ಅಥವಾ
(6) (13) (1) (2) (0) (0) (0) (0) (0) (0) (0) (3) (0) (0) ಅಂ (1) ಅಃ (1) (1) (0) (2) (1) (0) (2) (0) (1) (0) (0) (0) (0) (0) (0) (0) (6) (0) (1) (0) (4) (5) (0) (5) (2) (3) (0) (2) (0) (0) (0) (3) (0) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿತ್ತೆಂಬೊ ಬಿತ್ತುವಡೆದು, ಕಳೆಯೆಂಬೋ ಮೊಳಕೆ ಹುಟ್ಟಿ, ಮಾಯವೆಂಬೋ ವೃಕ್ಷವಾಯಿತ್ತು. ಆ ವೃಕ್ಷದಲ್ಲಿ ಹಲವು ಶಾಖೆ, ಹಲವು ಎಲೆ, ಹಲವು ಪುಷ್ಪ, ಹಲವು ಕಾಯಿ, ಹಲವು ಸವಿ, ಹಲವು ಬೀಜ, ಹಲವು ಫಲವಾಯಿತಲ್ಲದೆ, ನಾನೆಂಬುದೇನು ? ನೀನೆಂಬುದೇನು ? ತಾನೆಂಬುದೇನು ? ಏನೆಂಬುದೇನು ? ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಚಿತ್ಪ್ರಕಾಶವು ತಾನೆ ತನ್ನ ಲೀಲಾವಿಲಾಸಕ್ಕೆ ತಾನೇ ಮೇರುಪರ್ವತಾದಿ ಬ್ರಹ್ಮಾಂಡ ಪಿಂಡಾಂಡ ಸಕಲ ಚರಾಚರ ದೇವ ಮಾನವ ದಾನವ ಸದಾಶಿವ ಪರಮಾತ್ಮರೆಂಬ ತೋರಿಕೆಯೆಲ್ಲಾ ನೀನಾದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ,
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ