ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಣ್ಣ, ಕಾಡುವ ಗುಂಗುರ ತಿಂದು, ಬಾಯ, ಕಾಡುವ ಕೈಯ ತಿಂದು, ಆಪ್ಯಾಯನವಡಸಿದ ಹೊಟ್ಟೆಯ ತಿಂದು, ಮತ್ತಿವರ ಹುಟ್ಟು ಮೆಟ್ಟನರಿಯಲೇಕೆ ? ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಕಾಳಿಂಗನ ಮಡುವ ಕಲಕಿದವನ ನಾಬ್ಥಿಯ ಕೂಸಿನ ಶಿರಪಾಣಿಯಲ್ಲಿ ಬೇಡುವ, ಆತನ ಶಕ್ತಿಯ ಸಮರಸದಲ್ಲಿ ಓಲಾಡುವ, ಮುಕ್ತಿವಂತರೆಲ್ಲರೂ ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಕಾಯವಳಿದು ಜೀವ ಬಯಲಾದಲ್ಲಿ, ಭಾವಿಸುವ ಅರಿವ ನೆಲೆಯ ಕುರುಹೆಲ್ಲಿದ್ದಿತ್ತು ? ಅದ ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಕಾಡಿನೊಳಗಣ ವರಹನ, ಊರ ಕುಕ್ಕುರ ಕೊಲುವಾಗ ಊರಿಗೂ ಕಾಡಿಗೂ ಏತರ ಹಗೆ ? ಅದರ ಭೇದ ಅಲ್ಲಿಯೆ ಅಡಗಿತ್ತು. ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಕಾಯದ ಸೂತಕವ ನೋಟದಿಂದ ಕಳೆದು, ನೋಟದ ಸೂತಕವ ಭಾವದಿಂದ ಕಳೆದು, ಭಾವದ ಪ್ರಕೃತಿ[ಯ] ಜ್ಞಾನದಿಂದ ಕಳೆದು, ಜ್ಞಾನದ ಬೆಳಗು ನಿಂದಲ್ಲಿ, ಅರ್ಕೇಶ್ವರಲಿಂಗವ ಮುಟ್ಟಿದ ಮುಟ್ಟು.
--------------
ಮಧುವಯ್ಯ
ಕುದುರೆಯ ನರಿ ಕೊಂದು, ನರಿಯ ಇರುಹೆ ತಿಂದು, ಆ ಇರುಹೆ ತನ್ನ ತಾ ಸತ್ತಿತ್ತು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಕಂಗಳ ಸೂತಕವ ಯೋನಿ ತಡೆದು, ಬಾಯ ಬಸುರಾಗಿ, ಕೈ ಬೆಸನಾಯಿತ್ತು. ಕೈಯ ಶಿಶುವ ಕಂಗಳ ತಾಯಿ ಎತ್ತಿ, ಭಾವದ ದಾದಿಯ ಕೈಯಲ್ಲಿ ಕೊಟ್ಟು, ಅರ್ಕೇಶ್ವರಲಿಂಗವು ತೊಟ್ಟಿಲಲ್ಲಿ ಬೆಳಗುತ್ತದೆ.
--------------
ಮಧುವಯ್ಯ
ಕಾಲು ಕೈ ತಲೆಗೆ ಹೊಣೆಯಾದ ಮತ್ತೆ ಊರೆಲ್ಲಕ್ಕೆ ಹೇಳಲೇಕಯ್ಯ? ತಲೆವೊಡೆಯ ತಲೆಯಳಿಸುತ್ತಿರ್ದು, ಹಲಬರಿಗೆ ಮೊರೆಯೇಕೆ ? ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಕಂಡು ಕಾಬುದು, ಕಾಣದೆ ಅರಿವುದು, ಭಾವಿಸಿ ಪ್ರಮಾಣಕ್ಕೆ ಬಾರದಿಪ್ಪುದು ಭಾವವೋ, ಭ್ರಮೆಯೋ ? ಅದೇನೆಂಬುದ ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಕೋಟಿ ಮಾತನಾಡಿದಡೂ ವಸ್ತುವಿನ ಕೂಟವೊಂದೆ ಭೇದ. ನಾನಾ ಕ್ರೀಯ ಭಾವಿಸಿದಡೂ ಸದ್ಭಾವವೊಂದೆಯಾಗಬೇಕು. ಊರ ಸುತ್ತಿದಡೂ ಬಾಗಿಲಲ್ಲಿ ಬರಬೇಕು. ಮರೆಯ ಮಾತು ಬೇಡ. ಅರ್ಕೇಶ್ವರಲಿಂಗವನರಿತಲ್ಲದಾಗದು.
--------------
ಮಧುವಯ್ಯ
ಕಂಜನಾಭನ ಸುತನ ರಂಜಿಸಿದಲ್ಲಿಯೆ ಕಾಯಗುಣ ಕೇಡಾಯಿತ್ತು. ಮನಸಿಜನ ಪಿತನ ಹಾಯವ ಬಿಟ್ಟಾಗಲೆ ಸುಖ ಲಯವಾಯಿತ್ತು. ಚಿತ್ತ ವಿಶ್ರಾಂತಿಯನೆಯ್ದಿದಲ್ಲಿ[ಯೆ] ಸುಳಿದಾಡುವನ ಲಯ ಕೆಟ್ಟಿತ್ತು. ತ್ರಿವಿಧ ಲೇಪವಾದಲ್ಲಿಯೆ ಅರ್ಕೇಶ್ವರಲಿಂಗನ ಭಾವ, ಬ್ರಹ್ಮಕ್ಕೊಳಗಾಯಿತ್ತು.
--------------
ಮಧುವಯ್ಯ
ಕಲ್ಲು ಬೆಂಕಿ ಕೂಡಿ ಉರಿವಾಗ, ಹುಲ್ಲು ಕತ್ತುದುದಿಲ್ಲ. ಮೆಲ್ಲನೆ ಉಲುಹುವಾತನ ಸೊಲ್ಲಿನ ಬಲ್ಲತನ ಅಲ್ಲಿಯೆ ಬೆಂದಿತ್ತು. ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಕಂಜನಾಭಿಯಲ್ಲಿ ಕುಂಜರ ಬಂದು, ಮಂದಿರದವರೆಲ್ಲರ ಕೊಂದಿತ್ತು. ಕುಂಜರನ ಬೆಂಬಳಿಯವರಲ್ಲದೆ ಕುಂಜರನ ಸಂದ ಮುರಿವರಿಲ್ಲ. ಅರ್ಕೇಶ್ವರಲಿಂಗನ ಒಲುಮೆಯಿದ್ದವರಿಗಲ್ಲದೆ ಸಾಧ್ಯವಾಗದು.
--------------
ಮಧುವಯ್ಯ
ಕ್ರಿಯಾಭಾವದಲ್ಲಿ ನಿಂದು ಮಾಡುವನ ಅರ್ಚನೆ ಕಾರ್ಪಾಸದಂತಿರಬೇಕು. ಕಲ್ಪದ್ರುಮದ ಬಿತ್ತಿನ ಸಿಪ್ಪೆಯಂತಿರಬೇಕು. ವರುಣಕಿರಣದ ಸಂಚಾರ ಸಂಚರಿಸುವಂತಿರಬೇಕು. ಇದು ಕ್ರೀಶುದ್ಧತೆ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಕುಲವೆರಡಲ್ಲದೆ ಹಲವಿಲ್ಲ. ದಿನವೆರಡಲ್ಲದೆ ಸಪ್ತದಿನವಿಲ್ಲ. ಅರಿವು ಮರವೆಯೆರಡಲ್ಲದೆ ಬೇರೊಂದು ತೊಡಿಗೆಯಿಲ್ಲ. ಅರ್ಕೇಶ್ವರಲಿಂಗ ಏಕರೂಪನಲ್ಲದೆ ಬಹುನಾಮದವನಲ್ಲ.
--------------
ಮಧುವಯ್ಯ
ಕಂಗಳ ಮಧ್ಯದ ಮಲೆಯಲ್ಲಿ, ಒಂದು ನಿಸ್ಸಂಗಶೃಂಗಿ ಮೇವುತ್ತದೆ. ಅಂಬೊಂದು, ಹಿಳುಕು ಮೂರು, ಅಲಗಾರು, ಮೊನೆ ಅಯಿದು ಕೂಡಿದಲ್ಲಿ, ಧನು ನಾಲ್ಕು ಹಿಡಿದು, ನಾರಿಯೆಂಟ ಕೂಡಿ, ಶರಸಂಧಾನದಲೆಸೆಯೆ, ಶೃಂಗಿ ಬಿದ್ದಿತ್ತು, ಅಸು ಬದುಕಿತ್ತು, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ಕಾಯಕ್ಕೆ ಆಚಾರಸಂಬಂಧ. ಜೀವಕ್ಕೆ ಅರಿವುಸಂಬಂಧ. ಅರಿವಿಂಗೆ ಜ್ಞಾನಸಂಬಂಧ. ಜ್ಞಾನಕ್ಕೆ ಜ್ಯೋತಿಸಂಬಂಧ. ಜ್ಯೋತಿಗೆ ಮಹಾಬೆಳಗು ಸಂಬಂಧವಾಗಿಯಲ್ಲದೆ, ಅರ್ಕೇಶ್ವರಲಿಂಗವ ಕಾಣಬಾರದು.
--------------
ಮಧುವಯ್ಯ
ಕುಕ್ಕೊಂಬಿನ ಕಾಗೆಯಂತೆ, ಜೀವ ಎತ್ತ ಹಂಬಲಿಸಿದಡೂ ಆಸೆಯೆಂಬ ಗೊತ್ತಿಗೆ ಬಹವರೆಲ್ಲರು ನಿಶ್ಚಯವನರಿಯಬಲ್ಲರೆ ? ತುತ್ತು ಕುತ್ತಿಗಾಗಿ ವೇಷವ ತೊಟ್ಟಿಹ ಚಿತ್ತಶುದ್ಭಾತ್ಮವಿಲ್ಲದವರ ಅರ್ಕೇಶ್ವರಲಿಂಗನೊಪ್ಪನವರ.
--------------
ಮಧುವಯ್ಯ
ಕವಿಯ ಕಾಳಗದಲ್ಲಿ ರವಿ ಬಂಟನಾಗೆ, ಶಶಿ ದೆಸೆಗೆಟ್ಟು, ಅರಸು ಬಂಟರ ಬಿಟ್ಟೋಡಿದ. ರವಿ ರಥವ ತುಡುಕಿ ಅವಿರಥವಾದ. ಅರ್ಕೇಶ್ವರಲಿಂಗದಲ್ಲಿಗೆ ಕವಿ ಕವಲಾಯಿತ್ತು.
--------------
ಮಧುವಯ್ಯ