ಅಥವಾ
(61) (3) (3) (0) (0) (0) (0) (0) (1) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (2) (0) (0) (0) (0) (0) (0) (0) (1) (0) (1) (0) (1) (0) (0) (1) (1) (0) (0) (0) (0) (0) (0) (10) (0) (0) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆ ಇಷ್ಟಮಹಾಲಿಂಗವೆ ಅನಾದಿಶರಣನ ಆಧಾರಚಕ್ರದಲ್ಲಿ ನಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಆ ಮಹಾಲಿಂಗವೆ ಸ್ವಾದ್ಥಿಷ್ಠಾನಚಕ್ರದಲ್ಲಿ ಮಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಆ ಮಹಾಲಿಂಗವೆ ಮಣಿಪೂರಕಚಕ್ರದಲ್ಲಿ ಶಿಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಅನಾಹತಚಕ್ರದಲ್ಲಿ ವಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ವಿಶುದ್ಧಿಚಕ್ರದಲ್ಲಿ ಯಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಆಜ್ಞಾಚಕ್ರದಲ್ಲಿ ಓಂಕಾರಮಂತ್ರಮೂರ್ತಿಯಾಗಿ ನೆಲಸಿರ್ಪುರು ನೋಡ! ಬ್ರಹ್ಮರಂಧ್ರದಲ್ಲಿ ಬಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಶಿಖಾಚಕ್ರದಲ್ಲಿ ಕ್ಷಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಪಶ್ಚಿಮಚಕ್ರದಲ್ಲಿ ವ್ಯಂಜನ ಹಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಈ ಪ್ರಕಾರದಿಂದ ಅನಾದಿಶರಣನ ಸರ್ವಾಂಗದಲ್ಲಿ ಕಿಷ್ಕಿಂದಮಯವಾಗಿ ತುಂಬಿಕೊಂಡಿರ್ಪುದು. ಇಂತಪ್ಪ ಪರಂಜ್ಯೋತಿ ಚಿದ್ಘನ ಮಹಾಲಿಂಗ ಪ್ರಮಾಣಿಸಿ ನೋಡೆನೆಂದವರಿಗೆ ಅತ್ಯತಿಷ್ಠದ್ದಶಾಂಗುಲವಾಗಿರ್ಪುದು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಆಚಾರ-ಅರುಹಿನಲ್ಲಿ ಸತ್ಕ್ರಿಯಾಸುಜ್ಞಾನ ಗುರುವ ಸಂಬಂಧವ ಮಾಡಿಕೊಂಡು, ಪಾಣಿ-ಪ್ರಾಣದಲ್ಲಿ ಸತ್ಕ್ರಿಯಾಸುಜ್ಞಾನಲಿಂಗವ ಸಂಬಂಧವ ಮಾಡಿಕೊಂಡು, ಆಚರಣೆ-ಸಂಬಂಧಂಗಳಲ್ಲಿ ಸತ್ಕ್ರಿಯಾಸುಜ್ಞಾನಜಂಗಮವ ಸಂಬಂಧವ ಮಾಡಿಕೊಂಡು, ನಡೆ-ನುಡಿಗಳಲ್ಲಿ ಸತ್ಕ್ರಿಯಾಸುಜ್ಞಾನ ಪಾದೋದಕವ ಸಂಬಂಧವ ಮಾಡಿಕೊಂಡು, ಜಿಹ್ವೆ-ನಾಸಿಕಂಗಳಲ್ಲಿ ಸತ್ಕ್ರಿಯಾಸುಜ್ಞಾನ ಪ್ರಸಾದವ ಸಂಬಂಧವ ಮಾಡಿಕೊಂಡು, ಸರ್ವಾಂಗ-ಸುಮನದಲ್ಲಿ ಸತ್ಕ್ರಿಯಾಸುಜ್ಞಾನ ಚಿದ್ವಿಭೂತಿಯ ಸಂಬಂಧವ ಮಾಡಿಕೊಂಡು, ತತ್ಸ್ಥಾನ-ಚಿದೃಕ್ಕಿನಲ್ಲಿ ಸತ್ಕ್ರಿಯಾಸುಜ್ಞಾನ ಚಿದ್ರುದ್ರಾಕ್ಷಿಯ ಸಂಬಂಧವ ಮಾಡಿಕೊಂಡು, ಕ್ರಿಯಾಕಾಶ-ಜ್ಞಾನಾಕಾಶಂಗಳಲ್ಲಿ ಸತ್ಕ್ರಿಯಾಸುಜ್ಞಾನ ಚಿನ್ಮಂತ್ರವ ಸಂಬಂಧವ ಮಾಡಿಕೊಂಡರು ನೋಡ- ಸೂಕ್ಷ್ಮಕಂಥೆಯ ಧರಿಸಿ, ಸಚ್ಚಿದಾನಂದ ಲೀಲಾಮೂರ್ತಿಗಳಾಗಿ ಇಂತು ಉಭಯ ವಿಚಾರವಿಡಿದು ಆಚರಿಸುವರೆ ಆದಿಸದ್ಭಕ್ತ ಶಿವಶರಣಗಣಂಗಳು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಆ ಮಹಾಲಿಂಗವೆ ಚಿನ್ನಾದಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪರನಾದಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪ್ರಣಮನಾದಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಮಹಾನಾದಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಚಿದ್ಬಿಂದುಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪರಬಿಂದುಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪ್ರಣಮಬಿಂದುಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಮಹಾಬಿಂದುಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಚಿತ್ಕಳಾಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪರಕಳಾಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪ್ರಣಮಕಳಾಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪೂರ್ಣಕಳಾಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಮಹಾಕಳಾಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಗೋಳಕಾಕಾರಪ್ರಣಮಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಅಖಂಡಗೋಳಕಾಕಾರ ಪ್ರಣಮಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಅಖಂಡ ಮಹಾಗೋಳಕಾಕಾರಪ್ರಣಮಮೂರ್ತಿ ನೋಡಯ್ಯ. ಆ ಮಹಾಲಿಂಗದ ಮಹಿಮೆ ಗಣಿತಕ್ಕಗಣಿತ ನೋಡ ! ಆ ಚಿದ್ಘನಮಹಾಲಿಂಗವೆ ಮಂತ್ರಮೂರ್ತಿ ನೋಡ, ಸಂಗನಬಸವೇಶ್ವರ
--------------
ಗುರುಸಿದ್ಧದೇವರು