ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೋಡುವಲ್ಲಿ ನೆರೆ ಶೃಂಗಾರವಲ್ಲದೆ, ಕೂಡುವಲ್ಲಿ ಉಂಟೆ ? ನುಡಿವಲ್ಲಿ ಮಾತಿನ ಬಲುಮೆಯಲ್ಲದೆ, ಸಂಸಾರವ ಸಾಧನವ ಮಾಡುವಲ್ಲಿ ಮುಟ್ಟದಿಪ್ಪುದುಂಟೆ ? ನಡೆ ನುಡಿ ಸಿದ್ಧಾಂತವಾದ ಶರಣಂಗೆ ಪಡಿಪುಚ್ಚವಿಲ್ಲ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ನಾನೊಂದು ಗಿಳಿಯ ಕಂಡೆ, ಬೆಕ್ಕಿನ ಬಾಧೆ ಘನ. ತಾ ಕೋಲಿನಲ್ಲಿದ್ದಡೆ ಶಯನಕ್ಕೆ ಆಸೆಯಿಲ್ಲ. ಪಂಜರಕ್ಕೆ ಸಂದ ಕೂಡುವ ಸಂಗದವನಿಲ್ಲ. ಕೊರೆಯ ಕೂಳನಿಕ್ಕುವುದಕ್ಕೆ ಅಡಿಗರಟವಿಲ್ಲ. ಗಿಳಿಯ ಹಿಡಿದು ನಾ ಕೆಟ್ಟೆ. ಹಕ್ಕಿಯ ಹಂಬಲಿಲ್ಲ, ಗುಡಿಯೊಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ನಾನೆಂಬುದೆ ಸಕಲ, ನೀನೆಂಬುದೆ ಪ್ರತಿರೂಪು. ನಾ ನೀನೆಂಬುದು ಅರತುದೆ ನಿಃಕಲ. ಕಂಡೆಹೆನೆಂಬುದಕ್ಕೆ ಸಂದೇಹ. ಕಾಣದೆ ಏನೂ ಎನ್ನದಿದ್ದುದು ಭಾವಕ್ಕೆ ವಿರೋಧ. ಕ್ರೀಯಿಂದ ಕಾಬಡೆ ಮಲಸಂಬಂಧಿ. ನಿಃಕ್ರೀಯಿಂದ ಕಾಬುದಕ್ಕೆ, ಅರಿವ ಮನಕ್ಕೆ ಕುರುಹಿಲ್ಲ. ಇಂತಿದ ಏನುವೆನ್ನದ ಲಿಂಗವೇ ಇದ್ದೇನೆಂದು ಕೊಟ್ಟೆ, ಸಾಕಾರದ ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ನೋಡುವ ನಯನ ತೆರಪಾದಡೇನು, ಆಡುವ ಬೊಂಬೆಯಿಲ್ಲದ ಮತ್ತೆ ? ಗಾಡದ ಘಟ ಇದ್ದಡೇನು, ಮಾತಾಡುವ ಆತ್ಮನಿಲ್ಲದಂತೆ. ರೂಢಿಯಲ್ಲಿ ಬೋಧಕರಿದ್ದಡೇನು, ನಿಗಮಗೋಚರನ ವೇದಿಸಬೇಕು. ಇದು ಬೋಧಕ ಗುರುವಿನ ಅರಿವು, ಇದು ಸಿದ್ಧ. ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಗುರುನಿರ್ವಾಣಸ್ಥಲ.
--------------
ಮನುಮುನಿ ಗುಮ್ಮಟದೇವ
ನೋಡುವ ಮುಕುರ ತಾನಾಡಿದಂತೆ. ಕೂಡಿದ ಸಂಗ, ಪುನರಪಿ ತುರೀಯಕ್ಕೆ ಏರದಂತೆ, ಹಂದೆ, ಕಲಿಯಲ್ಲಿ ನೊಂದು, ಚೌಭಟ ಅಂಗಕ್ಕೆ ಹೋರದಂತೆ, ಕರಣಂಗಳಲ್ಲಿ ಹಿಂಡಿ ಹಿಳಿದು ಹಿಪ್ಪೆಯಾಗಿ ನೊಂದು, ಲಿಂಗದ ಸಂಗಕ್ಕೆ ಹಿಂಗಲಾರೆ. ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ ಒಡಗೂಡುವ ಠಾವ ಹೇಳಾ.
--------------
ಮನುಮುನಿ ಗುಮ್ಮಟದೇವ