ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಜ್ಞೆ ಸಹಿತೆ ಗುರು, ಆಜ್ಞೆ ಸಹಿತೆ ಲಿಂಗ, ಆಜ್ಞೆ ಸಹಿತೆ ಜಂಗಮ, ಆಜ್ಞೆ ಸಹಿತೆ ಭಕ್ತ, ಆಜ್ಞೆ ಸಹಿತೆ ದಾಸೋಹಿ, ಆಜ್ಞೆ ಸಹಿತೆ ಅರುವತ್ತಾರು ಶೀಲ. ಆಜ್ಞೆ ಸಹಿತೆ ವ್ರತ ನೇಮ ನಿತ್ಯ, ಆಜ್ಞೆ ಯನತಿಗಳೆದವ ಅನಾಚಾರಿ, ಅವನ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಆದಿಯ ಪರಮೇಶ್ವರ ತನ್ನ ವಿನೋದಾರ್ಥಕಾರಣಕ್ಕಾಗಿ ಮತ್ರ್ಯಲೋಕದೊಳು ರೂಪಾಗಿ ಸುಳಿದರೆ ಭೇದವ ಮಾಡಿ ನುಡಿವ ದರುಶನ ಪರವಾದಿಗಳ ಬಾಯಲ್ಲಿ ಪಾದರಕ್ಷೆಯನಿಕ್ಕುವೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ