ಗ ಪದದಿಂದ ಪ್ರಾರಂಭವಾಗುವ ವಚನಗಳು:
ಗಂಧ ಪುಷ್ಪದಂತೆ, ಚಂದನ ಲೀಲೆಯಂತೆಕಂಜ ಕಿರಣದಂತೆ, ಬಿಂದು ಸಸಿಯಂತೆಹಿಂಗದಿರಬೇಕು ಅಂಗಲಿಂಗಸಂಬಂಧ,ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
ಗುಳಿ ನುಂಗಿದ ಸ್ಥಾಣುವಿನಂತೆ, ಬಲವ ನುಂಗಿದ ರತಿಯಂತೆಗತಿಯ ನುಂಗಿದ ನಾದದಂತೆರೂಪು ಭಾವಕ್ಕೆ ಎರವಿಲ್ಲದಂತಾಗಬೇಕುಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.