ಅಥವಾ
(8) (2) (1) (0) (1) (0) (0) (0) (1) (0) (0) (3) (1) (0) ಅಂ (5) ಅಃ (5) (4) (0) (2) (0) (0) (1) (0) (3) (0) (0) (0) (0) (0) (0) (0) (8) (0) (2) (1) (2) (1) (0) (3) (4) (5) (0) (0) (0) (1) (5) (2) (0) (10) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುಶೀಲ ಗುರುಭಕ್ತಿ, ಮನಶೀಲ ಲಿಂಗಭಕ್ತಿ, ಧನಶೀಲ ಜಂಗಮಭಕ್ತಿ, ತ್ರಿವಿಧಶೀಲ ಮಹಾಭಕ್ತಿ. ಅಂಗ ಮನ ಭಾವ ಕರಣಂಗಳಲ್ಲಿ ವ್ರತದಂಗವೆ ಪ್ರಾಣವೆಂದು ಇಪ್ಪುದು ಛಲಭಕ್ತಿ. ಇಂತೀ ಭೇದಭಾವಂಗಳಲ್ಲಿ ಅಣುಮಾತ್ರ ತಪ್ಪ ಕ್ಷಣಮಾತ್ರ ಸೈರಿಸೆವೆಂಬುದು ನಿಶ್ಚಯಭಕ್ತಿ. ಇಂತೀ ವರ್ತಕಶುದ್ಧ ಸದ್ಭಕ್ತಂಗೆ ಮತ್ರ್ಯ-ಕೈಲಾಸವೆಂಬ ತತ್ತು ಗೊತ್ತಿಲ್ಲ. ಆತ ವ್ರತಲಕ್ಷಣಮೂರ್ತಿ, ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ತನು ಮುಟ್ಟುವುದಕ್ಕೆ ಮುನ್ನವೇ ಮನ ಶೀಲವಾಗಿರಬೇಕು, ಮನ ಮುಟ್ಟುವುದಕ್ಕೆ ಮುನ್ನವೆ ಅರಿವು ಶೀಲವಾಗಿರಬೇಕು, ಅಂಗ ಮನ ಅರಿವು ವ್ರತಾಂಗದಲ್ಲಿ ಕರಿಗೊಂಡು ಆಚಾರಕ್ಕೆ ಅನುಸರಣೆಯಿಲ್ಲದೆ, ಆತ್ಮವ್ರತ ತಪ್ಪಿದಲ್ಲಿ ಓಸರಿಸದೆ, ಆ ವ್ರತದ ಅರಿವು ಹೆರೆಹಿಂಗದೆ ಇಪ್ಪಾತನಂಗವೆ ಏಲೇಶ್ವರಲಿಂಗದಂಗ.
--------------
ಏಲೇಶ್ವರ ಕೇತಯ್ಯ
ತಂದೆಯ ಮಗ ಕರೆದು, ಮಗನ ತಂದೆ ಕರೆದು, ಭಾವನ ಮೈದುನ ಕರೆದು, ಮೈದುನನ ಭಾವ ಕರೆದು, ತಮ್ಮ ಬಂಧುಗಳ ಜಂಗಮವೆಂದು ಕೂಡಿಕೊಂಡು ಉಂಬ ಜಗಭಂಡರ ನೇಮ ಸುಸಂಗವಲ್ಲ, ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ
ತಾ ಹಿಡಿದ ವ್ರತಕ್ಕೆ ನಿಶ್ಚಯವ ಕಂಡು ನಡೆವಲ್ಲಿ ಸೋಂಕು ಬಹುದಕ್ಕೆ ಮುನ್ನವೆ ಸುಳುಹನರಿದು, ತಟ್ಟುಮುಟ್ಟು ಬಹುದಕ್ಕೆ ಮುನ್ನವೆ ಕಟ್ಟಣೆಯ ಮಾಡಿ, ಮೀರಿ ದೃಷ್ಟದಿಂದ ಶಿವಾಧಿಕ್ಯ ತಪ್ಪಿ ಬಂದಲ್ಲಿ ತನ್ನ ಕಟ್ಟಳೆಯ ವ್ರತಸ್ಥಭಕ್ತರು ಗಣಂಗಳು ಗುರುಲಿಂಗಜಂಗಮ ಮುಂತಾಗಿ ಎನ್ನ ವ್ರತದ ದೃಷ್ಟದ ಕಟ್ಟಳೆ ತಪ್ಪಿತ್ತೆಂದು ಮಹಾಪ್ರಮಥರಲ್ಲಿ ತಪ್ಪನೊಪ್ಪಿಸಿ, ಇನ್ನು ಘಟವಿಪ್ಪುದಿಲ್ಲಾಯೆಂದು ಬೀಳ್ಕೊಂಡು ಸತ್ಯಕ್ಕೊಪ್ಪಿದಂತೆ ತನ್ನ ಚಿತ್ತವಿದ್ದು ಪರಿಹರಿಸಿಕೊಂಬುದು ಮತ್ರ್ಯದ ಅನುಸರಣೆ. ತಪ್ಪಿದಲ್ಲಿಯೆ ಆತ್ಮವಸ್ತುವಿನಲ್ಲಿ ಕೂಡುವುದು ಕಟ್ಟಾಚಾರಿಯ ನೇಮ. ಇಂತೀ ಉಭಯವ ವಿಚಾರಿಸಿ ನಿಂದ ವ್ರತಕ್ಕೆ ನಿಮ್ಮ ಮನವೆ ಸಾಕ್ಷಿ. ಆಜ್ಞೆಯ ಮೀರಲಿಲ್ಲ, ಬಂಧನದಲ್ಲಿ ಅಳಿಯಲಿಲ್ಲ. ನೀವು ನೀವು ಬಂದ ಬಟ್ಟೆಯ ನೀವೆ ನೋಡಿಕೊಳ್ಳಿ. ಎನ್ನ ಬಟ್ಟೆ, ಏಲೇಶ್ವರಲಿಂಗದ ಗೊತ್ತು, ಕೆಟ್ಟಿಹಿತೆಂದು ಸೂಚನೆದೋರಿತ್ತು.
--------------
ಏಲೇಶ್ವರ ಕೇತಯ್ಯ
ತಾ ನೇಮವ ಮಾಡಿಕೊಂಡು ಕೃಷಿ ಬೇಸಾಯವಿಲ್ಲದೆ ಒಡೆಯರ ಕಟ್ಟಳೆ ಇಷ್ಟು ಅವಧಿಗೊಡಲೆಂದು, ಹೀಗಲ್ಲದೆ ಎನ್ನ ಒಡಲ ಹೊರೆಯೆನೆಂದು, ಹೋದ ಹೋದಠಾವಿನಲ್ಲಿ ಓಗರವನಿಕ್ಕಿಸುವ ಲಾಗಿನ ಶೀಲವಂತರ ಮನದ ಭೇದವ ನೀವೇ ಬಲ್ಲಿರಿ ಏಲೇಶ್ವರಲಿಂಗವೆ.
--------------
ಏಲೇಶ್ವರ ಕೇತಯ್ಯ
ತನುಸಂಪಾದನೆಯ ನೇಮ, ಭಾವಸಂಪಾದನೆಯ ನೇಮ, ಜ್ಞಾನಸಂಪಾದನೆಯ ನೇಮ, ಕ್ರೀಸಂಪಾದನೆಯ ನೇಮ, ಆಚಾರಸಂಪಾದನೆಯ ನೇಮ, ಸರ್ವಭಾವಸಂಪಾದನೆಯ ನೇಮ, ಸರ್ವಸ್ಥಲದ ಸಂಪಾದನೆಯ ನೇಮ, ತ್ರಿವಿಧಮಲದ ಸಂಬಂಧ ನೇಮ. ಇಂತೀ ಕ್ರೀ ಅಂಗಕ್ಕೆ, ಇಂತೀ ಜ್ಞಾನ ಲಿಂಗಕ್ಕೆ. ಇಂತಿವ ಕಳೆದುಳಿದ ಭಾವ, ವಸ್ತುವಿನಲ್ಲಿ ನಿಶ್ಚಯವಾದ ಶೀಲವಂತಂಗೆ ಹಿಂಗದೆ ನಮೋ ಎಂದು ಬದುಕಿದೆ ಏಲೇಶ್ವರಲಿಂಗ ಸಹಿತಾಗಿ.
--------------
ಏಲೇಶ್ವರ ಕೇತಯ್ಯ
ತಪ್ಪಿ ಇಷ್ಟ ನೆಲಕ್ಕೆ ಬಿದ್ದಲ್ಲಿ ದೃಷ್ಟದಿಂದ ತನ್ನ ತಾನೆ ಬಂದುದು ಅದು ಏಕಲಿಂಗನಿಷೆ*. ವ್ರತಗೆಟ್ಟೆನೆಂಬುದನರಿತು ಆಗವೆ ಪ್ರಾಣವ ಬಿಟ್ಟುದು ವ್ರತನಿಷೆ*ವಂತನ ಭಾವ. ಇಂತೀ ಉಭಯಕ್ಕೆ ತಟ್ಟುಮುಟ್ಟಿಲ್ಲ, ಹೀಗಲ್ಲದೆ ಇಷ್ಟವೆಂದೇನು? ವ್ರತಗೆಟ್ಟವನೆಂದೇನು? ಎಂದು ಘಟ್ಟಿಯತನದಲ್ಲಿ ಹೋರುವ ಮಿಟ್ಟೆಯ ಭಂಡಂಗೆ ಮತ್ತೆ ಸತ್ಯ ಸದಾಚಾರ ಭಕ್ತಿ ಉಂಟೆ? ಇಂತಿವರನು ನಾ ಕಂಡು ಗುರುವೆಂದು ವಂದಿಸಿದಡೆ, ಲಿಂಗವೆಂದು ಪೂಜಿಸಿದಡೆ, ಜಂಗಮವೆಂದು ಶರಣೆಂದಡೆ, ಎನಗದೆ ಭಂಗ, ಏಲೇಶ್ವರಲಿಂಗ ತಪ್ಪಿದಡೂ ಹೊರಗೆಂಬೆನು.
--------------
ಏಲೇಶ್ವರ ಕೇತಯ್ಯ
ತಾವರೆಯ ಎಲೆಯ ಮೇರಳ ನೀರಿನಂತೆ ಎನ್ನ ಮನ ಆವ ವ್ರತವನೂ ನೆಮ್ಮದಿದೆ ನೋಡಾ. ಎನ್ನ ಸಂದೇಹದಿಂದ ಮಹಾವ್ರತಿಗಳ ಸಂಗ ಸುಸಂಗವಾಗದಿದೆ ನೋಡಾ. ಕ್ರೀಯನರಿಯದು, ಅರಿವ ನೆನೆಯದು, ಬರುದೊರೆಯೋಹ ಮನಕ್ಕೆ ಒಂದುಕುರುಹ ತೋರಾ, ಏಲೇಶ್ವರಲಿಂಗಾ.
--------------
ಏಲೇಶ್ವರ ಕೇತಯ್ಯ