ಅಥವಾ
(61) (3) (3) (0) (0) (0) (0) (0) (1) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (2) (0) (0) (0) (0) (0) (0) (0) (1) (0) (1) (0) (1) (0) (0) (1) (1) (0) (0) (0) (0) (0) (0) (10) (0) (0) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುವೆ ಸುಜ್ಞಾನಮೂರ್ತಿಯಯ್ಯ. ಗುರುವೆ ಮಹಾಜ್ಞಾನಮೂರ್ತಿಯಯ್ಯ. ಗುರುವೆ ಪರಿಪೂರ್ಣಜ್ಞಾನಮೂರ್ತಿಯಯ್ಯ. ಗುರುವೆ ಅಂತರಂಗಪರಿಪೂರ್ಣನಯ್ಯ. ಗುರುವೆ ಬಹಿರಂಗಪರಿಪೂರ್ಣನಯ್ಯ. ಗುರುವೆ ಮಾಯಾರಹಿತನಯ್ಯ. ಗುರುವೆ ನಿತ್ಯತೃಪ್ತನಯ್ಯ. ಗುರುವೆ ಆದಿಮಧ್ಯಾಂತರಹಿತನಯ್ಯ. ಗುರುವೆ ಭವರೋಗವೈದ್ಯನಯ್ಯ. ಗುರುವೆ ಸಕಲಶಾಸ್ತ್ರಾತೀತನಯ್ಯ. ಗುರುವೆ ನಿಜಾನಂದಮೂರ್ತಿಯಯ್ಯ. ಗುರುವೆ ಪರತರಪರಬ್ರಹ್ಮವಯ್ಯ. ಗುರುಭಕ್ತಿಯಿಂದ ಮಿಗಿಲು ಸುಖವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಮೋಕ್ಷವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ನಿಜವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಐಶ್ವರ್ಯವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಪರಿಣಾಮವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಕೈವಲ್ಯವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಧರ್ಮವಿಲ್ಲವಯ್ಯ. ಗುರುಭಕ್ತಿಯಿಂದ ಮಿಗಿಲು ಪುಣ್ಯವಿಲ್ಲವಯ್ಯ. ಗುರುಭಕ್ತಿಯಿಂದ ಗುರುಭಕ್ತಯ್ಯ ಮೊದಲಾದವರು ನಿಜನೈಷೆ*ಯಿಂದ ಸಮರಸೈಕ್ಯರಾದರಯ್ಯ. ಗುರುವಿನಿಂದಧಿಕ ಪರವಿಲ್ಲ ನೋಡ! ಸಮಸ್ತ ಪದಕ್ಕೆ ಶ್ರೀಗುರುವೆ ಕಾರಣ ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಗುರುವೆ ಸರ್ವಲೋಕಜನಕನಯ್ಯ. ಗುರುವೆ ಸರ್ವಲೋಕ ಜನನಿಯಯ್ಯ. ಗುರುವೆ ಸಮಸ್ತ ಕುಟುಂಬಿಯಯ್ಯ. ಗುರುವೆ ಸ್ವತಂತ್ರನಯ್ಯ. ಗುರುವೆ ಘನಮಹಿಮನಯ್ಯ. ಗುರುವೆ ಮುಕ್ತಿಗೆ ಮೂಲಾಧಾರನಯ್ಯ. ಗುರುವೆ ಸುರಚಿರಭೇದ್ಯನಯ್ಯ. ಗುರುವೆ ಸತ್ಕ್ರಿಯಾಜ್ಞಾನಕ್ಕೆ ಮಂದಿರನಯ್ಯ. ಗುರುವೆ ಕಾಲಹರನಯ್ಯ. ಗುರುವೆ ಕರ್ಮಹರನಯ್ಯ. ಗುರುವೆ ದುರಿತಹರನಯ್ಯ. ಗುರುವೆ ಪಾಪಹರನಯ್ಯ. ಗುರುವೆ ದೀಕ್ಷಾಕಾರಣನಯ್ಯ. ಗುರುವೆ ಶೀಕ್ಷಾಕಾರಣನಯ್ಯ. ಗುರುವೆ ಮೋಕ್ಷಕಾರಣನಯ್ಯ. ಗುರುವೆ ಪರಮಾಮೃತ ಸುಧಾರಸನಯ್ಯ. ಗುರುವೆ ಭಕ್ತಿಗೆ ಬೀಜಾಂಕುರನಯ್ಯ. ಗುರುವೆ ಅನಾಚಾರಸಂಹಾರನಯ್ಯ. ಗುರುವೆ ದುಷ್ಟನಿಗ್ರಹನಯ್ಯ. ಗುರುವೆ ಶಿಷ್ಟಪ್ರತಿಪಾದಕನಯ್ಯ. ಗುರುವೆ ಸ್ತುತಿನಿಂದ್ಯರಹಿತನಯ್ಯ. ಗುರುವೆ ಅಪ್ರಮಾಣನಯ್ಯ. ಗುರುವೆ ಅಗಮ್ಯನಯ್ಯ; ಗುರುವೆ ಅಗೋಚರನಯ್ಯ. ಗುರುವೆ ಕಾಮಧೇನು - ಕಲ್ಪವೃಕ್ಷ ನೋಡ ! ಗುರುವಿನಿಂದ ಪೆರತೊಂದಧಿಕ ವಸ್ತುವಿಲ್ಲ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು