ಅಥವಾ
(8) (2) (1) (0) (1) (0) (0) (0) (1) (0) (0) (3) (1) (0) ಅಂ (5) ಅಃ (5) (4) (0) (2) (0) (0) (1) (0) (3) (0) (0) (0) (0) (0) (0) (0) (8) (0) (2) (1) (2) (1) (0) (3) (4) (5) (0) (0) (0) (1) (5) (2) (0) (10) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವ್ರತಸ್ಥನಾಗಿದ್ದಾತ ಸಮೂಹಪ್ರಸಾದವ ಕೊಳಲಾಗದು. ಅದೆಂತೆಂದಡೆ: ಬಾಲರು ಭ್ರಾಮಕರು ಚೋರರು ಕಟುಕರು ಪಾರದ್ವಾರಿಗಳು ಜಾರರು ಪಗುಡಿ ಪರಿಹಾಸಕರು_ ಅವರಲ್ಲಿ ಪ್ರಸಾದದ ನಚ್ಚು ಮಚ್ಚುಂಟೆ? ಪ್ರಸಾದವ ಕೊಂಬಲ್ಲಿ ಸಮಶೀಲಸಂಪನ್ನರು, ಏಕಲಿಂಗನಿಷ್ಠವಂತರು. ಸರ್ವಾಂಗಲಿಂಗಪರಿಪೂರ್ಣರು, ಪರಮನಿರ್ವಾಣಪರಿಪೂರ್ಣರು. ಇಂತೀ ಇವರೊಳಗಾದ ಸರ್ವಗುಣಸಂಪನ್ನಂಗೆ ಗಣಪ್ರಸಾದವಲ್ಲದೆ ಕಾಗೆಯಂತೆ ಕರೆದು, ಕೋಳಿಯಂತೆ ಕೂಗಿ, ಡೊಂಬರಂತೆ ಕೂಡಿ ಆಡಿ, ಭಂಗ ಹಿಂಗದಿದ್ದಡೆ ಕೊಂಡಾಡುವ ಆ ಲಾಗ ನೋಡಿಕೊಳ್ಳಿ. ನಿಮ್ಮ ಭಾವಕ್ಕೆ ನಿಮ್ಮ ಭಾವವೆ ದೃಷ್ಟಸತ್ಯ, ಮರೆಯಿಲ್ಲ, ಭಕ್ತಿಗೆ ಇದಿರೆಡೆಯಿಲ್ಲ, ವ್ರತಗೆಟ್ಟವಂಗೆ ಆಚಾರಭ್ರಷ್ಟಂಗೆ ಕಟ್ಟು ಮೆಟ್ಟ ಮಾಡಲಿಲ್ಲ. ಇದು ಕಟ್ಟಾಚಾರಿಯ ದೃಷ್ಟ, ಏಲೇಶ್ವರಲಿಂಗವು ಸರ್ವಶೀಲವಂತನಾದ ಸಂಬಂಧಸಂಪದದಂಗ.
--------------
ಏಲೇಶ್ವರ ಕೇತಯ್ಯ
ವ್ರತಶುದ್ಧವಾಗಿ ನಡೆವಾತನೆ ಎನಗೆ ಅದ್ಥೀನದರಸು, ಪಂಚಾಚಾರ ಶುದ್ಧವಾಗಿ ನಡೆವಾತನೆ ಎನಗೆ ಸದ್ಗರುಮೂರ್ತಿ, ಆವಾವ ನೇಮಕ್ಕೂ ಭಾವಶುದ್ಧವಾಗಿ ಇಪ್ಪ ಮಹಾಭಕ್ತನೆ ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ವ್ರತವನಂಗೀಕರಿಸಿದ ಮಹಾಭಕ್ತಂಗೆ ಆತ್ಮತೇಜ ಅಹಂಮಮತೆ ರಾಗದ್ವೇಷಂಗಳುಂಟೆರಿ ಗುರುಲಿಂಗಜಂಗಮ ಮಹಾಭಕ್ತರಲ್ಲಿ ಭೃತ್ಯಂಗೆ ಭೃತ್ಯನಾಗಿ, ವ್ರತಸ್ಥರಲ್ಲಿ, ಮಿಕ್ಕಾದ ಸದ್ಗತಿವಂತರಲ್ಲಿ ಅತಿಶಯವಾಗಿರಬೇಕು, ಏಲೇಶ್ವರಲಿಂಗವನರಿಯಬಲ್ಲಡೆ.
--------------
ಏಲೇಶ್ವರ ಕೇತಯ್ಯ
ವ್ರತಸ್ಥನಾಗಿ ಭವಿಗಳ ಕೆಳಗೆ ಬೊಕ್ಕಸ ಭಂಡಾರ ಅಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಬಿಟ್ಟು, ತನ್ನ ಸ್ವಕಾಯಕದಿಂದ ಬಂದು ಒದಗಿದ ದ್ರವ್ಯವ ಒಡೆಯನ ಮುಂದಿಟ್ಟು, ತಾನೊಡಗೂಡಿ ಕೊಂಡ ಪ್ರಸಾದಿಯ ಪ್ರಸಾದವ ಎನ್ನೊಡೆಯನ ಮುಂದಿಟ್ಟು ಏಲೇಶ್ವರಲಿಂಗಕ್ಕೆ ಕೊಡುವೆನು.
--------------
ಏಲೇಶ್ವರ ಕೇತಯ್ಯ
ವ್ರತಸಂಬಂಧಭಾವಿ ಒಡೆಯರು ಭಕ್ತರ ಮನೆಗೆ ಒಡಗೂಡಿ ಹೋಗಿ ಅವರ ಮಡದಿಯರ ಕಂಡು ಮನವ ಬಿಡೆಯವ ಮಾಡಿದಡೆ, ಅವರೊಡವೆಗೆ ವಂಚಿಸಿದಡೆ, ಸುಡುವನೊಡಲ. ಅವ ಮೃಡಭಕ್ತನಲ್ಲ, ಇಹ ಪರಕ್ಕೆ ದೂರ, ಏಲೇಶ್ವರಲಿಂಗಕ್ಕೆ ಮುನ್ನವೆ ದೂರ.
--------------
ಏಲೇಶ್ವರ ಕೇತಯ್ಯ