ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜ್ಞಾತೃವಿನಲ್ಲಿ ಇಷ್ಟಲಿಂಗಕಳೆ, ಜ್ಞೇಯದಲ್ಲಿ ಭಾವಲಿಂಗಕಳೆ, ಭಾವದಲ್ಲಿ ಪ್ರಾಣಲಿಂಗಕಳೆ. ತ್ರಿವಿಧದಲ್ಲಿ ಹೆರೆಹಿಂಗದರಿಯಬೇಕು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಸಂಬಂಧಿಯಾಗಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ಜಾಗ್ರದಲ್ಲಿ ಕಂಡಿರವ ಸ್ವಪ್ನದಲ್ಲಿ ಸುಖ ದುಃಖಾದಿಗಳು ತೋರಿದಾಗ ಅಲ್ಲಿ ಆವ ಲಿಂಗಕ್ಕೆ ಅರ್ಪಿತ ಭೇದ ? ಸ್ಥೂಲದಲ್ಲಿ ಕಂಡು, ಸೂಕ್ಷ್ಮದಲ್ಲಿ ಅರಿದು ಕಾರಣದಲ್ಲಿ ಭಾವಿಸುವ ಲಿಂಗ ಆವುದೆಂದರಿಯಬೇಕು. ಏಣಾಂಕಧರ ಸೋಮೇಶ್ವರಲಿಂಗದಲ್ಲಿ ತಾನರಿದು ಲಿಂಗವನರಿಯಬೇಕು.
--------------
ಬಿಬ್ಬಿ ಬಾಚಯ್ಯ