ಅಥವಾ
(61) (3) (3) (0) (0) (0) (0) (0) (1) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (2) (0) (0) (0) (0) (0) (0) (0) (1) (0) (1) (0) (1) (0) (0) (1) (1) (0) (0) (0) (0) (0) (0) (10) (0) (0) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಳಿಕಾದೇವಿ, ಚಾಮುಂಡಿ, ಗಂಗೆ ಗೌರಿ, ಬನಶಂಕರಿ, ಎಲ್ಲಿ, ಏಕಲಾತಿ, ಹುಲಗಿ, ಹೊಸೂರಿ, ಸತ್ತವರು, ಹೆತ್ತವರು ಇಂತೀ ಹಲವು ಪಿಶಾಚಿಗಳ ಹೆಸರಿಂದ ಇದಿರಿಟ್ಟು ಆರಾಧಿಸಿ, ಅದರ ನೈವೇದ್ಯವೆಂದು ಶ್ರೀಗುರುವಿತ್ತ ಲಿಂಗಕ್ಕೆ ತೋರಿ ಭುಂಜಿಸುವ ಶಿವದ್ರೋಹಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ ಕಾಣಾ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಕಿಂಕರತ್ವದಿಂದ ಬಹುಜನ್ಮದ ಪಾಪದಲತೆ ಕಡಿವುದಯ್ಯ. ಕಿಂಕರತ್ವದಿಂದ ಬಹುಜನ್ಮದ ನಿಂದ್ಯಕುಂದ್ಯಗಳು ಹರಿದು ಹೋಗುವವಯ್ಯ. ಕಿಂಕರತ್ವದಿಂದ ಬಹುಜನ್ಮದ ಭ್ರೂಣಹತ್ಯ ಮೊದಲಾಗಿ ಮಹಾದ್ರೋಹಂಗಳು ದಗ್ಧವಾಗುವವಯ್ಯ. ಕಿಂಕರತ್ವದಿಂದ ಮಹಾಪದವಾಗುವುದಯ್ಯ. ಕಿಂಕರತ್ವದಿಂದ ಮಹಾಪಾಪದಗ್ಧವಾಗುವುದಯ್ಯ. ಕಿಂಕರತ್ವದಿಂದ ಸತ್ಕಾಯಕ ದೊರವುದಯ್ಯ. ಕಿಂಕರತ್ವದಿಂದ ಸತ್ಯರ ಸಂಗದೊರವುದಯ್ಯ. ಕಿಂಕರತ್ವದಿಂದ ಬಹುರಾಜಮನ್ನಣೆಯಾಗುವುದಯ್ಯ. ಕಿಂಕರತ್ವದಿಂದ ಅಷ್ಟಾವರಣ ಪ್ರತ್ಯಕ್ಷವಾಗುವುದಯ್ಯ. ಕಿಂಕರತ್ವದಿಂದ ಪಂಚಪರುಷ ದೊರವುದಯ್ಯ. ಕಿಂಕರತ್ವದಿಂದ ನಡೆನುಡಿ ಶುದ್ಧಸಿದ್ಧವಾಗುವುದಯ್ಯ. ಕಿಂಕರತ್ವದಿಂದ ಸಮಸ್ತರು ಗಣಪದಕ್ಕೆ ಯೋಗ್ಯವಾದರು ನೋಡ. ಕಿಂಕರನೆ ಸದ್ಗುರುಶಂಕರ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು