ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತನ ಭಕ್ತಿಭಾವ, ಮಾಹೇಶ್ವರನ ಮಾಹೇಶ್ವರಭಾವ. ಪ್ರಸಾದಿಯ ಪ್ರಸಾದಭಾವ, ಪ್ರಾಣಲಿಂಗಿಯ ಪ್ರಾಣಲಿಂಗಭಾವ. ಶರಣನ ಸನ್ನದ್ಧಭಾವ, ಐಕ್ಯನ ಐಕ್ಯಭಾವ. ಇಂತೀ ದ್ವಾದಶಸ್ಥಲಂಗಳಲ್ಲಿ ಸಾಗಿಸಿ ನಿಂದ ಅನಾಗತಸಿದ್ಧ ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಉಭಯಭಾವ ಭಿನ್ನವಿಲ್ಲದ ಶರಣಂಗೆ.
--------------
ಬಿಬ್ಬಿ ಬಾಚಯ್ಯ
ಭ್ರಾಂತಳಿದು ನಿಂದಲ್ಲಿ ಅರ್ಚನೆ, ವಿಕಾರವಳಿದಲ್ಲಿ ಪೂಜೆ, ಸಮತೆ ನಿಂದಲ್ಲಿ ನೈವೇದ್ಯ. ಸಕಲವನರಿದು ಮರೆದಲ್ಲಿ ಪರಿಪೂರ್ಣ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ