ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೊಣ ರಣವ ಹೊಕ್ಕು, ಶ್ರೋಣಿತವ ಭುಂಜಿಸುವಾಗ, ಕೇಣಸರದ ಭಟರೆಲ್ಲರೂ ನೊಣದ ರಾವಡಿಗಂಜಿ ಹೇಳದೆ ಹೋದರು. ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ನಾನೆಂದಡೆ ಸ್ವತಂತ್ರಿಯಲ್ಲ. ನೀನೆಂದು ಇದಿರಿಟ್ಟಲ್ಲಿ ಭಾವಕ್ಕೆ ಬ್ಥಿನ್ನ. ನಾನೆನಬಾರದು, ನೀನೆನಬಾರದು. ಅರ್ಕೇಶ್ವರಲಿಂಗವ ಏನೂ ಎನಬಾರದು.
--------------
ಮಧುವಯ್ಯ
ನಾ ನಿನ್ನನರಿವಲ್ಲಿ, ನೀನೆನ್ನ ಕೈಯಲ್ಲಿ ಅರಿಯಿಸಿಕೊಂಬಲ್ಲಿ, ಅದೇನು ಭೇದ ? ನಾನೆಂದಡೆ ನಿನ್ನ ಸುತ್ತಿದ ಮಾಯೆ. ನೀನೆಂದಡೆ ನನ್ನ ಸುತ್ತಿದ ಮಾಯೆ. ನಾ ನೀನೆಂಬಲ್ಲಿ ಉಳಿಯಿತ್ತು, ಅರ್ಕೇಶ್ವರಲಿಂಗನ ಅರಿಕೆ.
--------------
ಮಧುವಯ್ಯ
ನೆನಹು ನಿಜದಲ್ಲಿ ನಿಂದಲ್ಲಿ ಸುರುಳಿನ ತೊಡಕು ಗಂಟುಂಟೆ ? ಅಂಬರವನಡರಿದವಂಗೆ ಬೇರೊಂದಿಂಬ ಮಾಡಲುಂಟೆ ? ವಸ್ತುವಿನ ಅಂಗದಲ್ಲಿ ಸರ್ವವೂ ಹಿಂಗಿದಲ್ಲಿ, ಅರ್ಕೇಶ್ವರಲಿಂಗವ ಕಟ್ಟುವುದಕ್ಕೆ ಬೇರೊಂದು ಠಾವುಂಟೆ ?
--------------
ಮಧುವಯ್ಯ
ನಾಯಿಗೆ ಕಾಲು ಕೊಟ್ಟು, ತೋಳಗೆ ಹೊಟ್ಟೆಯ ಕೊಟ್ಟು, ಹುಲಿಗೆ ತಲೆಯ ಕೊಟ್ಟು, ಮೆಲಿಸಿಕೊಂಬವರೆಲ್ಲಕ್ಕು ಬಲವಂತತನವೆ ? ಅದರ ಸಲೆ ಬಲುಮೆ, ಅರ್ಕೇಶ್ವರಲಿಂಗವನರಿತವರಿಗಲ್ಲದೆ ಆಗದು.
--------------
ಮಧುವಯ್ಯ
ನುಡಿಯಿರಿದಡೆ ಪರಿಕೈದೇಕೆ ? ಕೈಯಲ್ಲಿ ಅರಿವು ವಸ್ತುವಾದಡೆ, ಬೇರೊಂದು ಕುರುಹೇಕೆ ? ಕೈಯಲ್ಲಿ ಕುರುಹು ಕುರುಹಿಂಗೆ ಬೇಕು. ಅರಿವು ಅರಿವಿಂಗೆ ಬೇಕು. ಅರ್ಕೇಶ್ವರಲಿಂಗವನರಿವುದಕ್ಕೆ ಕುರುಹಿನ ಮರೆಬೇಕು.
--------------
ಮಧುವಯ್ಯ
ನೇತ್ರದಲ್ಲಿ ಕಂಡು, ಶ್ರೋತ್ರದಲ್ಲಿ ಕೇಳಿ, ಗಾತ್ರದಲ್ಲಿ ಮುಟ್ಟಿ, ಚಿತ್ತದಲ್ಲಿ ಒಲಿಸುವಡೆ ಮತ್ತೊಬ್ಬರಲ್ಲಿ ಹೊತ್ತುಹೋರಲೇಕಣ್ಣಾ, ಅರ್ಕೇಶ್ವರಲಿಂಗವನರಿವುದಕ್ಕೆ ?
--------------
ಮಧುವಯ್ಯ