ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾತಿನ ಗೂಢವ ನುಡಿದಡೆ, ನೀತಿವಂತರು ಅರಿಯರು. ಜ್ಞಾತೃಜ್ಞೇಯ ಭಾವವ ನುಡಿದಡೆ, ಪ್ರಖ್ಯಾತ ಆಗಮಯುಕ್ತಿ ಅವರರಿಯರು. ಇಂತಿವ ಹೇಳಿದಡೆ ಜಗದ ತೊಡಕು, ಉಳಿದಡೆ ಚಿತ್ತಕ್ಕೆ ವಿರೋಧ. ಇದರಚ್ಚುಗ ಬೇಡ, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಮಾಣಿಕದ ಮಣಿ, ಉರಿಯ ಬೆಳಗಲ್ಲದೆ ಸುಡುವುದಿಲ್ಲ. ಉದಕದ ಮಡು, ಮುಳುಗಲ್ಲದೆ ಕೊಲುವುದಿಲ್ಲ. ನಿನ್ನನರಿದಲ್ಲದೆ ನೀನವರನರಿಯೆನೆಂಬ ನೇಮವೆ ? ಅಯಃಕಾಂತದ ಶಿಲೆ ಲೋಹದಂತೆ ಉಭಯಗುಣಸಂಪನ್ನ ನೀನೆ. ಅಂದಿಗೆ ಅನಿಮಿಷನ ಕೈಯಲ್ಲಿ, ಇಂದಿಗೆ ಪ್ರಭುವಿನ ಗುಹೆಯಲ್ಲಿ ಗುಹೇಶ್ವರನಾದೆ. ಎನ್ನ ಗುಡಿಗೆ ಬಂದು ಗುಮ್ಮಟಂಗೆ ಮಠಸ್ಥನಾದೆ. ಅಗಮ್ಯೇಶ್ವರಲಿಂಗವೆ, ನನಗೂ ನಿನಗೂ ಕೊಳುವಿಡಿಯೇಕೆ ? ಕೊಂಡು ಹೋಗು, ಶಿವಶಿವಾ ಸಮರ್ಪಣ.
--------------
ಮನುಮುನಿ ಗುಮ್ಮಟದೇವ
ಮರ್ಕಟನ ಲಂಘನ ವಿಹಂಗನ ದೃಷ್ಟಿ, ಪಿಪೀಲಿಕನ ಚಿತ್ತ, ಕೂರ್ಮನ ಸ್ನೇಹ. ಇಂತೀ ಚತುಷ್ಟಯದ ಭಾವ ನೆಲೆಗೊಂಡು, ಅಂಗ ಮಧ್ಯದ ರಂಗಮಂಟಪದಲ್ಲಿ ನಿರಂಗನಾಗಿರು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಮದನನ ಚಾಪ, ಮನ್ಮಥನ ಗಂಧ, ಚದುರರ ಮಾತು, ಸಂಪಲಿಯಗನ್ನ, ಇರಿಯದ ವೀರ, ವಸ್ತುವಿನಲ್ಲಿ ಕರಿಗೊಳ್ಳದವನ ವಾಚ, ಅಜನ ಕೊರಳ ಸೂತೆಯಂತೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಮಾಯೆಯ ಗೆದ್ದೆ[ಹೆ]ನೆಂದು, ಮತಿ ಮಂದಿರದಲ್ಲಿ ಕಂದಮೂಲಾದಿಗಳ ಫಲಪರ್ಣಂಗಳಿಂದ, ಕಾಲವ ವಂಚಿಸಿಹೆನೆಂದು ಇದ್ದುದೆ ಮಾಯಾಸಂಬಂಧ. ಅದು ದ್ವೇಷದ ಭ್ರಾಂತಲ್ಲದೆ, ಶಾಂತಿಯ ಕಲೆಯಲ್ಲ. ಅರಿದು ಮರೆದವ, ಕಾಷ* ಕರಿಪಯ ಸಂಗದಂತೆ, ಆತನಿರವು, ಅಷ್ಟೆ ಭಾವ. ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತತ್ವ್ರಾಣಮೂರ್ತಿ.
--------------
ಮನುಮುನಿ ಗುಮ್ಮಟದೇವ