ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಾಕು ಬಹುಮಾತಿನ ಮಾಲೆ. ಸ್ಥಾಣುವ ತಿರುಗುವ ಪಶುವಿನಂತೆ, ವೇಣುವ ಹಿಡಿದ ಶುಕನಂತೆ, ಅದು ಪ್ರಾಣಕ್ಕೆ ಬಂದಾಗ ಅರಿದ ಇರವು. ಭಾಳಲೋಚನರಿಗೆ ಹೀಗಾಯಿತ್ತು. ಅರ್ಕೇಶ್ವರಲಿಂಗವನರಿವರಿನ್ನಾರು ?
--------------
ಮಧುವಯ್ಯ
ಸೂನೆಗಾರನ ಮನೆಯಲ್ಲಿ ಮೂವರು ಹಂದೆಗಳು ಹೊಕ್ಕು, ಹೇಳ ಹೆಸರಿಲ್ಲದೆ ಕೊಂದರೆಲ್ಲರ. ಸೂನೆಗಾರ ಏನೂ ಎನ್ನದೆಯಿದ್ದ, ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಸತ್ತವನ ಮನೆಯಲ್ಲಿ ಹೊತ್ತವರೆಲ್ಲರು ಅಳುತಿರ್ದಾರೆ. ಮತ್ತೊಬ್ಬನ ಮದುವೆಗೆ ದಿಬ್ಬಣಕೆ ಬಂದು, ಮದವಳಿಗನ ಕಾಣದೆ, ಮನೆಮನೆಯ ಹೊಕ್ಕು ಸುತ್ತುತೈದಾರೆ. ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಸಾಧನೆಯಲ್ಲಿ ಬೆಳೆದ ವಿಹಂಗನಂತೆ, ದೀಹವಾದ ಮೃಗದಂತೆ, ಜಾತಿಜಾತಿಯ ಕೊಂದು, ಭೂತಹಿತವುಂಟೆ ? ಸಮಯ ಸಮಯವ ಕೊಂದು, ಬಲ್ಲಹ ಬಲ್ಲವನ ಸೊಲ್ಲು ಒಳ್ಳಿತ್ತಲ್ಲಾಯೆಂದು ಎಲ್ಲರೊಳಗೆ ಹೇಳುವ ಖುಲ್ಲನ ಬಲ್ಲತನವನೊಲ್ಲ, ಅರ್ಕೇಶ್ವರಲಿಂಗ.
--------------
ಮಧುವಯ್ಯ
ಸರ್ಪನಿಪ್ಪುದಕ್ಕೆ ಠಾವಲ್ಲದೆ, ತಪ್ಪಿ ವಿಷ ಹತ್ತಿದ ಮತ್ತೆಗೊತ್ತಿಂಗೆ ನಿಲುವುದೆ ? ಅದರೊಪ್ಪಕ್ಕೆ ಕಡೆಯೆ ಲಿಂಗಸಂಗಸಂಯೋಗ ? ಅರ್ಕೇಶ್ವರಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು.
--------------
ಮಧುವಯ್ಯ