ಅಥವಾ
(61) (3) (3) (0) (0) (0) (0) (0) (1) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (2) (0) (0) (0) (0) (0) (0) (0) (1) (0) (1) (0) (1) (0) (0) (1) (1) (0) (0) (0) (0) (0) (0) (10) (0) (0) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಮತ್ರ್ಯಲೋಕ ಮೊದಲಾಗಿ ಆವ ಲೋಕದಲ್ಲಿ ಹೋದರು ಸಮಸ್ತಲಿಂಗಭೋಗ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಸಮಸ್ತಲೋಕದಲ್ಲಿ ಸತ್ಯ ಸಾತ್ವಿಕ ಪರೋಪಕಾರ ಸುಗುಣ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಪರಮವಿರಕ್ತಿ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಸಾರಸದ್ಭಕ್ತಿ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಶಮೆ ದಮೆ ಶಾಂತಿ ಸೈರಣೆ ಸತ್ಕ್ರಿಯಾ ಸಮ್ಯಜ್ಞಾನ ಸದಾಚಾರ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ನಿಜಶಿವಯೋಗ ದೊರವುದು ನೋಡ. ಶ್ರೀ ಮಹಾಮಂತ್ರವೆ ಸಕಲಕಾರಣಕ್ಕೆ ಮೂಲಚೈತನ್ಯ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುಲಿಂಗಜಂಗಮದ ಧೂಳಪಾದೋದಕದಿಂದ ಸಮಸ್ತಲೋಕದ ಪ್ರಾಣಿಗಳನೆಲ್ಲವ ಭವತ್ವವಳಿದು ಭೃತ್ಯಭಕ್ತಿಮಾರ್ಗವ ತೋರುವುದಯ್ಯ, ಶ್ರೀಗುರುಲಿಂಗಜಂಗಮದ ದೀಕ್ಷಾಪಾದೋದಕದಿಂದ ಸಮಸ್ತ ಪದಾರ್ಥಂಗಳೆಲ್ಲವ ಶಿವಗಣಪದಕ್ಕೆ ಯೋಗ್ಯವಾಗುವಂತೆ ಮಾಡುವುದಯ್ಯ. ಶ್ರೀಗುರುಲಿಂಗಜಂಗಮದ ಶಿಕ್ಷಾಪಾದೋದಕದಿಂದ ಬ್ರಹ್ಮನ ಉತ್ಪತ್ಯ, ವಿಷ್ಣುವಿನ ಸ್ಥಿತಿ, ರುದ್ರನ ಲಯ, ಈಶ್ವರನ ತಿರೋಧಾನ, ಸದಾಶಿವನ ಅನುಗ್ರಹ ತೊಡದು ಶಿವಶರಣಗಣಂಗಳ ನಿಜನಿವಾಸವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಪಾದೋದಕದಿಂದ ಷಡ್ವಿಧ ದೀಕ್ಷಾತ್ರಯವ ಕರುಣಿಸಿ, ಷಟ್ಸ್ಥಲಮಾರ್ಗವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಸ್ಪರ್ಶನೋದಕ, ಅವಧಾನೋದಕ, ಆಪ್ಯಾಯನೋದಕದಿಂದ ತ್ರಿವಿಧಲಿಂಗಾಂಗ ಸಮರಸದ ಸನ್ಮಾರ್ಗಾಚಾರಕ್ರಿಯಾಜ್ಞಾನವ ತೋರುವುದಯ್ಯ. ಶ್ರಿಗುರುಲಿಂಗಜಂಗಮದ ಹಸ್ತೋದಕ-ಪರಿಣಾಮೋದಕ-ನಿರ್ನಾಮೋದಕದಿಂದ ಷಡ್ವಿಧಲಿಂಗಾಂಗ ಸಮರಸಾಚರಣೆಯ ಮಾರ್ಗದ, ಮೀರಿದ ಕ್ರಿಯಾಜ್ಞಾನವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಸತ್ಯೋದಕ-ಕರುಣಜಲ- ವಿನಯಜಲ-ಸಮತಾಜಲದಿಂದ ಸಮಸ್ತಪ್ರಮಥಗಣಂಗಳೆಲ್ಲ ಜ್ಯೋತಿರ್ಮಯವಾದರು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಮಾರಾಧ್ಯ ಶರಣಗಣಂಗಳಾಚಾರಸಂಪದಕ್ಕೆ ಪರಬ್ರಹ್ಮ ಜ್ಯೋತಿರ್ಮಯವಸ್ತು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುಲಿಂಗಜಂಗಮದ ಚರಣ ಸೋಂಕಿನಿಂ ಪವಿತ್ರವಾದ ಚಿದ್ಭಸಿತವ ಧರಿಸಿದವರಿಗೆ ಬಹುಜನ್ಮ ಪಾಪದೋಷವ ತೊಡವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಅಜ್ಞಾನದ ಪಾಶವ ಹರಿವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಸಮಸ್ತ ಜನವಶ್ಯ ರಾಜವಶ್ಯವ ಕೊಡುವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಸದಾಚಾರ ಸದ್ಭಕ್ತಿಸಾರದುನ್ನತಿಯ ಬೆಳಗ ತೋರುವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಜನನ-ಮರಣದ ಭಯವ ತೊಡವುದಯ್ಯ. ಶಿವನಿಂದ ಅಗಸ್ತ್ಯ, ಕಸ್ಯಪ, ಜಮದಗ್ನಿ, ಗೌತಮ, ವಶಿಷ್ಠ ಮೊದಲಾದ ಋಷಿ ಸಮೂಹಗಳೆಲ್ಲ ಶ್ರೀ ವಿಭೂತಿಯ ಪಡೆದು ಧರಿಸಿ, ಸದ್ಭಕ್ತಿಪಥವ ಸೇರಿದರಯ್ಯ. ನಮ್ಮ ಶರಣಗಣಂಗಳು ಆ ಶಿವನ ಚಿತ್ಕಾಂತಿಯ ಬಹಿಷ್ಕರಿಸಿ, ಶ್ರೀಗುರುಲಿಂಗಜಂಗಮದ ಚಿದ್ಬೆಳಗನೆ ಹೆಪ್ಪಹಾಕಿ, ಚಿದಾಂಡವೆಂಬ ಘಟ್ಟಿಯ ಮಾಡಿ, ನಿಷ್ಕಲ ನಿಶ್ಶೂನ್ಯಮೂರ್ತಿಯ ಚರಣಜಲವ ವೇದ್ಥಿಸಿ, ಮಹಾಮಂತ್ರವ ಸ್ಥಾಪಿಸಿ, ಶ್ರೀಗುರುಲಿಂಗಜಂಗಮದ ಸ್ಪರ್ಶದಿಂದ ತತ್ವಸ್ಥಾನಂಗಳಲ್ಲಿ ಶಿವಲೋಕದ ಶಿವಗಣಂಗಳು, ರುದ್ರಲೋಕದ ರುದ್ರಗಣಂಗಳು, ನಾಗಲೋಕದ ನಾಗಗಣಂಗಳು, ದೇವಲೋಕದ ದೇವಗಣಂಗಳು, ಶಾಂಭವಲೋಕದ ಶಾಂಭವಗಣಂಗಳು, ಮತ್ರ್ಯಲೋಕದ ಮಹಾಗಣಂಗಳೆಲ್ಲ ಧರಿಸಿ ಜ್ಯೋತಿರ್ಮಯವಾದರು ನೋಡ. ಶ್ರೀಗುರುಲಿಂಗಜಂಗಮದ ಚಿತ್ಪ್ರಭಾಭೂತಿಯೆ ಸರ್ವಾಚಾರಸಂಪದಕ್ಕೆ ಮೋಕ್ಷದ ಕಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀ ಮಹಾಚಿನ್ಮಯ ಚಿಂತಾಮಣಿ ಮಂತ್ರಮಾಲಿಕೆಯ ಶ್ರೀಗುರುಲಿಂಗಜಂಗಮದ ಸ್ಪರ್ಶದಿಂದ ಧರಿಸಿದಾತಂಗೆ ಬ್ರಹ್ಮಹತ್ಯ, ಪುಶುಹತ್ಯ, ಶಿಶುಹತ್ಯ, ಸ್ತ್ರೀಹತ್ಯ ಭ್ರೂಣಹತ್ಯ, ಮಾತೃದ್ರೋಹ, ಪಿತೃದ್ರೋಹ ಮೊದಲಾದ ಮಹಾಪರಮಪಾತಕಂಗಳು ದೂರವಾಗುವವಯ್ಯ. ಶ್ರೀ ಮಹಾರುದ್ರಾಕ್ಷಿಯ ಶ್ರೀಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಗಳ ಸಮರ್ಪಿಸಿ, ಅವರ ಕರುಣಕಟಾಕ್ಷ ನಿರ್ಮಾಲ್ಯ ಮಂತ್ರಮಾಲಿಕೆ ಪ್ರಸಾದ ರುದ್ರಾಕ್ಷಿಯ ಬೆಸಗೊಂಡಾತಂಗೆ ಇಹಲೋಕದಲ್ಲಿ ಪರಶಿವಲಿಂಗಭೋಗಿಯಾಗಿ ಪರಲೋಕದಲ್ಲಿ ಪರಶಿವಜಂಗಮದೊಳಗೆ ಐಕ್ಯತ್ವ ದೊರವುದು ನೋಡ. ಶ್ರೀ ಮಹಾರುದ್ರಾಕ್ಷಿಯ ಗುರುವಚನೋಕ್ತಿಯಿಂದ ಅದರಾದಿ ಅಂತ್ಯವ ತಿಳಿದು, ಆಯಾಯ ಸ್ಥಾನಂಗಳಲ್ಲಿ ಆಯಾಯ ಮಂತ್ರಸ್ಮರಣೆಗಳಿಂದ ಆಯಾಯ ಮುಖಗಳ ಆಯಾಯ ವರ್ಣಗಳ ತಿಳಿದು ಹೆರೆಹಿಂಗದೆ ಧರಿಸಿದ ಮಹಾಭಕ್ತಜಂಗಮಶರಣಗಣಂಗಳೆಲ್ಲ ಜ್ಯೋತಿಮಯವಪ್ಪುದು ತಪ್ಪದು ನೋಡ. ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷ ಚಿತ್ಪ್ರಭಾಪುಂಜರಂಜಿತವಾದ ಶ್ರೀ ಮಹಾರುದ್ರಾಕ್ಷಿಯೆ ಪರಮ ಚಿದೈಶ್ವರ್ಯ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಮಂತ್ರಮಣಿಯೆ ಶ್ರೀಮಹದೈಶ್ವರ್ಯ ಸ್ವರೂಪ ನೋಡ. ಶ್ರೀ ಮಹದೈಶ್ವರ್ಯ ಮಹಾರುದ್ರಾಕ್ಷಿಯ ಸಂಗದಿಂದ ಪರಮಚಿದೈಶ್ವರ್ಯ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ಶಿವಗಣಂಗಳ ಭೃತ್ಯಾಚಾರ ಸದ್ಭಕ್ತಿ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಷ್ಕಲಮಹಾಲಿಂಗದ ರತಿಸಂಯೋಗ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ಚತುರ್ವಿಧ, ಷಡ್ವಿಧ, ದಶವಿಧ, ದ್ವಾದಶವಿಧ, ಷೋಡಶ ತೆರದ ಭಕ್ತಿ ಮೊದಲಾಗಿ ನಾಲ್ವತ್ತೆಂಟು ತೆರದ ಸದ್ಭಕ್ತಿ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಜಕೈವಲ್ಯಪದ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಜಮೋಕ್ಷದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ರುದ್ರಲೋಕದ ರುದ್ರಗಣಂಗಳು, ಶಿವಲೋಕದ ಶಿವಗಣಂಗಳು ಶಾಂಭವಲೋಕದ ಶಾಂಭವಗಣಂಗಳು, ನಾಗಲೋಕದ ನಾಗಗಣಂಗಳು, ದೇವಲೋಕದ ದೇವಗಣಂಗಳು, ಮತ್ರ್ಯಲೋಕದ ಮಹಾಗಣಂಗಳು ಪ್ರತ್ಯಕ್ಷವಾಗಿ ಅವರ ಪಾದೋದಕ ಪ್ರಸಾದಕ್ಕೆ ಯೋಗ್ಯವೆಂದೆನಿಸುವುದಯ್ಯ. ಶ್ರೀ ಮಹಾರುದ್ರಾಕ್ಷಿಯೇ ಘನಕ್ಕೆ ಘನ ಮಹದೈಶ್ವರ್ಯ ನೋಡ ಶ್ರೀ ಗುರುಲಿಂಗಜಂಗಮದ ಕರುಣ ಕಟಾಕ್ಷಮಣಿಯೆ ಪರಮಚಿದಾಭರಣ ನೋಡ, ಸಂಗಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಕಾಯದ ಕಾಮವಿಕಾರವಳಿದು ಲಿಂಗಕಾಯವೆನಿಸುವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಮನದ ಮರವೆಯಳಿದು ಲಿಂಗಮನವಾಗುವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಪ್ರಾಣನ ಪ್ರಪಂಚಳಿದು ಲಿಂಗಪ್ರಾಣವೆಂದೆನಿಸುವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಭಾವದ ಭ್ರಮೆಯಳಿದು ಲಿಂಗಭಾವವೆಂದೆನಿಸುವುದಯ್ಯ. ಶ್ರಿ ಮಹಾಮಂತ್ರವ ಜಪಿಸಿದಾತಂಗೆ ಕಾಲ-ಕಾಮ-ಮಾಯಾ-ಮರವೆಗಳೆಲ್ಲ ದಗ್ಧವಾಗಿ ಹೋಗುವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಸತ್ವರಜತಮೋಗುಣವಳಿದು ಸಗುಣ ನಿರ್ಗುಣ ನಿಜಗುಣ ಶಿವಯೋಗ ದೊರವುದಯ್ಯ. ಆ ಮಹಾಮಂತ್ರವ ತೆರಹಿಲ್ಲದೆ ಜಪಿಸಿದ ಭಕ್ತಗಣಂಗಳೆಲ್ಲ ಚಿನ್ನಾದ-ಪರನಾದ-ಮಹಾನಾದಂಗಳ ಮೀರಿ ತೋರುವ ನಿಷ್ಕಲ-ನಿಶ್ಯಬ್ದ-ನಿಷ್ಪ್ರಪಂಚ-ನಿರಾಲಂಬ ಇಷ್ಟ ಮಹಾಚಿದ್ಘನಲಿಂಗದಲ್ಲಿ ಕ್ಷೀರ ಕ್ಷೀರ ಬೆರದಂತೆ ಅವಿರಳಾನಂದದಿಂದ ಬೆರದು ಮಹಾ ಬಯಲಪ್ಪುದು ತಪ್ಪದು ನೋಡ. ಸರ್ವಾಚಾರ ಸಂಪದಕ್ಕೆ ಶ್ರೀ ಮಹಾಮಂತ್ರವೆ ಪರಮಾಮೃತಸುಧೆ ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀ ಗುರುಲಿಂಗಜಂಗಮದ ಪಾದೋದಕದಿಂದ ತನುವಿನ ಜಡತ್ವವಳಿದು ಶಿವಭಕ್ತಿಯ ಪಥವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಇಂದ್ರಿಯಂಗಳ ಜಡತ್ವವಳಿದು ಲಿಂಗೇಂದ್ರಿಯಂಗಳ ಮಾಡುವುದಯ್ಯಾ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಕರಣಂಗಳ ಕಾಮವಿಕಾರವಳಿದು ಲಿಂಗನಡೆ, ಲಿಂಗನುಡಿ, ಲಿಂಗನೋಟ, ಲಿಂಗಕೂಟ, ಲಿಂಗಭೋಗ, ಲಿಂಗಾಚಾರವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಪ್ರಾಣನ ಪ್ರಪಂಚು ಸಂಚಲಗುಣವಳಿದು ಮಂತ್ರಧ್ಯಾನದಲ್ಲಿ ನಿಲಿಸುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಅಜ್ಞಾನದ ಜಡತ್ವವಳಿದು ಸುಜ್ಞಾನಸುಖವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ದುರ್ವರ್ತನೆ ಗುಣವಳಿದು ಸದ್ವರ್ತನೆಗುಣವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ದುರಾಚಾರ ದುರ್ಮಾರ್ಗವ ಹರಿದು ಸರ್ವಾಚಾರ ಸಂಪತ್ತಿನಾಚರಣೆಯ ಮಾರ್ಗವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಬಹುಜನ್ಮದ ಪರಮಪಾತಕದ ಮಹಾಪಾಪವ ತೊಳದು ನಿರ್ಮಲ ಲಿಂಗಶರೀರವೆನಿಸುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಜೀವನ ಜಡತ್ವವಳಿದು ಅಜಡಸ್ವರೂಪವ ಮಾಡಿ, ಗಣ ಸಮ್ಮೇಳನದಲ್ಲಿರಿಸುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಮಲ ಮಾಯಾ ಕರ್ಮಪಾಶವ ಹರಿದು ನಿರ್ಮಲ ನಿರ್ಮಾಯ ನಿಷ್ಕರ್ಮ ಸ್ವರೂಪವ ಮಾಡಿ, ಚಿಜ್ಜ್ಯೋತಿಸ್ವರೂಪವೆಂದೆನಿಸುವುದು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಾತ್ಪರ ದೇವಲೋಕದ ದೇವಗಂಗಾಜಲ, ಶಿವಲೋಕದ ಶಿವಗಂಗಾಜಲ, ಶಾಂಭವಲೋಕದ ಪರಮಗಂಗಾಜಲವಾಗಿ ನೆಲಸಿರ್ಪುದು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ನಿಜವೀರಪರಾಕ್ರಮ ಉಂಟಾಗುವುದಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಪ್ರಮಥಗಣಂಗಳ ಸದ್ಭಕ್ತಿ ದಾಸೋಹ ದೊರವುದಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಸದಾಚಾರ ಲಿಂಗನಡೆ-ಲಿಂಗನುಡಿ ದೊರವುದಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಕಾಲ ಕಾಮರು ಹೊದ್ದಲಮ್ಮರಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಉರಗ ವೃಶ್ಚಿಕ ವ್ಯಾಘ್ರ ಭಲ್ಲೂಕ ಗಜ ಗರುಡ ಸಿಂಹ ಶಾರ್ದೂಲ ಸೋಂಕಲಮ್ಮವಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಕುಷ*ರೋಗ ಮೊದಲಾಗಿ ಸಮಸ್ತವ್ಯಾಧಿಗಳು ಪಾವನಸ್ವರೂಪವಾಗುವವಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಸತ್ಕ್ರಿಯಾ ಸಮ್ಯಜ್ಞಾನದ ಚಿತ್ಕಾಂತಿ ಹೆಚ್ಚುವುದಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಮಹಾಪಾತಕಂಗಳು ಬಿಟ್ಟೋಡುವವಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ರುದ್ರಲೋಕದ ರುದ್ರಗಣಂಗಳೆಲ್ಲ ಶಿಖಿಕರ್ಪೂರ ಬೆರೆದಂತಾದರಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಶಿವಲೋಕದ ಶಿವಗಣಂಗಳೆಲ್ಲ ಕ್ಷೀರ ಕ್ಷೀರ ಬೆರೆದಂತಾದರಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ದೇವಲೋಕದ ಶಿವಗಣಂಗಳು, ನಾಗಲೋಕದ ನಾಗಗಣಂಗಳು, ಶಾಂಭವಲೋಕದ ಶಾಂಭವಗಣಂಗಳೆಲ್ಲ ಜ್ಯೋತಿ ಜ್ಯೋತಿ ಬೆರದಂತಾದರಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದದಿಂದ ಮತ್ರ್ಯಲೋಕದ ಮಹಾಗಣಂಗಳೆಲ್ಲ ನಿಶ್ಚಿಂತ-ನಿಷ್ಕಾಮ-ನಿಷ್ಪ್ರಪಂಚಿಗಳಾಗಿ ಬಯಲು ಬಯಲು ಬೆರೆದಂತಾದರಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿತ್ಯನಿಷ್ಕಲಲಿಂಗ ತಾನೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುಲಿಂಗಜಂಗಮದ ನೋಟಪರುಷ ಪ್ರಸಾದದಿಂದ ಸಮಸ್ತಲೋಕದ ಮನು-ಮುನಿ-ಋಷಿಗಳೆಲ್ಲ ಪರಮ ಸುಖಿಗಳಾದರಯ್ಯ. ಶ್ರೀಗುರುಲಿಂಗಜಂಗಮದ ಹಸ್ತಪರುಷದಿಂದ ಪವಿತ್ರವಾದ ಶುದ್ಧಪ್ರಸಾದದಿಂದ ತನುವಿನ ಕಾಮವಿಕಾರವಳಿವುದಯ್ಯ. ಶ್ರೀಗುರುಲಿಂಗಜಂಗಮದ ಸಿದ್ಧಪ್ರಸಾದದಿಂದ ಮನದಕಾಂಕ್ಷೆ ಹರಿವುದಯ್ಯ, ಶ್ರೀಗುರುಲಿಂಗಜಂಗಮದ ಪ್ರಸಿದ್ಧ ಪ್ರಸಾದದಿಂದ ಭಾವದ ಭ್ರಮೆಯಳಿದು ಕೆಡುವುದಯ್ಯ. ಶ್ರೀಗುರುಲಿಂಗಜಂಗಮದ ಪ್ರಸಾದಿ ಪ್ರಸಾದದಿಂದ ಪ್ರಾಣನ ಪ್ರಪಂಚು ನಷ್ಟವಾಗುವುದಯ್ಯ. ಶ್ರೀಗುರುಲಿಂಗಜಂಗಮದ ಘನಾಪ್ಯಾಯನ ಪ್ರಸಾದದಿಂದ ಇಂದ್ರಿಯಂಗಳೆಲ್ಲ ಲಿಂಗೇಂದ್ರಿಯಂಗಳಾಗುವವಯ್ಯ. ಶ್ರೀಗುರುಲಿಂಗಜಂಗಮದ ಸಮಯಪ್ರಸಾದದಿಂದ ವಿಷಯಂಗಳೆಲ್ಲ ಲಿಂಗವಿಷಯಂಗಳಾಗುವವಯ್ಯ. ಶ್ರೀಗುರುಲಿಂಗಜಂಗಮದ ಪಂಚೇಂದ್ರಿಯವಿರಹಿತಪ್ರಸಾದದಿಂದ ಕರಣಂಗಳೆಲ್ಲ ಲಿಂಗಕರಣಂಗಳಾಗುವವಯ್ಯ. ಶ್ರೀಗುರುಲಿಂಗಜಂಗಮದ ಕರಣಚತುಷ್ಟಯವಿರಹಿತಪ್ರಸಾದ, ಸಮತಾಪ್ರಸಾದ, ಸದ್ಭಾವಪ್ರಸಾದ, ಜ್ಞಾನಪ್ರಸಾದದಿಂದ ಸರ್ವಸಂಗ ಪರಿತ್ಯಾಗರಾಗಿ, ಬಯಲನೆ ಹಾಸಿ, ಬಯಲನೆ ಹೊದ್ದು, ಬಯಲನೆ ಅರ್ಚಿಸಿ, ಬಯಲನೆ ಭೋಗಿಸಿ ಬಸವ ಮೊದಲಾದ ಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಪರಮಾಮೃತಸುಧೆ ಜ್ಯೋತಿರ್ಮಯಲಿಂಗ ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುವಿನ ಕರ ಕಂಗಳು ಹೃದಯಮಧ್ಯದಲ್ಲಿ ಉದಯವಾದ ಇಷ್ಟಮಹಾಲಿಂಗವೆ ಪರಮಪಾವನವಯ್ಯ. ಆ ಮಹಾಲಿಂಗವೆ ಪರಮಪ್ರಕಾಶವಯ್ಯ. ಆ ಮಹಾಲಿಂಗವೆ ಪರಂಜ್ಯೋತಿಸ್ವರೂಪನಯ್ಯ. ಆ ಮಹಾಲಿಂಗವೆ ಪರತತ್ವಬ್ರಹ್ಮವಯ್ಯ. ಆ ಮಹಾಲಿಂಗವೆ ಪರಮಾಚಾರಸ್ವರೂಪನಯ್ಯ. ಆ ಮಹಾಲಿಂಗವೆ ಪರಮನಿಷ್ಕಳಂಕನಯ್ಯ. ಆ ಮಹಾಲಿಂಗವೆ ಚಿದ್ಘನವಸ್ತುವಯ್ಯ. ಆ ಮಹಾಲಿಂಗವೆ ಚಿನ್ಮಯಸ್ವರೂಪನಯ್ಯ ಆ ಮಹಾಲಿಂಗವೆ ಚಿದಾನಂದಮೂರ್ತಿಯಯ್ಯ ಆ ಮಹಾಲಿಂಗವೆ ಚಿತ್ಪ್ರಕಾಶಮೂರ್ತಿಯಯ್ಯ. ಆ ಮಹಾಲಿಂಗವೆ ಚಿದ್ರೂಪಮೂರ್ತಿಯಯ್ಯ. ಆ ಮಹಾಲಿಂಗವೆ ಸಹಜಸನ್ಮಾರ್ಗಸ್ವರೂಪನಯ್ಯ. ಆ ಮಹಾಲಿಂಗವೆ ಸತ್ತುಚಿತ್ತಾನಂದಮೂರ್ತಿಯಯ್ಯ. ಆ ಮಹಾಲಿಂಗವೆ ಸರ್ವಸಾಕ್ಷಿಕಮೂರ್ತಿಯಯ್ಯ. ಆ ಮಹಾಲಿಂಗವೆ ಸರ್ವಚೈತನ್ಯಮೂರ್ತಿಯಯ್ಯ. ಆ ಮಹಾಲಿಂಗವೆ ಸರ್ವಾಂತರ್ಯಾಮಿ ನೋಡ! ಇಷ್ಟಮಹಾಚಿದ್ಘನಲಿಂಗವೆ ಸರ್ವತತ್ವಂಗಳಿಗೆ ಮೂಲಾಧಾರಮೂರ್ತಿ ನೋಡ, ಸಂಗನಬಸವೇಶ್ವರ
--------------
ಗುರುಸಿದ್ಧದೇವರು