ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭವಾರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ, ಬೆಂದಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡ ಬಲ ಆದಿ ಆಕಾಶ ನಡುಮಧ್ಯ ಆವುದೆಂದರಿಯದವಂಗೆ, ಇರುವುದಕ್ಕೆ ಇಂಬುಗಾಣದವಂಗೆ, ಶಿವತತ್ವವೆ ಆಶ್ರಯ ಇದೆಯೆಂದು ತೋರಿದ ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಭವತಿಮಿರಜ್ಞಾನದಿಂದ ಮುಸುಕಿಕೊಂಡು ಕಣ್ಗಾಣದಿದ್ದವಂಗೆ ಜ್ಞಾನವೆಂಬಂಜನವನೆ ಹಚ್ಚಿ ಶಿವಪ್ರತಾಪವಿದೆಯೆಂದು ತೋರಿಸಿದ ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಭವಿಜನ್ಮವ ಕಳದು ಭಕ್ತನ ಮಾಡಿದರಯ್ಯ. ಪಂಚಭೂತದ ಪ್ರಕೃತಿಯ ಕಳದು ಪ್ರಸಾದಕಾಯವ ಮಾಡಿದರಯ್ಯ. ಅಂಗೇಂದ್ರಿಯಂಗಳ ಕಳದು ಲಿಂಗೇಂದ್ರಿಯಂಗಳ ಮಾಡಿದರಯ್ಯ. ಅಂಗವಿಷಯಭ್ರಮೆಯಂ ಕಳದು ಲಿಂಗವಿಷಯಭ್ರಾಂತನ ಮಾಡಿದರಯ್ಯ. ಅಂಗಕರಣಂಗಳ ಕಳದು ಲಿಂಗಕರಣಂಗಳ ಬೆಸಸುವಂತೆ ಮಾಡಿದರಯ್ಯ. ಕುಲಸೂತಕ ಛಲಸೂತಕ ತನುಸೂತಕ ನೆನವುಸೂತಕ ಭಾವಸೂತಕ ಇಂತೀ ಸೂತಕವೆಂಬ ಭ್ರಾಂತನು ಬಿಡಿಸಿ ನಿಭ್ರಾಂತನ ಮಾಡಿ ರಕ್ಷಿಸಿದ ಶ್ರೀಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಭವಿತನಕ್ಕೆ ಹೇಸಿ ಭಕ್ತನಾಗಿ ಭವ ಸಲ್ಲದೆ ಮತ್ತೆಯೂ ಭವಿಯ ಮನೆಯ ಹೊಕ್ಕು ಹೋಗಿ ಉಂಡನಾದರೆ ತಿಂಗಳು ಸತ್ತ ಕತ್ತೆಯ ಮಾಂಸವ ತುತ್ತು ತುತ್ತಿಂಗೆ ಗದ್ಯಾಣ ತೂಕವ ತೂಗಿ ತಿಂದ ಸಮಾನ. ಅವನನು ಭಕ್ತನೆನಲಾಗದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿನಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ