------------
ಗಜೇಶ ಮಸಣಯ್ಯ
ದೇವರ ನೆನೆದು ಮುಕ್ತರಾದೆವೆಂಬ ಯುಕ್ತಿಶೂನ್ಯರ ಮಾತ ಕೇಳಲಾಗದು. ಅದೇನು ಕಾರಣವೆಂದಡೆ: ದೇವರ ನೆನೆವಂಗೆ ದೇವರುಂಟೆ? ದೂರ ದೂರದಲ್ಲಿದ್ದವರ ನೆನೆವರಲ್ಲದೆ ಸಮೀಪದಲ್ಲಿದ್ದವರ ನೆನೆವವರಿಲ್ಲ. ಇದನರಿದು ನೀನೆನ್ನೊಳಗಡಗಿ ನಾ ನಿನ್ನ ನೆನೆಯಲಿಲ್ಲ; ನೀನೆನಗೆ ಮುಕ್ತಿಯನೀಯಲಿಲ್ಲ. ನೀನಾನೆಂದೆನಲಿಲ್ಲ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ದೃಷ್ಟಿಯ ಕಲು ತಾಗಿದಂತೆ ಮುನಿಸ ನೋಡಾ ಅವ್ವಾ. ಸೋಂಕಿದಡೆ ಸುಖಿಯಾದೆ, ಉಳಿದಡೆ ಕರಿಗೊಂಡೆ. ಪಾಷಾಣದೊಸರಿನಂತೆ ಆದೆ ನೋಡಾ ಅವ್ವಾ ಸೋಂಕಿದಡೆ. ಮಹಾಲಿಂಗ ಗಜೇಶ್ವರನೊಲವು ಎನಗೆ ಕಲುದೇಹ, ಎನಗೆ ಸುಖದ ಮೊದಲು ನೋಡಾಅವ್ವಾ.
--------------
ಗಜೇಶ ಮಸಣಯ್ಯ