ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಲದಗಂಡ, ಕರ್ಮದಗಂಡ, ವಿದ್ಥಿಯಗಂಡ, ವಿಶಸನದಗಂಡ, ಇಹದಗಂಡ, ಪರದಗಂಡ, ಅಂಗದ ಮೇಲೆ ಲಿಂಗವ ಧರಿಸಿ ಸಾವಿಗಂಜುವರೆ ? ಸಂದೇಹಿಯಗಂಡ, ಸಂದೇಹ ನಿರ್ಲೇಪಕ್ಕೆ ಶರಣೈಕ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕಾಲನ ಸುಟ್ಟ ಭಸಿತವಲ್ಲ. ಕ್ರಮದಿಂದ ಕಾವನ ಸುಟ್ಟ ಭಸಿತವಲ್ಲ. ತ್ರಿಶೂಲಧರ ತ್ರಿಪುರವ ಸುಟ್ಟ ಭಸಿತವಲ್ಲ. ತ್ರಿಜಗವ ನಿರ್ಮಿಸಿದ ಭಸಿತವ ತಿಳಿದು ಲಲಾಟಕ್ಕೆ ಧರಿಸಲು ತ್ರಿಯಂಬಕ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕಿರುಕುಳ ದೈವದ ಹರಕೆ ಹಲ್ಲಣೆಯ ಮಾಡುವ ಕಿವಿಹರಕುಮುರಿಕೆಯ ಮನೆಯ ಅನ್ನ ನರಕದಾಯೆಡೆಗೆಂದು ಅರಿತು ಭುಂಜಿಸದೆ ನಿರುತ ವೀರಶೈವ ಭಕ್ತರನು ಬೆರೆತು ಬೆರೆತು ಬಾಳುವರು ದೇವರ್ಕಚಂದ್ರನುಳ್ಳನಕ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕತ್ತಿಯ ಕಟ್ಟಿ ಗದ್ರ್ದಿಸಿ ಕಾಳಗದೊಳು ಕುಳಿಯ ಗೆದ್ದು ಪ್ರಾಣವ ತುಂಬಿ ಕೈಲಾಸಕಟ್ಟುವ ಕೂಳಿಯ ಮರುಳಶಂಕರದೇವರಿಗೆ ಬಿಟ್ಟಮಂಡೆಯ ಗಂಗಾಧರದೇವರಿಗೆ ಪಟ್ಟವ ತೊರದು ಗಂಡನ ಜರದ ಅಕ್ಕಮಹಾದೇವಿಗೆ ನಿಷೆ* ನಿರ್ವಾಣ ಬೋಳೇಶ್ವರದೇವರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕಾಲ ಕಾಮನ ಗೆಲುವುದಕ್ಕೆ ಉಪಾಯವಿದೇನೆಂದು ಆಲೋಚನೆಯ ಮಾಡುವೆಯ ಮನವೆ ? ನರಿ ನಾಯ ಜಗಳಕ್ಕೆ ಆನೆಯ ಪವುಜನದಕಿಕ್ಕುವರೆ ಮನವೆ ? ಸುಜ್ಞಾನವೆಂಬ ಆನೆಯನೇರಿ ಅಜ್ಞಾನವೆಂಬ ನಾಯಿಗಳಿಗೆ ಅಂಜದಿರು ಮನವೆ, ಅಳುಕದಿರು ಮನವೆ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕಂದನಕೊಂದು ಶಿವಗುಣಲಿಕ್ಕಿ ಕರುಣವ ಪಡದು ಕಂಚಿಯಪುರವ ಕೈಲಾಸಕೊಯಿದ ಸಿರಿಯಾಳ-ಚಂಗಳೆ. ಸಿಂಧುಬಲ್ಲಾಳ ಶಿವಗೆ ಸತಿಯಕೊಟ್ಟರೆ ಶಿವ ಶಿಶುವಾದ, ಬಲ್ಲಿದ ಗಣಪತಿಯಾದ. ತಂದೆಯ ತಲೆಯ ಹೊಡೆದು ತಡೆಯದೆ ರಜತಗಿರಿಗೆಯಿದಿದ ಗೊಲ್ಲಾಳ, ಸಿರಿಯಾಳ ಸಿಂಧುಬಲ್ಲಾಳಂಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕುಗ್ಗಿನ ಕುಳಿ, ಸಿಳ್ಳಿನ ಗುಳ್ಳೆ, ಸೀಳ್ವಿನ ಕೋವಿ, ನಾರು ಹೋಮ ಬುಗ್ಗಿಚ್ಚುಗುಟ್ಟಿ ತಗ್ಗಿನ ಡೊಗರಿನೊಳು ಬಿದ್ದು ಸಿಗ್ಗಡಿಯದೆ ಸಿಕ್ಕದ ಶಿಖಂಡಿ ಮುಗ್ಗುಲಮುದಿ ಮೂಕೊರೆಯನ ಮುಖವ ನೋಡಲಾಗದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕುಲಗೇಡಿ ಖೂಳರಿಗೆ ದೀಕ್ಷವ ಕೊಟ್ಟರೆ ಛಲ ವ್ರತವಿಲ್ಲ. ಬಲುಕುಂಬಳದ ಕಾಯಿಗೆ ಕಟ್ಟ ಹಾಕಿದರೆ ಕೊಳತಂತಾಯಿತ್ತು ಸಲೆಯವನ ಮನೆಯ ಅನ್ನ. ಹಲಬರಿಗೆ ಉರುಳುವ ಹದಿನೆಂಟು ಜಾತಿಯ ಸೂಳೆಯಮಗ ಮಹಳವ ಮಾಡಿದರೆ ಅದು ಗಂಡಗಲ್ಲ ಮಿಂಡಗಲ್ಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕ್ಷುದ್ರ ಕುಚೇಷ್ಟೆ ಕುಟಿಲವ ಛಿದ್ರವೀತವಮಾಡುವ ಭದ್ರಬಲವ ಕೊಡುವ ರುದ್ರಾಕ್ಷಿಯ ಧರಿಸಿದ ಭಕ್ತರ ನಿದ್ರೆ ಸುಷುಪ್ತಿ ಜಾಗ್ರದಲ್ಲಿ [ಕಂಡರೆ] ಹೊದ್ದೇರಿದ ಪಾಪ ಹೋಗುವುದು ಕಾಣಾ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕುಲವೆಣ್ಣ ಬಿಟ್ಟು ಬೆಲೆವೆಣ್ಣಿಗೆ ಮನವನಿಟ್ಟ ಆ ಹೊಲೆಯನ ತಲೆಯೆತ್ತಿ ನೋಡದಿರಾ ಮನವೆ. ಅವ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ, ಪ್ರಸಾದದ್ರೋಹಿ, ಶಿವದ್ರೋಹಿ. ಅವ ಪಂಚಮಹಾಪಾತಕಿ ಪಾಷಂಡಿ. ಅವನ ಮುಖವ ನೋಡಲಾಗದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕೆರೆಯನೊಡೆದ ಬಳಿಕ ತೂಬು ತಡೆಯಬಲ್ಲುದೆ ? ಒಡಕ ಮಡಕೆಗೆ ಒತ್ತಿ ಮಣ್ಣ ಕೊಟ್ಟರೆ ನಿಲ್ಲಬಲ್ಲುದೆ ? ಮುತ್ತೊಡೆದರೆ ಬೆಚ್ಚಬಲ್ಲುದೆ ? ಚಿತ್ತ ಒಡೆದರೆ ಭಕ್ತಿ ಬೀಸರವಲ್ಲದೆ ಮುಕ್ತಿಯೆಲ್ಲಿಯದೊ ? ಕತ್ತೆಯ ಸೂಳೆಯ ಮಕ್ಕಳಿರಾ ಸತ್ತಹಾಗೆ ಸುಮ್ಮನಿರಿರೊ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕಾಳಗದೊಳು ಜೆಡೆದಲೆಗೆ ಮುಡಿದಲೆಯಕೊಟ್ಟ. ಭಾಳಾಂಬಕನ ಪಾದವ ಕಂಡು ಚೋಳರಾಯ, ಏಳುನೂರುಯೆಪ್ಪತ್ತೇಳು ಚಿನ್ನದ ಹರಿವಾಣದಲ್ಲಿ ಮೇಳೈಸಿ ಪಂಚಪಾಯಸ ಪಂಚಕಜ್ಜಾಯ ಪರಿಪರಿ ಪದಾರ್ಥ ಭಕ್ಷ್ಯನ್ನವನೆಡೆ ಮಾಡಿ ಘೃತವ ನೀಡಿ ಕಣ್ಣುತುಂಬಿ ನೋಡಿ ಹಮ್ಮನಾಡಿದರೆ ಅವನ ಜರದು ಮಾದಾರ ಚೆನ್ನಯ್ಯನಲ್ಲಿಗೆ ಹೋಗಿ ಜುರುಜುರುತ ಅಂಬಲಿ ಸೊಂಡಿಲಿಕ್ಕೆನೆ ಸುರುಕು ಸುರುಕು ಸುರುಕೆನೆ ಸುರಿದು ಅಮೃತಕ್ಕೆ ಸರಿಯೆಂದು ಪರಿಶಿವನೊಲಿದುಕೊಂಡಾಡಿದ ಮಾದಾರ ಚೆನ್ನಯ್ಯಂಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕೆರೆ ತೊರೆಯ ಮುಳುಗುವ ಅರೆಮರುಳುಗಳು ನೀವು ಕೇಳಿರೊ. ತೊರೆಯಿರೊ ಗುರುಲಿಂಗ ಜಂಗಮದ ನಿಂದ್ಯವ. ತೊರೆಯಿರೊ ಕೊಲೆ ಹುಸಿ ಕಳವು ಪಾರದ್ವಾರ ಅತಿಕಾಂಕ್ಷವ. ತೊರೆಯಿರೊ ಅಷ್ಟಮದ ಅರಿಷಡ್ವರ್ಗವ. ಇವ ತೊರೆಯದೆ ಕೆರೆ ತೊರೆಯ ಮುಳುಗುವ ಬರಿ ಮೂಕೊರೆಯರಿಗೆ ಭಕ್ತಿ ಮುಕ್ತಿಯೆಲ್ಲಿಯದೊ ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕೊರಡು ಕೊನರಬಲ್ಲುದೆ ? ಬರಡು ಹಯನಾಗಬಲ್ಲುದೆ ? ಕುರುಡಗೆ ಕನ್ನಡಿಯ ತೋರಿಸಿದರೆ ನೋಡಬಲ್ಲನೆ ? ಮೂಕಂಗೆ ರಾಗವು ಹೊಳೆದರೆ ಹಾಡಬಲ್ಲನೆ ? ಹೆಗ್ಗ ಬುದ್ಧಿಯ ಬಲ್ಲನೆ ? ಲೋಗರಿಗೆ ಉಪದೇಶವ ಕೊಟ್ಟರೆ ಶಿವಭಕ್ತರಾಗಬಲ್ಲರೆ ? ಶಿವಸತ್ಪದಸಂಪನ್ನರಾಗಲಲ್ಲದೆ ಶಿವಾಚಾರ ಆಳವಡದು ನೋಡಾ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ