ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸುಜ್ಞಾನ ಅಜ್ಞಾನವೆಂಬ ಉಭಯದ ಭೇದ, ದೀಪದ ಕುಡಿವೆಳಗಿನ ಧೂಮದ ಪರಿಯಂತೆ. ಅರಿವು ಮರವೆ ಬೇರೆ ಎಡೆದೆರಪಿಲ್ಲದೆ ಪುದಿದು, ಆತ್ಮನಲ್ಲಿ ಎಡೆಬಿಡುವಿಲ್ಲದಿಪ್ಪುದು, ಹೆರೆಹಿಂಗುವ ಪರಿಯಿನ್ನೆಂತೊ ? ಪಂಕ ಸಲಿಲದಂತೆ, ಪಾಷಾಣ ಪಾವಕನಂತೆ, ತೈಲ ರಜ್ಜುವಿನ ಯೋಗದಂತೆ ಹೆರೆಹಿಂಗಿದಡೆ ಅರಿಯಬಾರದು. ಕೂಡಿದ್ದಡೆ ಅರಿವಿಂಗೆ ವಿರೋಧ. ಗೋವು ಮಾಣಿಕವ ನುಂಗಿದಂತೆ. ಇದಾರಿಗೂ ಅಸಾಧ್ಯ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ಅವನರಿದವಂಗಲ್ಲದಿಲ್ಲ.
--------------
ಮನುಮುನಿ ಗುಮ್ಮಟದೇವ
ಸ್ವಪ್ನವ ಕಂಡು ಎಚ್ಚರಿವುದು ಅರಿವೋ, ಮರವೆಯೋ ? ಅರಿತಡೆ ದಿಟವಾಗಬೇಕು, ಮರೆತಡೆ ತೋರದಿರಬೇಕು. ಉದಕದ ವಾಸನೆಯಂತೆ ಸ್ಥೂಲದ ಸ್ವಪ್ನ. ಇದ ಒಡಗೂಡಿ ತಿಳಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಸಂಸಾರದಲ್ಲಿ ತೋರುವ ಸುಖದುಃಖಭೋಗಾದಿಭೋಗಂಗಳು ಇವಾರಿಂದಾದವೆಂದು ಅರಿದ ಮತ್ತೆ, ಬಾಗಿಲ ಕಾಯ್ದು ಕೂಗಿಡಲೇಕೆ ? ಎಲೆ ಅಲ್ಲಾಡದು, ಅವನಾಧೀನವಲ್ಲದಿಲ್ಲಾ ಎಂದು ಎಲ್ಲರಿಗೆ ಹೇಳುತ ಭವಬಡಲೇಕೆ ? ಹೋಯಿತ್ತು ಬಾಗಿಲಿಗೆ ಬಂದಾಗ ಭಾವಜ್ಞಾನ. ಭಾವ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಅರಿದು, ಹರಿದು ಬದುಕಿರಣ್ಣಾ.
--------------
ಮನುಮುನಿ ಗುಮ್ಮಟದೇವ