ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲೆಪ್ಪದ ಬೊಂಬೆ ಒಂದಾದಡೆ ಅವಯವಂಗಳಲ್ಲಿ ಬಣ್ಣ ನಿಂದು ರೂಪುದೋರುವಂತೆ ವಸ್ತು ಭಾವವೊಂದಾದಲ್ಲಿ ಮುಟ್ಟುವ ಸ್ಥಲದಿಂದ ಹಲವಾಯಿತ್ತು. ಕೇಳಿದಲ್ಲಿ ಭಾವನಾಸ್ತಿ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಲಿಂಗವೆಂದು ಹಿಂಗಿ ಭಾವಿಸುವಾಗ ಅರಿವು ಲಿಂಗಕ್ಕೆ ಹೊರಗೆ. ಆ ಲಿಂಗ ಚಿತ್ತದ ಕೈಯಲ್ಲಿ ಪ್ರಮಾಣಿಸಿಕೊಂಬಾಗ ಅಣೋರಣೀಯಾನ್ ಮಹತೋ ಮಹೀಯಾನ್ ಎಂದು ಪ್ರಮಾಣಿಸಿಕೊಂಬುದು ಹುಸಿಯೆ ? ತೊರೆಯುದಕ ಮಳಲ ಮರೆಯಲ್ಲಿ ಬಂದು ಸಂದೇಹವ ಬಿಡಿಸುವಂತೆ, ಎಲ್ಲಿಯೂ ನೀನೇ, ಏಣಾಂಕಧರ ಸೋಮೇಶ್ವರಲಿಂಗವೆ.
--------------
ಬಿಬ್ಬಿ ಬಾಚಯ್ಯ
ಲೋಹಂಗಳ ರೂಪು ಒಡೆಯೆ, ಕರಗಿ ಮುನ್ನಿನಂತಾಗೆ, ಮತ್ತೆ ಪ್ರತಿರೂಪಿಂಗೆ ಒಡಲಾಗಿರೆ, ತದ್ಭಾವ ನಿಜವಸ್ತು ಜಗಹಿತಾರ್ಥ ಕೂಟಸ್ಥನಾಗಿ ಏಣಾಂಕಧರ ಸೋಮೇಶ್ವರಲಿಂಗನಾದ.
--------------
ಬಿಬ್ಬಿ ಬಾಚಯ್ಯ
ಲತೆ ಹಲವು ಶಾಖೆಯಲ್ಲಿ ಹರಿದು ಸುತ್ತಿದಡೆ ಮೂಲವ ಕಿತ್ತಲ್ಲಿಯೆ ಹಲವು ಬಳ್ಳಿ ಒಣಗುವಂತೆ ಸ್ಥಲ ಕುಳಂಗಳು ಭಿನ್ನಭಾವವಾಗಿ ತೋರುವ ಇರವು ಅರಿತಲ್ಲಿಯೇ ನಷ್ಟವಾಯಿತ್ತು. ಏಣಾಂಕಧರ ಸೋಮೇಶ್ವರಲಿಂಗ ತಾನು ತಾನೆ.
--------------
ಬಿಬ್ಬಿ ಬಾಚಯ್ಯ