ಅಥವಾ
(61) (3) (3) (0) (0) (0) (0) (0) (1) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (2) (0) (0) (0) (0) (0) (0) (0) (1) (0) (1) (0) (1) (0) (0) (1) (1) (0) (0) (0) (0) (0) (0) (10) (0) (0) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಂಗಮವೆ ಮಹಾರುದ್ರಸ್ವರೂಪ ನೋಡಯ್ಯ. ಜಂಗಮವೆ ಪರಮಪಾವನ ಕರ್ತ ನೋಡಯ್ಯ. ಜಂಗಮವೆ ಷಟ್ಸ್ಥಲಬ್ರಹ್ಮ ನೋಡಯ್ಯ. ಜಂಗಮವೆ ಶರಣಚಿಂತಾಮಣಿ ಸಂಜೀವನ ನೋಡಯ್ಯ. ಜಂಗಮವೆ ಭವರೋಗವೈದ್ಯ ನೋಡಯ್ಯ ಜಂಗಮವೆ ಸಕಲೈಶ್ವರ್ಯ ನೋಡಯ್ಯ. ಜಂಗಮವೆ ಸಮರಸ ಸುಖಭೋಗಮೂರ್ತಿ ನೋಡಯ್ಯ. ಜಂಗಮವೆ ಕಾಯಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಇಂದ್ರಿಯಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಪ್ರಾಣಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಸರ್ವಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಪಾಪಪುಣ್ಯ ದೋಷರಹಿತ ನೋಡಯ್ಯ. ಜಂಗಮವೆ ಪರಿಪೂರ್ಣಚಿದೈಶ್ವರ್ಯ ನೋಡಯ್ಯಾ. ಜಂಗಮವೆ ನಿತ್ಯತ್ವಮೂರ್ತಿ ನೋಡಯ್ಯಾ. ಜಂಗಮವೆ ಜಯಮಂಗಳಸ್ವರೂಪ ನೋಡಯ್ಯ. ಜಂಗಮವೆ ಶುಭಮಂಗಳ ಸ್ವರೂಪ ನೋಡಯ್ಯ. ಜಂಗಮವೆ ಪಾವನಮೂರ್ತಿ ನೋಡಯ್ಯ. ಜಂಗಮವೆ ಪರುಷದ ಕಣಿ ನೋಡಯ್ಯ. ಜಂಗಮವೆ ನಿಜವಸ್ತು ನೋಡಯ್ಯ. ಜಂಗಮವೆ ಚಿತ್ಕಾರಣಾವತರ್ಯಮೂರ್ತಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಜಂಗಮವೆ ಮಂತ್ರಮೂರ್ತಿ ನೋಡಯ್ಯ. ಜಂಗಮವೆ ಮೂಲಪ್ರಣವಸ್ವರೂಪಮೂರ್ತಿ ನೋಡಯ್ಯ. ಜಂಗಮವೆ ತ್ರಿಯಾಕ್ಷರ-ಪಂಚಾಕ್ಷರ-ಷಡಕ್ಷರಂಗಳಿಗೆ ಮೂಲಾಧಾರಮೂರ್ತಿ ನೋಡಯ್ಯ. ಜಂಗಮವೆ ಸಪ್ತಕೋಟಿ ಮಹಾಮಂತ್ರಂಗಳಿಗೆ ಜನನಿಜನಕ ನೋಡಯ್ಯ. ಜಂಗಮವೆ ಆದಿಪುರಾತನಗಣ ತಿಂಥಿಣಿಗೆ ಪರಮಾಮೃತಸುಧೆ ನೋಡಯ್ಯ. ಜಂಗಮವೆ ಅನಾದಿ ಪುರಾತನಗಣಸಮೂಹಕ್ಕೆ ಮಹಾಪರುಷಸ್ವರೂಪ ನೋಡಯ್ಯ. ಜಂಗಮವೆ ನೂತನ ಪುರಾತನ ಗಣಂಗಳಿಗೆ ಮಹಾಕಲ್ಯಾಣಸ್ವರೂಪ ನೋಡಯ್ಯ. ಜಂಗಮವೆ ಶಿವಲಾಂಛನ ಪಂಚಮುದ್ರಾಂಕಿತ ನೋಡಯ್ಯ. ಜಂಗಮವೆ ಕೃಪಾಸಮುದ್ರ ನೋಡಯ್ಯ. ಜಂಗಮವೆ ಬತ್ತೀಸ ಕಳಾಭರಿತಮೂರ್ತಿ ನೋಡಯ್ಯ. ಜಂಗಮವೆ ಷಡ್ವಿಧಶೀಲವ್ರತಾಚಾರಪೂರಿತ ನೋಡಯ್ಯ. ಜಂಗಮವೆ ಬಸವ ಚನ್ನಬಸವ ನೀಲಲೋಚನೆ ಅಕ್ಕಮಹಾದೇವಿ ಮೊದಲಾದ ಪ್ರಮಥಗಣಂಗಳ ಪ್ರಾಣಲಿಂಗಮೂರ್ತಿ ನೋಡಯ್ಯ. ಜಂಗಮವೆ ದಿಗಂಬರ ನಿರಾವಯಮೂರ್ತಿ ನೋಡಯ್ಯ. ಜಂಗಮವೆ ನಿಷ್ಪ್ರಪಂಚ ನಿರಾಲಂಬ ನಿರ್ಗುಣ ನಿರಾತಂಕ ನಿಶ್ಚಿಂತ ನಿಷ್ಕಾಮ ನಿಶ್ಶೂನ್ಯ ನಿರಂಗ ನಿರಂಜನಮೂರ್ತಿ ಪರಮಾನಂದ ಪರಿಪೂರ್ಣ ಮಹಾಂತ ತಾನೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು