ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತರ್ಕವ ನುಡಿವುದಕ್ಕೆ ಪರಸಮಯಿಯಲ್ಲ. ಕೃತ್ರಿಮ ನುಡಿವುದಕ್ಕೆ ಅಕೃತ್ಯನಲ್ಲ. ಮತ್ತೆ ಇವರ ನಿಂದಿಸುವುದಕ್ಕೆ ಬಂಧ ಮೋಕ್ಷದವನಲ್ಲ. ಇವರುವ ಅಂದಚಂದವ ಅಂತಿಂತೆಂಬುದಕ್ಕೆ ಉಭಯದ ಗೊಂದಳದವನಲ್ಲ. ಎನ್ನ ಅಂದದ ಇರವ ಕೇಳಲಿಕ್ಕೆ ನಿಮ್ಮಂಗವ ಹೇಳಿದೆನೈಸೆ. ಎನಗೆ ಎನ್ನಂಗೆ ನಿರುಪಮನ ಸಂಗ ಇನ್ನೆಂದಿಗೆ, ಎನ್ನ ಗೂಡಿನ ಒಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ತತ್ ತ್ವಂ ಅಸಿಯೆಂಬ ತ್ರಿವಿಧಭೇದಂಗಳಲ್ಲಿ ತ್ರಿವಿಧಮಯನಾಗಿ, ತ್ರಿಗುಣಾತ್ಮನಾಗಿ, ತ್ರಿಶಕ್ತಿಪತಿಯಾಗಿ ಗತಿಯ ತೋರಿಹೆನೆಂದು ಪ್ರತಿರೂಪಾದೆ. ಎಳ್ಳಿನೊಳಗಣ ಎಣ್ಣೆ, ಕಲ್ಲಿನೊಳಗಣ ಬೆಂಕಿ, ಬೆಲ್ಲದೊಳಗಣ ಮಧುರ, ಅಲ್ಲಿಯೆ ಅಡಗಿ ಮಥನದಿಂದಲ್ಲದೆ ತೋರದವೊಲು ಅಲ್ಲಿಯೆ ಅಡಗಿದೆ ಗುಡಿಯೊಳಗೆ, ಗುಮ್ಮಟನಾಥನ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ತಟ್ಟು ಕುಂಚ ಕಮಂಡಲಂಗಳೆಂಬ ಲೋಚು ಮುಟ್ಟಿಯ ಹಿಡಿದು, ಭೂತಕಾಯವಾಗಿ ತಿರುಗುವ ಆತನನರಿಯದ ಬೌದ್ಧಕಾರಿಗಳು ಕೇಳಿರೊ. ಜಾಗ್ರಸ್ವಪ್ನಸುಷುಪ್ತಿಯಲ್ಲಿ ತಟ್ಟುಗೆಡೆಯದ ತಟ್ಟಲ್ಲದೆ ಹಾಸಿಕೆಯಲ್ಲ. ಮನ ಬುದ್ಧಿ ಚಿತ್ತ ಅಹಂಕಾರ ಎಂಬಿವು ಕೂಡಿ, ಸುಚಿತ್ತವೆಂಬರಿವು ಹಿಂಗದ ಕೋಲಿನಲ್ಲಿ ಕಟ್ಟಿ, ಮೂರಂಗವ ತೊಡೆವುದು ಕುಂಚ. ಹುಟ್ಟುವ ಅಂಡ, ಜನಿಸುವ ಯೋನಿ, ಮರಣದ ಮರವೆಯೆಂಬೀ ಗುಣವ ಅರಿತು, ಕೀಳುವುದು ಮಂಡೆಯ ಲೋಚು. ಹಿಂಗರಿತು ಕರಿಗೊಂಡು, ಭವವಿರೋಧವಂ ಗೆದ್ದು, ಅಘನಾಶನನ ಅಂಗದ ಮೇಲೆ ಇಂಬಿಟ್ಟು, ಹೆರೆಹಿಂಗದ ಸಂಗವೆ ತಾನಾಗಿ, ಆತ ಮಂಗಳಮಯ ಗುರುಮೂರ್ತಿ, ಎನ್ನಂಗದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ತನುವಿನೊಳಗಣ ತನು, ಮನದೊಳಗಣ ಮನ, ಜ್ಞಾನದೊಳಗಣ ಜ್ಞಾನ, ಕಾಣುವ ಕಂಗಳಿಂಗೆ ಮತ್ತಮಾ ಕಣ್ಣು ತೆಗೆದು ನೋಡಲಾಗಿ, ಬ್ರಹ್ಮ ಹರುಗೋಲವಾದ, ವಿಷ್ಣು ಸಟ್ಟುಗವಾದ, ರುದ್ರ ಅಂಬಿಗನಾಗಿ ಒತ್ತಿದ. ಹರುಗೋಲ ಸಿಕ್ಕಿತ್ತು, ಮಾತಂಗವೆಂಬ ಪರ್ವತದ ತಪ್ಪಲಿನ ಸಿಕ್ಕುಗಲ್ಲಿನಲ್ಲಿ. ಹರುಗೋಲು ಕೊಳೆತಿತ್ತು, ಹುಟ್ಟು ಮುರಿಯಿತ್ತು, ಅಂಬಿಗ ಎತ್ತಹೋದನೆಂದರಿಯೆ. ಎನಗಾ ಬಟ್ಟೆಯ ಹೇಳಾ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ತೊಗಲೊಳಗಣ ನಾದ, ಮಾಂಸದೊಳಗಣ ಕ್ಷೀರ ಮೃಗಯೋನಿ ಗಂಧ ಹೆರೆಹಿಂಗಿಯಲ್ಲದೆ ನೆರೆ ಯೋಗ್ಯವಿಲ್ಲ. ಅರುಹಿರಿಯರೆಲ್ಲರೂ ತಿಲರಸಂದಂತೆ, ತಿಲರಸ ಬಿಂದುವಿನಂತೆ ಬೆರಸಿ ಭಿನ್ನಭಾವವಾಗಿ ಇರಬೇಕು. ಮಧು ಮಕ್ಷಿಕದಂತೆ ಆಗದೆ, ಮತ್ತೆ ಅರಿದಡೆ ಮಧುಮಕ್ಷಿಕದಂತೆ ಇರಬೇಕು. ಇಂತೀ ಉಭಯವನರಿದ ವಿರಕ್ತಂಗೆ ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ ತಾನು ತಾನೆ.
--------------
ಮನುಮುನಿ ಗುಮ್ಮಟದೇವ
ತೃಷ್ಣೆ ಹಿಂಗಿದ ಲಿಂಗಾಂಗಿಯ ಅಂಗದ ಇರವು. ಬಸುರಿಯ ಗರ್ಭದಲ್ಲಿ ತೋರುವ ಶಿಶುವಿನ ದೆಸೆಯ ಇರವು. ಅನ್ನರಸಕೆ ಭಿನ್ನವಾಗಿ ಬಾಯಿಯಿಲ್ಲದೆ, ತಾಯ ಪಥ್ಯದಲ್ಲಿ ಆತ್ಮಂಗೆ ಸುಖವಾಗಿ ಇಪ್ಪುದು. ಘಟಮಟ ಭಿನ್ನವಹನ್ನಕ್ಕ ಸುಖದುಃಖ. ಶಿಶುವ ತಾಳಿದ್ದ ಆ ತೆರ, ಲಿಂಗದ ಎಸಕವನರಿವವೊಲು, ಇಷ್ಟಪ್ರಾಣ ಹೆರೆಹಿಂಗದ ಮೂರ್ತಿ ಧ್ಯಾನ ನೆಲೆಗೊಂಡು, ಕಂಗಳು ಗರ್ಭ, ಮನ ಶಿಶುವಾಗಿ, ಲಿಂಗವೆಂಬ ಅಂಗದ ತೊಟ್ಟಿಲಲ್ಲಿ ವಿಶ್ವಾಸ ಘನಲಿಂಗ ಇಂಬಿಟ್ಟು ಕಂಡೆ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗದಲ್ಲಿ.
--------------
ಮನುಮುನಿ ಗುಮ್ಮಟದೇವ
ತಟಾಕ ಒಡೆದಡೆ ಪ್ರತಿಶಬ್ದವಲ್ಲದೆ ಗತಿಭಿನ್ನವುಂಟೆ ? ಅಂಬುಧಿಗೆ ಅದು ತುಂಬಿದ ಸಂಪದ, ಅದರಂಗದ ಇರವು, ಲಿಂಗಾಂಗಿಯ ಭಾವದ ಸಂಗ. ಕಂಡುದ ಕಂಡು ಕಾಳ್ಗೆಡೆವ ಲಿಂಗಿಗಳಿಗುಂಟೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದ ಸಂಗದ ಸುಖವು ?
--------------
ಮನುಮುನಿ ಗುಮ್ಮಟದೇವ