ಅಥವಾ
(8) (2) (1) (0) (1) (0) (0) (0) (1) (0) (0) (3) (1) (0) ಅಂ (5) ಅಃ (5) (4) (0) (2) (0) (0) (1) (0) (3) (0) (0) (0) (0) (0) (0) (0) (8) (0) (2) (1) (2) (1) (0) (3) (4) (5) (0) (0) (0) (1) (5) (2) (0) (10) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದಾಯಗಾರನ ಶೀಲ, ತ್ರಿವಿಧ ಢಾಳಕನ ಭಕ್ತಿ, ಶಬರನ ದಯೆ, ಚೋರನ ಲಲ್ಲೆ, ಕಳ್ಳೆಯ ಬಲ್ಲತನ, ಇವೆಲ್ಲವು ಕಲಿಯ ಮಣಿಯಂತೆ ಅಲ್ಲಿಗಲ್ಲಿಗೆ ದಾಯ. ಇಂತೀ ಕಳ್ಳರ ವ್ರತ ನೇಮ ಸುಳಿದಲ್ಲಿಯೆ ಕಾಣಬಂದಿತ್ತು ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ
ದೃಷ್ಟಿ ನಟ್ಟು ಚಿತ್ತವೊಪ್ಪಿದಲ್ಲಿ ಬೇರುಂಟೆ ಹಾದರವೆಂಬುದು? ಆ ಗುಣವ ಕಂಡು ಮನಶಂಕೆದೋರಿದಲ್ಲಿ ನಿಂದೆಗೆ ಬೇರೊಂದೊಡಲುಂಟೆ? ಇಂತೀ ಉಭಯಭಾವ ತಲೆದೋರಿದಲ್ಲಿ ಅಂಗಕ್ಕೆ ಆಚಾರವಿಲ್ಲ, ಆತ್ಮಂಗೆ ವ್ರತವಿಲ್ಲ. ಇಂತೀ ಸಂದೇಹದಲ್ಲಿ ಸಾವವ ಇಹಪರ ಉಭಯಕ್ಕೆ ಹೊರಗು. ಏಲೇಶ್ವರಲಿಂಗ ಅವರಿಗೆ ಮುನ್ನವೆ ಒಳಗಲ್ಲ.
--------------
ಏಲೇಶ್ವರ ಕೇತಯ್ಯ