ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಾಷಾಣದುದಕ ಏತರಿಂದ ದ್ರವ ? ಪಾಷಾಣದ ಪಾವಕ ಅದೇತರಿಂದ ಕ್ರೋಧ ? ಅಪ್ಪುವಿನ ಸಂಚಾರದ ರೂಪು ಅದೇತರ ಒಪ್ಪದಿಂದ ? ಅರಿದರುಹಿಸಿಕೊಂಬ ಅರ್ಕೇಶ್ವರಲಿಂಗನ ಇರವು ಅದೇತರಿಂದ?
--------------
ಮಧುವಯ್ಯ
ಪೂಜಿಸಿಕೊಂಡೆಹೆವೆಂದು, ಘನಗಂಬ್ಥೀರದಲ್ಲಿ ರಾಗಿಸಿಕೊಂಡಿಪ್ಪ ಆತ್ಮ ತೇಜದ ಮಾತಿನ ವೇಷದ ಗರ್ವಿಗಳು, ಆಡುವ ವಾಚಕ, ಭೇಕನ ಬಾಯಲ್ಲಿ ಸಿಕ್ಕಿದ ಮಕ್ಷಿಕ, ಶ್ರೋಣಿತದಾಸೆಗೆ ಮಚ್ಚಿದಂತೆ. ಮತ್ತುಂಟೆ ಅರ್ಕೇಶ್ವರಲಿಂಗನ ಕೂಟ ?
--------------
ಮಧುವಯ್ಯ
ಪಂಜರದ ಕೋಳಿ ಮಾರ್ಜಾಲನ ಕೊಂದು ತಿಂದು, ಬಂದುದ ಹೊಂದದೆ ತಾನೊಂದೆ ಹೊಂದಿತ್ತು, ಪಂಜರ ಹೊರಗೆ, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ಪರಮೂರ್ತಿಯಾದಡೆ ಪರಮನ ಸಂಚವನರಿಯಬೇಕು. ವಿರಕ್ತನಾದಡೆ ಇಹಪರ ನಾಸ್ತಿ, ಪರಮ ಪರಿಣಾಮಿಯಾಗಿರಬೇಕು. ಜ್ಞಾನಿಯಾದಡೆ ಸರ್ವಜೀವದ ಚೇತನವನರಿಯಬೇಕು. ಸಾಕು ಮಾತಿನ ಮಾಲೆಯ ನೀತಿಯ ನುಡಿ. ಅರ್ಕೇಶ್ವರಲಿಂಗನ ಬೆಚ್ಚಂತೆ ಇರಬೇಕು.
--------------
ಮಧುವಯ್ಯ
ಪೂಜೆ ಪುಣ್ಯದ ಮಾಟ, ಭವದ ಕೂಟ, ಅರಿವು ಸಂದೇಹ. ಅರಿಯದೆ ಮರೆಯದೆ ಕರಿಗೊಂಡಿರು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಪಕ್ಷಿಯ ಕುಕ್ಕೆಯೊಳಗಿಕ್ಕಿ ಮಾರಬಹುದಲ್ಲದೆ ಮತ್ತಗಜವ ಮಾರಬಹುದೆ ಅಯ್ಯಾ ? ಚಿತ್ರವ ಬರೆವುದಕ್ಕೆ ಲೆಕ್ಕಣಿಕೆಯಲ್ಲದೆ ಚಿತ್ತಜಗುಂಟೆ ? ಪುನರಪಿ ವಸ್ತುವನರಿವುದಕ್ಕೆ ಹೊತ್ತುಗೊತ್ತುಂಟೆ ? ಅರ್ಕೇಶ್ವರನ ಕೂಡುವುದಕ್ಕೆ ತತ್ಕಾಲವುಂಟೆ ?
--------------
ಮಧುವಯ್ಯ