ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮನಕ್ಕೆ ಸಾಹಿತ್ಯವಾದಲ್ಲದೆ, ಕಾಯಕ್ಕೆ ಸಾಹಿತ್ಯವಾಗಬಾರದು. ಆತ್ಮ ಘಟದಲ್ಲಿ ನಿಂದಲ್ಲದೆ, ಚೇತನರೂಪಾಗಿ ನಡೆಯಬಾರದು. ಇಂತೀ ದ್ವಯ ಘಟಿಸಿ ನಿಂದಲ್ಲಿ, ಏಣಾಂಕಧರ ಸೋಮೇಶ್ವರಲಿಂಗ ತಾನೆ.
--------------
ಬಿಬ್ಬಿ ಬಾಚಯ್ಯ
ಮಂಜಿನ ಮನೆಯಲ್ಲಿ ಸಂದೇಹದ ಸತಿ ಬಂದ ಬಂದವರ ಕೊಂದು ತಿನ್ನುತ್ತೈದಾಳೆ. ಅವಳಿಗೆ ಗಂಡನಾಗಲಮ್ಮರು, ಏಣಾಂಕಧರ ಸೋಮೇಶ್ವರಲಿಂಗವಲ್ಲದೆ.
--------------
ಬಿಬ್ಬಿ ಬಾಚಯ್ಯ
ಮತ್ಸ್ಯದ ಕಣ್ಣು, ಸರ್ಪನ ವಿಷ, ಹುಲಿಯ ಕಾಲುಗುರು ನಡೆವಲ್ಲಿ ಅಡಗುವಂತೆ, ಕೊಲುವಲ್ಲಿ ಬಿಡುವಂತೆ ಇಂತೀ ವಿಗಡತ್ರಯವ ಅರಿ, ಅಸುವಿನ ಭೇದವ ಏಣಾಂಕಧರ ಸೋಮೇಶ್ವರಲಿಂಗವ ಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ಮುಕುರ ಬಿಂಬದಂತೆ, ಉರಿ ದ್ರವ್ಯದಂತೆ ಧರೆ ಸಲಿಲದಂತೆ, ಕುರುಹು ಸಂಬಂಧ ಯೋಗದ ತೆರದಂತೆ ಅಂಗಲಿಂಗಸಂಬಂಧವಾಗಬೇಕು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಮೌನವಾದ ಮತ್ತೆ ಜಗಳವುಂಟೆ ? ಧ್ಯಾನವಾದ ಮತ್ತೆ ಫರಾಕುಂಟೆ ? ಸ್ಥಲ ಲೇಪವಾದ ಮತ್ತೆ ಭೇದದ ಭಿನ್ನವುಂಟೆ ? ಕ್ರೀ ಜ್ಞಾನ ಸಮಗಂಡಲ್ಲಿ, ಭಾವ ಶುದ್ಧವಾಯಿತ್ತು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಮರನ ಹೂ ನುಂಗಿ, ಅಡಿಯೊಳಗಡಗಿ ಹಣ್ಣಾಯಿತ್ತು. ಹಣ್ಣು ಎಳೆಗಾಯಿ ನುಂಗಿ, ಹೂ ಮರನ ಉಗುಳಿತ್ತು. ಮರ ಮರಣಕ್ಕೆ ತೆರಹಿಲ್ಲ, ಏಣಾಂಕಧರ ಸೋಮೇಶ್ವರಲಿಂಗವನರಿತೆಹೆನೆಂದು.
--------------
ಬಿಬ್ಬಿ ಬಾಚಯ್ಯ
ಮುಕುರದ ಬಿಂಬದಲ್ಲಿ ತೋರುವ ಜಗದಂತೆ ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ, ಭಾವಕ್ಕೆ ಭಾವ ಜ್ಞಾನ ನಿರೂಪಾದ ಏಣಾಂಕಧರ ಸೋಮೇಶ್ವರಲಿಂಗ.
--------------
ಬಿಬ್ಬಿ ಬಾಚಯ್ಯ
ಮರನಿಲ್ಲದ ಮನೆಯ ಮಾಡಿ, ನೆಲನಿಲ್ಲದ ಒಲೆಯಲ್ಲಿ, ಉರಿಯಿಲ್ಲದ ಬೆಂಕಿಯಲ್ಲಿ ಮೊಲೆ ಯೋನಿಯಿಲ್ಲದವಳು [ಅ]ಡುತ್ತೈದಾಳೆ. ಓಗರವಾಗದು, ಮಡಕೆ ಕರಗಿತ್ತು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ