ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂದು ಚಿಪ್ಪಿನಲ್ಲಿ, ಮೂರು ಮುತ್ತು ಹುಟ್ಟಿದವು: ಒಂದು ಕಟ್ಟಾಣಿ, ಒಂದು ಸುಪ್ಪಾಣಿ, ಒಂದು ಮಣಿ ಉದಕವಿಲ್ಲದ ಸೂತೆ. ಬಿದ್ದ ಉದಕ ಒಂದೆ, ತಾಳಿದ ಚಿಪ್ಪು ಒಂದೆ. ಚಿಪ್ಪಿನ ಹೊರೆಯೋ, ಉದಕವ ತೆರೆಯೋ, ಮುತ್ತಿನ ಗುಣವೋ ? ಇವರ ಲಕ್ಷಣದ ಭೇದವೋ ಇದು ? ಚಿತ್ತದ ಜ್ಞಾನ, ಕರ್ತುವೆ ಹೇಳಾ, ಗುಡಿಯ ಗುಹೆಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಒಂದು ಉಪ್ಪರಿಗೆಯ ಮಂದಿರದಲ್ಲಿ, ಉಭಯದ ಮಧ್ಯದ ಬಾಗಿಲಲ್ಲಿ, ಕಟ್ಟಿದ್ದಿತ್ತೊಂದು ಬಲುಗೋಡಗಕ್ಕೆ ಬಾಯ ಅಣಲಿನ ಸಂಚದ ಕೂಳು. ಉಡಿಯೊಳಗಣ ಬೆಂಬೆಯ ಹಂಬು, ಹಂಬಿನೊಳಗಣ ಬಹುಧಾನ್ಯದ ತೆನೆ, ನೆಟ್ಟ ಗಳೆ ಮೂರು, ತಿಪ್ಪಣದ ಮಣೆ ಒಂದು, ಮಣೆಯಲ್ಲಿ ಕುಳಿತು ಅಣಲ ಸಂಚವ ತಿಂದಿತ್ತು. ಒಂದು ಮಣೆಯಲ್ಲಿ ಕುಳಿತು ಉಡಿಯ ತೆನೆಯ ತಿಂದಿತ್ತು. ಮತ್ತೊಂದು ಮಣೆಗೆ ಹೋಗಿ, ಕುಳಿತು ಹಾರೈಸಿ ದೆಸೆಯ ಕಾಣದೆ ನೆಗೆಯಲಾಗಿ, ಗಣೆ ದಸಿ ತಾಗಿ, ಕೋಡಗನ ಅಸು ಹೋಯಿತ್ತು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವನರಿದೆ.
--------------
ಮನುಮುನಿ ಗುಮ್ಮಟದೇವ