ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೇದಂಗಳ ನಾಲ್ಕು ಭೇದಿಸಲರಿಯದೆ, ಹದಿನಾರು ಶಾಸ್ತ್ರ ನಿಮ್ಮ ಶಾಂತಿಯನರಿಯದೆ, ಇಪ್ಪತ್ತೆಂಟು ಪುರಾಣ ನಿಮ್ಮ ಪುಣ್ಯದ ಪುಂಗವನರಿಯದೆ, ತೊಳಲಿ ಬಲುಳವುದಕ್ಕೆ [ಚ]ರ್ಚೆಯ ಮಾಡಿದೆ. ನಾ ಕೆಟ್ಟೆ, ಹುಚ್ಚುಗೊಂಡ ನಾಯಿ ಒಡೆಯನ ಕಚ್ಚಿದಂತೆ, ಕೆಟ್ಟೆ. ಆಗಮಗಳಲ್ಲಿ ಹೋರಿ, ದೃಷ್ಟವ ಕಾಣದೆ ಹೊತ್ತುಹೋರಿದೆನಯ್ಯಾ. ತಿರುಗುವ ಮೃಗವ ಎಚ್ಚಂತೆ, ಎನೆಗದು ಕುರುಹಾಯಿತ್ತು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ವಾರಿಯ ಶಿಲೆ ಕರಗುವುದಲ್ಲದೆ ಒಡೆದುದುಂಟೆ ಅಯ್ಯಾ ? ಹೇಮದ ಬಣ್ಣ ಪಾವಕನ ಜ್ವಾಲೆಗಂಜುವುದೆ ? ವಿಶಾಲ ಸಂಪದ ಕಾಲನ ಕಮ್ಮಟಕ್ಕೆ ಲೋಲನಹನೆ ? ಇದನರಿಯದ ಬಾಲರ ಮಾತೇಕೆ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ವಾಯು ಹಸಿದು ಆಪೋಶನವ ಮಾಡುವಲ್ಲಿ ಬಡಿಸುವ ತೆರಪಿನ್ನಾವುದು ? ಆಕಾಶ ಉರಿಗಂಜಿದಡೆ, ಸೇರುವ ನೆಳಲಿನ್ನಾವುದು ? ಭೂಮಿ ಭಯಕಂಜಿ ಓಡಿದಡೆ, ಸೇರುವ ಠಾವಿನ್ನಾವುದು ? ಇಂತಿವೆಲ್ಲವು ಪರಿಪೂರ್ಣ ತನ್ನಲ್ಲಿಯೆ ತೋರಿದುದು, ತನ್ನಲ್ಲಿಯೆ ಲಯವಲ್ಲದೆ ಬೇರೆ ಭಿನ್ನಭಾವವಿಲ್ಲ. ಈ ತೆರ ಶರಣನಿರವು. ಆತನೇತರಲ್ಲಿದ್ದರೂ ಅಜಾತಮಯನೆಂದೆ. ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ, ತೋರಿಯೂ ತೋರದ ನಿಲವು.
--------------
ಮನುಮುನಿ ಗುಮ್ಮಟದೇವ
ವಟವೃಕ್ಷದ ಘಟದ ಹೊಟ್ಟೆಯಲ್ಲಿ ತತ್ತಿಯನಿಕ್ಕಿತ್ತೊಂದು ಗಿಳಿ. ತತ್ತಿ ಮೂರು, ಆ ತತ್ತಿಗೆ ಪಕ್ಷಿ ಮೂರು. ಕಂಡನೊಬ್ಬ ಅಂಧಕ. ವೃಕ್ಷವ ಹತ್ತುವುದಕ್ಕೆ ಮೆಟ್ಟಿಲ್ಲ. ಹೊಟ್ಟೆಯಲ್ಲಿ ಇಕ್ಕುವುದಕ್ಕೆ ಕೈಯಿಲ್ಲ. ಗಿಳಿಯಾಸೆ ಬಿಡದು. ಇದಿರಾಸೆಯ ಬಿಡಿಸು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ