ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸ್ವಪ್ನದಲ್ಲಿ ಸಕಲಭೋಗಂಗಳ ಕಂಡು ಎಚ್ಚತ್ತು ನೋಡಿದಡೆ, ಮತ್ತಲ್ಲಿಯೆ ಬಚ್ಚಬಯಲಾಯಿತು. ಅದು ತನುವಿನ ಇರವು, ಮನದ ಭ್ರಾಂತು, ತೋರಿ ಅಡುಗುವ ಭೇದ, ಏಣಾಂಕಧರ ಸೋಮೇಶ್ವರಲಿಂಗದಲ್ಲಿಯೇ ಐಕ್ಯ.
--------------
ಬಿಬ್ಬಿ ಬಾಚಯ್ಯ
ಸ್ವಾದವಿಲ್ಲದ ಹಣ್ಣು, ಸೌರಭವಿಲ್ಲದ ಕುಸುಮ, ಸಾರವಿಲ್ಲದ ದ್ರವ್ಯ, ಅದಾರಿಗೆ ಯೋಗ್ಯ? ಅರಿವಿಲ್ಲದವನ ಇಷ್ಟದ ಬರಿಯ ಡಂಬಕದ ಪೂಜೆ ಅಡಿಯಿಡಲಿಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ
ಸತ್ತ ಶ್ರವಕ್ಕೆ ತಟ್ಟುಮುಟ್ಟು ಕೇಳಲೇಕೆ ? ಅರಿದು ನಿಜಕ್ಕೆ ಬೇರೊಂದ ಬಿಡೆಂದು ನುಡಿಯಲೇತಕ್ಕೆ ? ತನ್ನಿರವ ತಾನರಿದ ಮತ್ತೆ, ಇದಿರಿಂಗೆ ಅನ್ಯಭಿನ್ನವ ಹೇಳಲೇತಕ್ಕೆ ? ಅದು ಸುಮನ ಮನ್ನಣೆಯಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ