ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉರಿ ಸಿರಿ ಭೂತ ಭವಿಷ್ಯತ್ ವರ್ತಮಾನಂಗಳಲ್ಲಿ ನೋಡುವ ಆಲಿ ಮೇಲಕ್ಕೆ ಸಿಕ್ಕಿ, ಭಾವ ಅಂಗವ ಮರೆದು, ಧ್ಯಾನವೆ ಮೂರ್ತಿ ಜಪ. ಪಂಚಾಕ್ಷರಿಯ ಪ್ರಣವ ಏಕೀಕರಿಸಿದಲ್ಲಿ, ಸಂದಿತ್ತು ಜಪ ಅರ್ಕೇಶ್ವರಲಿಂಗಕ್ಕೆ.
--------------
ಮಧುವಯ್ಯ
ಉರಿ ತರುವಿನಲ್ಲಿ ಹುಟ್ಟಿ ತರುವ ಸುಡುವಂತೆ, ಜೀವ ಜೀವದಲ್ಲಿ ಹುಟ್ಟಿ ಜೀವರ ಲಯವ ಮಾಡುವಂತೆ, ಅರಿವು ಜ್ಞಾನದಲ್ಲಿ ನಿಂದು, ಕುರುಹನವಗವಿಸಿತ್ತು, ಅರ್ಕೇಶ್ವರಲಿಂಗವನರಿತು.
--------------
ಮಧುವಯ್ಯ
ಉಂಟೆಂದಡುಂಟು, ಇಲ್ಲಾ ಎಂದಡೆ ಇಲ್ಲ. ಅದು ತನ್ನ ವಿಶ್ವಾಸದ ಭಾವ. ತನಗೆ ಅನ್ಯಭಿನ್ನವಿಲ್ಲ, ಅರ್ಕೇಶ್ವರಲಿಂಗ ತಾನಾದ ಕಾರಣ.
--------------
ಮಧುವಯ್ಯ