ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾನಾ ರಸಂಗಳಲ್ಲಿ ಅರಿದ ಕಿಸಲಯ ಒಂದರಲ್ಲಿ ನಿಂದುದಿಲ್ಲ. ಸಂದಿಲ್ಲದ ಸವಿಯನರಿವುದು. ಅದೊಂದೆ ಭೇದ ಸಂದಿತ್ತು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಸ್ಥಲ ಏಕೀಕರವಾಯಿತ್ತು.
--------------
ಬಿಬ್ಬಿ ಬಾಚಯ್ಯ
ನಾನಾ ವೇಷವ ತೊಟ್ಟು ಆಡುವನಂತೆ ಬಹುರೂಪು ಬೇರಲ್ಲದೆ ಆಡುವ ತಾನೊಬ್ಬನೆ, ಎಲ್ಲಿ ಅರ್ಪಿತ ಮುಖ, ಅಲ್ಲಿಯೂ ನೀನೇ ಏಣಾಂಕಧರ ಸೋಮೇಶ್ವರಲಿಂಗವೆ.
--------------
ಬಿಬ್ಬಿ ಬಾಚಯ್ಯ
ನಾಲಗೆಯ ಹಿಡಿದು ನುಡಿಯಬಹುದೆ ಅಯ್ಯಾ ? ಕೈ ಸಿಕ್ಕಿದಲ್ಲಿ ಓಡಬಹುದೆ ಅಯ್ಯಾ ? ಕ್ರೀಯ ಮರೆದು ಅರಿವನರಿಯಬಹುದೆ ಅಯ್ಯಾ ? ಕುಸುಮವ ಬಿಟ್ಟು ಗಂಧವ ಮುಡಿಯಬಹುದೆ ಅಯ್ಯಾ ? ಇಂತೀ ಉಭಯವನರಿತಡೆ ಪ್ರಾಣಲಿಂಗಯೋಗ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ನೊಣ ಲೋಕವ ನುಂಗಿ, ತ್ರಿಣಯನನ ಗುಂಗುರು ಕೊಂದು, ಗುಂಗುರು ಗಾಳಿಯಲ್ಲಿ ನೊಂದಿತ್ತು. ಗಾಳಿ ಘಟ ಹೇಳದೆ ಹೋಯಿತ್ತು, ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ.
--------------
ಬಿಬ್ಬಿ ಬಾಚಯ್ಯ
ನಿರ್ಮಲಜಲ ಪಂಕವ ಬೆರಸಿದಲ್ಲಿ ತನ್ನಯ ಸಾರದಿಂದ ಕೆಸರಹ ಹಾಂಗೆ ಅದು ಅರಿಯೆ ಮುನ್ನಿನಂತೆ ಅರಿವು ನಿಂದು ಕುರುಹಾಯಿತ್ತು. ಪಂಕವಾರಿಯಂತೆ ಏಣಾಂಕಧರ ಸೋಮೇಶ್ವರಲಿಂಗವ ಭಾವಿಸಬೇಕು.
--------------
ಬಿಬ್ಬಿ ಬಾಚಯ್ಯ