ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಡಿನ ಕಾಲ ಕಡಿದು, ಕೋಡಗದ ಹಲ್ಲ ಕಿತ್ತು, ಉಡುವಿನ ನಾಲಗೆಯ ಒಡಗೂಡಿ ಕೂಡಿ ತಿಂದು, ಮತ್ತೊಡೆಯನನರಿಯಬೇಕು, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಆಕಾಶದ ಮಧ್ಯದಲ್ಲಿ ಒಂದು ಭೇಕ ನುಡಿಯುತ್ತದೆ. ಅದು ಅನೇಕ ಗೀತ ವಾದ್ಯ ನೃತ್ಯಂಗಳಿಂ[ದಾಡುತ್ತಿದ್ದಿತ್ತು]. ಎನ್ನಾಟವ ನೋಡುವರಿಲ್ಲಾಯೆಂದು ನೇತಿಗಳೆಯಿತ್ತು ತನ್ನಂಗವ. ಅದು ನಿರ್ಜಾತನ ಒಲುಮೆ. ಅರ್ಕೇಶ್ವರಲಿಂಗವನರಿವುದಕ್ಕೆ ತೆರಪಾಗಿರಣ್ಣಾ.
--------------
ಮಧುವಯ್ಯ
ಆಡುವ ಮಾತಿಂಗೆ, ಮಾಡುವ ಕೀಲಿಂಗೆ, ಕಡು ನಡು ಮೊದಲಿಲ್ಲ. ಅರಿದಡೆ ಒಂದೆ ವರ್ಮ ಭೇದ. ಮಾಡುವ ಸೂತ್ರ ಕೀಲೊಂದರಲ್ಲಿ ಅಡಗಿದಡೆ, ಅದು ಭೇದಕತನ. ಅರಿದು ಕುರುಹಿನಲ್ಲಿ ಮರವೆ ನಿಃಪತಿಯಾದಡೆ, ಅರ್ಕೇಶ್ವರಲಿಂಗ ಭಿನ್ನಭಾವಿಯಲ್ಲ.
--------------
ಮಧುವಯ್ಯ
ಆರು ಕಂಬದ ಮಾಳಿಗೆಯ ನಡುವೆ, ಒಂದು ಮೂರುಮುಖದ ಹೆಗ್ಗಣ ತೋಡಿ ಕಂಡಿತ್ತು, ತೋಡೊಲೆಗಳವ, ಸಾಗರದ ಮಂದಿರವ ಅದು. ತನ್ನಿರವ ತೋರುವುದಕ್ಕೆ ಮೊದಲೆ ಮಾಳಿಗೆ ಜಾರಿತ್ತು. ಅರ್ಕೇಶ್ವರಲಿಂಗವ ಕೇಳಿಕೊಂಬ ಬನ್ನಿ.
--------------
ಮಧುವಯ್ಯ
ಆಕಾಶದ ಮಳೆಯನರಿತು, ಭೂಮಿಯ ಬೆಳೆಯನರಿತು, ಹುಟ್ಟುವ ಬೀಜವನರಿತು, ದೃಷ್ಟವ ಕಂಡು ಹೊತ್ತಾಡಿ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಆತ್ಮ ಶಯನನಾಗಿದ್ದಲ್ಲಿ ತನುವಿನ ಸಂಚಾರವ ಮರೆದು, ಸ್ವಪ್ನಾವಸ್ಥೆಯಲ್ಲಿ ಜಾಗ್ರದಿರವನರಿವಂತೆ, ಸ್ವಪ್ನದ ಭೇದವ ಸುಷುಪ್ತಿಯರಿದು ವಿಶ್ರಮಿಸುವಂತೆ, ಕಾಯದ ಇಷ್ಟದ ಭೇದವನರಿ. ಅರ್ಕೇಶ್ವರಲಿಂಗವನರಿವುದಕ್ಕೆ ಉಳುಮೆಯ ಗೊತ್ತು.
--------------
ಮಧುವಯ್ಯ