ಅಥವಾ
(6) (13) (1) (2) (0) (0) (0) (0) (0) (0) (0) (3) (0) (0) ಅಂ (1) ಅಃ (1) (1) (0) (2) (1) (0) (2) (0) (1) (0) (0) (0) (0) (0) (0) (0) (6) (0) (1) (0) (4) (5) (0) (5) (2) (3) (0) (2) (0) (0) (0) (3) (0) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪರಶಿವನ ಷಟ್‍ಕಾಯದೊಳಗೆ ತೋರಿದಾ ಆರಾರು ಆರು ಹನ್ನೆರಡು ನೂರಾಯೆಂಟು ತತ್ವವಾಯಿತು. ಈ ನೂರಾಯೆಂಟರೊಳಗೆ ಸಹಸ್ರ ಲಕ್ಷ ಕೋಟಿ ಶಂಖ ಪದ್ಮ ಅರ್ಬುದ ಅನಂತ ಅಗಣಿತ ಅಗಮ್ಯ ಅಗೋಚರ ಅಪ್ರಮಾಣಿತ ಅತೀತ ಅಣೋರಣೀಯಾನ್ ಮಹತೋ ಮಹೀಯಾನ್ ಏನೋ ಎನೋ ಎನಿಸಿದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಪರಶಿವನ ನಿಶ್ಶೂನ್ಯಕಾಯವಾದ ಮುಕ್ತಿನಿರ್ಭಾವವೆನಿಸಿದ ನಿಃಕಳಂಕ ನಿಃಶಂಖ ನಿಃಕಾಮ ನಿಸ್ಸೀಮ ನಿರಾಭಾವ ನಿರಾಕಾರ ನಿರ್ಭೇದ್ಯ ನಿರ್ವೇದ್ಯ ನಿಸ್ಸಾರ ನಿರಾಧಾರ ನಿಃಕಲ ನಿರುಪಮ -ಇವು ಹನ್ನೆರಡು ನಿರ್ಬಯಲುತ್ಪತ್ಯ, ನಿರ್ಬೈಲ ಸ್ಥಿತಿ, ನಿರ್ಬಯಲೆ ನಿರ್ಬಯಲೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಪರಶಿವನ ಮಹಾಕಾರಣಕಾಯವಾದ ಶಿಷ್ಯನ ಮನವೆನಿಸಿದ ಸವೇಂದ್ರಿ ಸರ್ವಕರಣ ಸರ್ವನಾಮಕಾಮ ಸರ್ವಮೋಹ ಸರ್ವ ಆಶೆ ಸರ್ವಸುಖ ಸರ್ವದುಃಖ ಸರ್ವಪಾಪ ಸರ್ವಪುಣ್ಯ ಸರ್ವಚಿಂತೆ ಸರ್ವಗುಣ ಸರ್ವಾದಿ ಸರ್ವವ್ಯಸನಂಗಳು- ಇವು ಹನ್ನೆರಡು ಮರವೋತ್ಪತ್ತಿ, ಮರವೇ ಸ್ಥಿತಿ, ಮರವೇ ಮರವೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಪುಣ್ಯವಿಷ್ಟು, ಪಾಪವಿಷ್ಟು, ಕರ್ಮವಿಷ್ಟು, ಧರ್ಮವಿಷ್ಟು, ಶೀಲವಿಷ್ಟು, ದುಶ್ಶೀಲವಿಷ್ಟು, ಸಜ್ಜನಸಂಗವಿಷ್ಟು, ದುರ್ಜನರಸಂಗವಿಷ್ಟು, ಹಿತವಿಷ್ಟು, ಅಹಿತವಿಷ್ಟು, ಸ್ತುತಿಯಿಷ್ಟು, ನಿಂದ್ಯವಿಷ್ಟು, ಅಜ್ಞಾನವಿಷ್ಟು, ಸುಜ್ಞಾನವಿಷ್ಟು, ಚಿಂತಿಯಿಷ್ಟು, ಸಂತೋಷವಿಷ್ಟು, ಮೋಹವಿಷ್ಟು, ನಿರ್ಮೋಹವಿಷ್ಟು, ಆಶೆಯಿಷ್ಟು, ವೈರಾಗ್ಯವಿಷ್ಟು, ಅಹಂಕಾರವಿಷ್ಟು, ನಿರಹಂಕಾರವಿಷ್ಟು, ಕ್ರೋಧವಿಷ್ಟು, ಶಾಂತಿಯಿಷ್ಟು, ಯೋಗವಿಷ್ಟು, ಭೋಗವಿಷ್ಟು, ಲಬ್ಧವಿಷ್ಟು, ಹೇಯವಿಷ್ಟು-ಉತ್ತಮ, ಮಧ್ಯಮ, ಕನಿಷ*ವೆಂಬ ಮೂರರೊಳಗೆ ಒಂದೂ ನಿಜವಿಲ್ಲದೆ ಬಡಯೆತ್ತಿನ ಮುಕಳ್ಯಾಗ ಶಗಣಿ ಸಿಕ್ಕಂತೆ ಬಹುಗುಣಿಯಾಗಿ ಬೆಲ್ಲ ಬೇವು ಕಲಸಿ ಸವಿದಂತೆ ವ್ಯರ್ಥವಾಗಿ ಹೋಯಿತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಪರಶಿವನ ಶೂನ್ಯಕಾಯವಾದ ಮಂತ್ರಜ್ಞಾನವೆನಿಸಿದ ಅರವು ಮಹದರವು ನಿಜಜ್ಞಾನ ಬ್ರಹ್ಮಜ್ಞಾನ ಅಖಂಡಜ್ಞಾನ ಮಹಾಜ್ಞಾನ ಆತ್ಮಜ್ಞಾನ ತತ್ವಜ್ಞಾನ ಶೃತಿಜ್ಞಾನ ಸಮ್ಯಜ್ಞಾನ ಮತಿಜ್ಞಾನ ಮನೋಜ್ಞಾನ -ಇವು ಹನ್ನೆರಡು ಬೆರಗುತ್ಪತ್ಯ, ಬೆರಗು ಸ್ಥಿತಿ, ಬೆರಗೇ ಬೆರಗೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ