ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮತ್ಸ್ಯ ಹೊಳೆಯ ನುಂಗಿ, ಮೊಸಳೆ ಮಡುವ ನುಂಗುವಾಗ ಅಡಗಿರ್ದು ನೋಡಿ ಕಂಡೆ. ಕೊಡಗೂಸು ಅಡಗುವ ಠಾವ, ಒಡಗೂಡಿದಲ್ಲದೆ ಕಾಣಬಾರದು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಮೊದಲು ಬೀಜ ಬಲಿದು, ಕಡೆಯಲ್ಲಿ ಬೀಜ ಅಳಿದಲ್ಲದೆ ಅಂಕುರವಾಗದು. ಕ್ರೀಯಲ್ಲಿ ಆಚರಿಸಿ, ಅರಿವಿನಲ್ಲಿ ವಿಶ್ರಮಿಸಿ, ತುರೀಯ ಆತುರ ಸಮನವೆಂಬ ತ್ರಿವಿಧ ಲೇಪವಾಗಿ ಕಂಡ ಉಳುಮೆ, ಅರ್ಕೇಶ್ವರಲಿಂಗನ ಅರಿಕೆ.
--------------
ಮಧುವಯ್ಯ
ಮನ ಮಹದಲ್ಲಿ ನಿಂದು, ತನುವಿನ ವಿಕಾರವ ಬಿಟ್ಟ ಮತ್ತೆ ಭವ ಬಂಧದವರ ಒಲವರವೇಕೆ ? ಅದು ಸಲೆ ನೆಲೆಯಲ್ಲ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಮೂರುಲೋಕದ ದೈತೆ ಊರೆಲ್ಲರ ಕೊಂದು ತಿಂದು, ಬೇರೊಂದು ಠಾವಿನಲ್ಲಿ ಆಯಿದಾಳೆ. ಠಾವನರಿತು ದೈತೆಯ ದಾತ ಮುರಿದು, ಅನಿಹಿತವ ನೇತಿಗಳೆದು, ನಿಹಿತವು ತಾನಾದಡೆ, ಅರ್ಕೇಶ್ವರಲಿಂಗವ ಕೂಡಿದ ಕೂಟ.
--------------
ಮಧುವಯ್ಯ
ಮನೆಯಲ್ಲಿ ಅಟ್ಟೆನೆಂದಡೆ, ಹೊಟ್ಟೆ ತುಂಬಿದುದುಂಟೆ ? ಇರಿಯೆಂಬ ಮಾತಿಗೆ ಘಾಯವೊಡಲಾದುದುಂಟೆ ? ಮಾತಿನ ಮಾಲೆಯ ನುಡಿದು, ಅರ್ಕೇಶ್ವರಲಿಂಗವನರಿದವರುಂಟೆ ?
--------------
ಮಧುವಯ್ಯ
ಮಾತಿನ ನಿಪುಣರೆಲ್ಲರೂ ಸೋತು ಕುಳಿತರು ಅವಳ ಪೀಠಕ್ಕಾಗಿ. ಪೀಠದ ಆಟದವರು ಅರ್ಕೇಶ್ವರಲಿಂಗನ ಕೂಟವ ಬಲ್ಲರೆ ?
--------------
ಮಧುವಯ್ಯ
ಮುಕ್ತಿಯ ಪಥದಲ್ಲಿ ನಿಂದು, ಸುಚಿತ್ತವನರಿದು, ಸುಚಿತ್ತ ನೆಲೆಗೊಂಡು, ನೆಲೆವಾಸ ಬಲಿದು, ವಿರಕ್ತಿ ನಿರ್ವಾಣಪದವಾಗಿ, ಪಥನಾಮ ರೂಪು ನಿರ್ಲೇಪವಾಗಿ, ಅರ್ಕೇಶ್ವರಲಿಂಗವನರಿಯಬೇಕು.
--------------
ಮಧುವಯ್ಯ
ಮಾಡುವ ಕ್ರೀ ಕರ್ಮಕಾಂಡ, ಅರಿವ ಚಿತ್ತ ಭಾವಕಾಂಡ. ಉಭಯ ಲೇಪವಾಗಿ ನಿಂದಲ್ಲಿ ಜ್ಞಾನಕಾಂಡ. ತ್ರಿವಿಧ ಲಯವಾದಲ್ಲಿ, ಅರ್ಕೇಶ್ವರಲಿಂಗನ ಕೂಡವ ಕೂಟ.
--------------
ಮಧುವಯ್ಯ
ಮೂವರು ಸಮಗಾರರ ಬಾಗಿಲಲ್ಲಿ ಅಯಿವರು ಹಾರುವರು ಹರಸುತ್ತೈದಾರೆ. ಒಬ್ಬನಿಗೆ ಕೊಂಬ ಕೊಟ್ಟು, ಒಬ್ಬನಿಗೆ ಕೊಳಗ ಕೊಟ್ಟು, ಒಬ್ಬನಿಗೆ ಕರುಳ ಕೊಟ್ಟು, ಒಬ್ಬನಿಗೆ ಗರ್ಭವ ಕೊಟ್ಟು, ಒಬ್ಬನಿಗೆ ಏನೂಯಿಲ್ಲದೆ ತಬ್ಬಿಬ್ಬಿಯಾಯಿತ್ತು. ಆ ಮಾದಿಗನ ಮನೆಯ ಹೊಕ್ಕು, ಮಾದಗಿತ್ತಿಯ ಅ[ಡಗ] ತಿಂದ, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ಮಾಡುವ ಸತ್ಕ್ರೀಮಾರ್ಗ, ಇದಿರಿಗಲ್ಲದೆ ಲಿಂಗವ ಮುಟ್ಟಲರಿಯವು. ಸರ್ಪ ಹೆಡೆಯಲ್ಲಿ ಹೊಯಿದಡೆ ವಿಷ ಹತ್ತಬಲ್ಲುದೆ, ದಷ್ಟವಾಗಿಯಲ್ಲದೆ ? ಮನ ಭಾವ ಕ್ರೀ ತ್ರಿಕರಣ ಶುದ್ಧವಾಗು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಮಧುರವಾಣಿಯ ಉದರದಲ್ಲಿ, ಒಂದು ನಿಜಕುಕ್ಕುಟ ಕೂಗುತ್ತದೆ. ಮೂವರ ಮೊಲೆಯನುಂಡು, ಮರೆದೊರಗಬೇಡಾ ಎಂದು ಬೆಳಗಾಯಿತ್ತು. ಅರ್ಕೇಶ್ವರಲಿಂಗವ ನೋಡುವ ಬನ್ನಿ ಎಂದು ಕೂಗುತ್ತಿದ್ದಿತ್ತು.
--------------
ಮಧುವಯ್ಯ
ಮೂರುಲೋಕದ ಹುಟ್ಟಿನಲ್ಲಿ ಒಂದು ವಾರಣ ಬಂದು, ಊರೆಲ್ಲರ ಬರಿಕೈವುತ್ತದೆ. ಅದಾರಿಗೂ ಅಶಕ್ಯ. ಆ ವಾರಣನ ವಾರಿಸುವರಿಲ್ಲ. ಅರ್ಕೇಶ್ವರಲಿಂಗವನರಿತವರಿಗಲ್ಲದೆ ಆಗದು.
--------------
ಮಧುವಯ್ಯ
ಮೂರು ಸುರೆಯ ಕುಡಿದು, ಅಡಗಿಸಿದವ ಎನ್ನ ಗುರು. ಕಾಳಾಡ ಕಣ್ಣ ಕಿತ್ತು, ಎರಳೆಯ ತಿರುಳ ತಿಂದು, ದಿನವ ಕಳಿದುಳಿದವ ಎನ್ನ ಗುರು. ಆತ ಅರ್ಕೇಶ್ವರಲಿಂಗಕ್ಕೆ ಸಿಕ್ಕದವ.
--------------
ಮಧುವಯ್ಯ