ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದಕ ಹಲವು ತೆರದಲ್ಲಿ ಏರಿಯ ಕೂಡಿ ದ್ವಾರವೊಂದರಲ್ಲಿಯೈದುವಂತೆ, ನಾನಾ ಭವಂಗಳಿಂದ ಇಷ್ಟದ ಗೊತ್ತಿನಲ್ಲಿ ನಿಂದು ನಿಶ್ಚಯವನರಿದು, ಮತ್ತಾ ಗುಣ ಬಚ್ಚಬಯಲು ಏಣಾಂಕಧರ ಸೋಮೇಶ್ವರಲಿಂಗದಲ್ಲಿ
--------------
ಬಿಬ್ಬಿ ಬಾಚಯ್ಯ
ಉರಿದು ಬೇವದು ಉರಿಯೋ, ಮರನೋ ? ಹರಿದು ಕೊರೆವದು ನೆಲನೋ, ನೀರೋ ? ನೆಲ ನೀರಿನಂತಾದುದು ಅಂಗಲಿಂಗಸಂಬಂಧ. ಉರಿ ಮರನಂತಾದುದು ಪ್ರಾಣಲಿಂಗಸಂಬಂಧ. ಈ ನಾಲ್ಕರ ಗುಣ ಉಭಯಕೂಟವಾದುದು ಶರಣಸ್ಥಲ. ಆ ಸ್ಥಲ ಸುರಧನುವಿನ ಕೆಲವಳಿಯಂತೆ, ಮರೀಚಿಕಾಜಲವಳಿಯಂತೆ, ಮಂಜಿನ ರಂಜನೆಯ ಜಂಝಾಮಾರುತನಂತೆ, ಆ ಸಂಗ ನಿಸ್ಸಂಗ ಐಕ್ಯಸ್ಥಲ, ನಿಃಕಳಂಕ ಮಲ್ಲಿಕಾರ್ಜುನ ರೂಪಳಿದು ನೀರಾದಂತೆ ಅಂಗಲಿಂಗಸಂಬಂಧಿ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಉರಿಯ ಮೊನೆಯ ಮೇಲೆ ಅರಗಿನ ಬೊಂಬೆ ತಿರುಗಾಡುತ್ತದೆ. ಉರಿ ಕರಗಿ ಬೊಂಬೆ ಉಳಿಯಿತ್ತು, ಏಣಾಂಕಧರ ಸೋಮೇಶ್ವರಲಿಂಗವ ಇದಿರಿಟ್ಟುಕೊಂಡು.
--------------
ಬಿಬ್ಬಿ ಬಾಚಯ್ಯ
ಉರಿ ಕುಡಿದ ಎಣ್ಣೆಯಂತೆ, ತಾರಕ ಕೊಂಡ ವಾರಿಯಂತೆ, ಯಾತನೆ ಕೊಂಡ ವ್ಯಾಪ್ತಿಯಂತೆ, ಮಹಾರ್ಣವ ಕೊಂಡ ಮಣ್ಣಿನಂತೆ, ಭಾವರೂಪು ಕ್ರೀಯಲ್ಲಿ ಅಡಗಿ, ಆ ಕ್ರೀ ಉರಿಕರ್ಪುರದಂತೆ ಉಭಯನಾಮವಡಗಿ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಸುಳುಹುದೋರದಿದ್ದಿತ್ತು.
--------------
ಬಿಬ್ಬಿ ಬಾಚಯ್ಯ
ಉರಿಯ ಮಡಕೆಯಲ್ಲಿ ಅರಗಿನ ನೀರ ತುಂಬಿ, ಪರಸತಿಯೆಂಬವಳು ಒಲೆಯ ಉರುಹತ್ತೈದಾಳೆ. ಒಲೆ ಬಾಯ ನುಂಗಿ, ಅಂಡವ ನೆಲ ನುಂಗಿ ದಿಂಡು ಬಿದ್ದಿತ್ತು. ಏಣಾಂಕಧರ ಸೋಮೇಶ್ವರಲಿಂಗ ತಾನೆ ಬಲ್ಲ.
--------------
ಬಿಬ್ಬಿ ಬಾಚಯ್ಯ