ಅಥವಾ
(8) (2) (1) (0) (1) (0) (0) (0) (1) (0) (0) (3) (1) (0) ಅಂ (5) ಅಃ (5) (4) (0) (2) (0) (0) (1) (0) (3) (0) (0) (0) (0) (0) (0) (0) (8) (0) (2) (1) (2) (1) (0) (3) (4) (5) (0) (0) (0) (1) (5) (2) (0) (10) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧೂಳು ಪಾವಡ, ಕಂಠ ಪಾವಡ, ಸರ್ವಾಂಗ ಪಾವಡದೊಳಗಾದ, ಲವಣ ಸಪ್ಪೆವೊಳಗಾದ ನಾನಾ ಶೀಲಸಂಪನ್ನರಿಗೆಲ್ಲಕ್ಕೂ ಭಾವದ ವ್ರತ ಬೇರುಂಟು, ಸದ್ಭಾವದ ವ್ರತ ಬೇರುಂಟು. ಪೃಥ್ವಿ ಅಪ್ಪುತೇಜ ವಾಯು ಆಕಾಶದೊಳಗಾದ ಪಂಚಭೂತಿಕತನು ವ್ರತವ ಅಂಗೀಕರಿಸುವಲ್ಲಿ ತ್ರಿಜಾತಿಭೇದಂಗಳುಂಟು. ಪೃಥ್ವಿ ಸೋಂಕ ವಿಚಾರಿಸಿ, ಅಪ್ಪು ಸೋಂಕ ವಿಚಾರಿಸಿ, ತೇಜ ಸೋಂಕ ವಿಚಾರಿಸಿ, ವಾಯುಸೋಂಕ ವಿಚಾರಿಸಿ, ಆಕಾಶ ಸೋಂಕ ವಿಚಾರಿಸಿ _ಇಂತೀ ಪಂಚದೋಷಂಗಳ ಸಂಕಲ್ಪವಿಲ್ಲದಂತೆ ಲಯ ನಿರ್ಲಯವ ಕಂಡು, ಅಳಿವುಳಿವನರಿದು, ಅಂಗ ಮನ ಭಾವ ಕರಣಂಗಳನೊಂದುಮಾಡಿ, ಅರ್ಪಿತವಾದುದ ಕಂಡು, ಅನರ್ಪಿತವಾದುದನರಿತು, ಚಿತ್ತ ಮುಟ್ಟುವುದಕ್ಕೆ ಮುನ್ನವೆ ಮತ್ತವು ಬಹಠಾವ ಕಂಡಲ್ಲಿ, ಅರ್ಪಿತವನವಗವಿಸಿ ಅನರ್ಪಿತವ ಹೊರತಟ್ಟಿ ನಿಜನಿಶ್ಚಯವಾದ ಶೀಲ ಅರುವತ್ತನಾಲ್ಕನೆಯ ವ್ರತ. ಇವರೊಳಗಾದ ಕ್ರೀಯೆಲ್ಲವು ಸಂಕಲ್ಪದ ಸಂದೇಹ. ನಿಮ್ಮ ನೀವು ತಿಳಿದುಕೊಳ್ಳಿ. ಮುಂದಕ್ಕೆ ಏಲೇಶ್ವರದಲ್ಲಿ ರಾಮೇಶ್ವರಲಿಂಗಕ್ಕೆ ಜಗದ ಲೀಲೆ ಸಂದೇಹವಾಗಿದ್ದಿತ್ತು.
--------------
ಏಲೇಶ್ವರ ಕೇತಯ್ಯ