ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಕ್ಷುದಂಡದ ತುದಿಯ ಸುಳಿಯಲ್ಲಿ ಹುಟ್ಟಿತೊಂದು ಗಿಳಿ, ರಟ್ಟೆ ಮೂರು, ಕಾಲೊಂದು, ಬಾಯಿ ಎರಡಾಗಿ. ಮುಚ್ಚಿದ ಕಣ್ಣು, ಮೂಗಿನ ಕೆಂಪು, ಮೈಯ ರಕ್ತವರ್ಣ, ತುಪ್ಪುಳು ಕಪ್ಪು, ಕಾಲು ಹಳದಿ, ಬಾಯಿ ಬೆಳ್ಳಗೆ ಹಾರಾಡುವ ಬಯಲರೂಪು, ತೋರದ ಆಗರದಲ್ಲಿ ಹಾರಿಹೋಯಿತ್ತು. ಆತ್ಮನೆಂಬ ರಾಮ, ಪಂಜರವಿಲ್ಲದೆ ಹೋಯಿತ್ತು, ಗುಡಿಯೊಡೆಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಇಚ್ಫಾಶಕ್ತಿಯೆಂಬೆನೆ ಬ್ರಹ್ಮನ ಬಲೆಗೊಳಗು. ಕ್ರಿಯಾಶಕ್ತಿಯೆಂಬೆನೆ ವಿಷ್ಣುವಿನ ಸಂತೋಷಕ್ಕೊಳಗು. ಜ್ಞಾನಶಕ್ತಿಯೆಂಬೆನೆ ರುದ್ರನ ಭಾವಕ್ಕೊಳಗು. ಇಂತೀ ಮೂರರಿಂದ ಕಂಡೆಹೆನೆಂದಡೆ ಮಾಯಾಪ್ರಪಂಚು. ಹೆರೆಹಿಂಗಿ ನೋಡಿಹೆನೆಂದಡೆ ವಾಙ್ಮನಕ್ಕೆ ಅಗೋಚರ. ಇದ ಭೇದಿಸಲಾರೆ. ಎನ್ನ ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ, ಎನ್ನ ಕಾಡುವುದಕ್ಕೆ ಏಕೆ ಎಡಗಿದೆ ?
--------------
ಮನುಮುನಿ ಗುಮ್ಮಟದೇವ
ಇದಿರು ನೋಡುವುದಕ್ಕೆ ತೊಲಗು ಸಾಯೆಂಬ ಮಾತಲ್ಲದೆ, ನಿಂದಲ್ಲಿ ಅಂಬರವ ನೋಡುವುದಕ್ಕೆ ಕೊಂಡಾಡಲೇತಕ್ಕೆ ? ವಾದದಿಂದ ಹೋರಿ ಕಾಬುದು, ವೇದಾಂತಿಯ ವಾಗ್ವಾದದ ಗೆಲ್ಲ ಸೋಲವಲ್ಲದೆ, ವಸ್ತುವ ಭೇದಿಸಲರಿಯ, ಅರಿದುದಕ್ಕೆ ಒಡಲು. ಅವರಡಿಯ ಅರಿದ ಮತ್ತೆ, ಏನೂ ಎನ್ನದಿಪ್ಪುದೆ ವೇದಸಿದ್ಧಾಂತ. ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ ಇದೇ ಪ್ರಮಾಣು.
--------------
ಮನುಮುನಿ ಗುಮ್ಮಟದೇವ