ಅಃ ಪದದಿಂದ ಪ್ರಾರಂಭವಾಗುವ ವಚನಗಳು:
ಅಂಗಕ್ಕೆ ಲಿಂಗ ಸಂಬಂಧ. ಆತ್ಮಂಗೆ ಅರಿವು ಸಂಬಂಧ.ಅರಿವಿಂಗೆ ನಿಶ್ಚಯ ಸಂಬಂಧ. ನಿಶ್ಚಯ ನಿಜದಲ್ಲಿ ನಿಂದಲ್ಲಿಇಷ್ಟಲಿಂಗದ ತೃಷೆ ಅಡಗಿತ್ತು,ಏಣಾಂಕಧರ ಸೋಮೇಶ್ವರಲಿಂಗವನರಿಯಲಾಗಿ.
ಅಂಗಕ್ಕೆ ಲಿಂಗ, ಮನಕ್ಕೆ ಅರಿವಾಗಬೇಕೆಂಬ ಸಂದೇಹವೆಂತುಟೊ ?ಜೀವನವ ಹಿಂಗಿದ ಘಟ ಜೀವಿಸಬಲ್ಲುದೆ ?ಭಾವಕ್ಕೆ ಇದಿರಿಟ್ಟು, ಕುರುಹು ಅಭಿಮುಖವಾಗಿ ಅರಿವುದಕ್ಕೆ ತೆರನಿಲ್ಲ,ಏಣಾಂಕಧರ ಸೋಮೇಶ್ವರಲಿಂಗ ತಾನಾಗಿ.
ಅಂಗಲಿಂಗ ಸಂಬಂಧವಾದಡೆವೇದನೆ ಅಂಗದ ನೋವಿನಂತಿರಬೇಕು.ಹೇಮದಂಗ ಅಗ್ನಿಯ ಸಂಗದಲ್ಲಿದ್ದುರೂಪಳಿದು ನೀರಾದಂತೆ, ಅಂಗಲಿಂಗಸಂಬಂಧ,ಏಣಾಂಕಧರ ಸೋಮೇಶ್ವರಲಿಂಗದಲ್ಲಿ.