ಅಥವಾ
(6) (13) (1) (2) (0) (0) (0) (0) (0) (0) (0) (3) (0) (0) ಅಂ (1) ಅಃ (1) (1) (0) (2) (1) (0) (2) (0) (1) (0) (0) (0) (0) (0) (0) (0) (6) (0) (1) (0) (4) (5) (0) (5) (2) (3) (0) (2) (0) (0) (0) (3) (0) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೊದಲೇ ಭಕ್ತ ತನುವಕೊಟ್ಟು, ಮನವಕೊಟ್ಟು, ಧನವಕೊಟ್ಟು, ಸತಿಸುತಪಿತರಾದಿಯಾದ ಸರ್ವವಕೊಟ್ಟು, ಕೊಂಡುದ ಕಡೆಗಿಟ್ಟು ನಿತ್ಯತ್ವ ಕೆಟ್ಟು ಸತ್ತು ಸತ್ತು ಹೋಯಿತ್ತು-ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಮಾಯೆ ಹುಟ್ಟಿ ಮಾಯೆ ಬೆಳೆದು ಮಾಯೆ ಸತ್ತು ಹೋಯಿತ್ತಲ್ಲಾ. ಆ ಮಾಯೆಗೆ ನೋವೇನು ? ಸರ್ವವೂ ಮಾಯೆಯೇ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಮಾಯ ಛಾಯ ಏನೂ ಇಲ್ಲದಂದು, ಕಾಲ ಕಲ್ಪಿತ ಏನೂ ಇಲ್ಲದಂದು, ಬ್ರಹ್ಮಾಂಡ ಪಿಂಡಾಂಡ ಏನೂ ಇಲ್ಲದಂದು, ಸ್ವಯಂಲೀಲಾ ಸಂಪರ್ಕಶಕ್ತಿ ಸೋಹಂಭಾವವಿಲ್ಲದೆ ತಾನೆಂಬೊ ಮಹಾಂತನಾಗಿರ್ದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ