ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒತ್ತೆಯ ಸೂಳೆ[ಗೆ] ಒತ್ತೆಯ ತೋರುವಂತೆ, ಹೆತ್ತ ತಾಯಿಗೆ ಮಲತಾಯ ತೋರುವಂತೆ, ಸತ್ಯಕ್ಕೆ ಅಸತ್ಯವ ತೋರುವ ಭಕ್ತಿಹೀನ ತೊತ್ತುಗುಲವರಿದು ಸತ್ತಹಾಗೆ ಸುಮ್ಮನಿರಿರೆ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಒಬ್ಬರುತ್ತಮರೆಂಬರು. ಒಬ್ಬರು ಕನಿಷ್ಠರೆಂಬರು. ಒಬ್ಬರು ಅಧಮರೆಂಬರು. ಒಬ್ಬರು ಕಷ್ಟನಿಷ್ಠೂರಿಯೆಂಬರು. ಅಂದರದಕೇನು ಯೋಗ್ಯ? ವಿನಯಕಂಪಿತ ಪರಮಾರ್ಥಕ್ಕೂ ಲೌಕಿಕಕ್ಕೂ ವಿರುದ್ಭ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಒಂದು ಮನೆಯೊಳಗೆ ಗಂಡಗೊಬ್ಬ ಗುರು, ಹೆಂಡತಿಗೊಬ್ಬ ಗುರು, ಮಕ್ಕಳಿಗೊಬ್ಬ ಗುರು, ತಂದೆಗೊಬ್ಬ ಗುರು, ತಾಯಿಗೊಬ್ಬ ಗುರು. ಈ ರೀತಿಯಲ್ಲು ಗುರುಭೇದವ ಮಾಡಿಕೊಂಡು ನಾವು ಭಕ್ತರುಯೆಂದು ಬೆರೆವರು. ಇಂಥ ನೀಚ ಹೊಲೆಯರಿಗೆ ಭಕ್ತಿಮುಕ್ತಿ ಎಲ್ಲಿಯದೊ ? ಏಕೋ ಗುರುವೊಬ್ಬನಲ್ಲದೆ ಎರಡುಂಟೆ ? ಇದಲ್ಲದೆ ಗುರುಭೇದವ ಮಾಡಿದ ಹೊಲೆಯರ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಒಂದೂರೊಳಗೆ ಗುರುವಿದ್ದು ವಂದಿಸಿ ಬಿನ್ನಹ ಬಿಡುಗಡೆಯ ಮಾಡಿಕೊಳ್ಳದೆ ಒಡಲ ಹೊರವ ಮಾನವರು ಮುಂದೆ ಹಂದಿಯ ಜಲ್ಮದಲ್ಲಿ ಅನೇಕಕಾಲ ಬಪ್ಪುದು ತಪ್ಪುದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಒರತೆಯಾಯತವೆಂಬ ಮತ್ರ್ಯದ ಶೀಲವಂತರು ನೀವು ಕೇಳಿರೊ. ತನುಕರಗಿ ಮನಕರಗಿ ಕಂಗಳವರತು ಲಿಂಗಕ್ಕೆ ಮಜ್ಜನಕ್ಕೆರದುದೆ ಒರತೆ. ಇಂತಲ್ಲದೆ ಒರತೆ ತೆರದು ಬಂದ ನೀರ ಭಾಂಡಕ್ಕೆ ಭರತಿ ಮಾಡಿ, ಬರುವ ಒರತಿಯೊಳಗೆ ಕಲ್ಲು ಮುಳ್ಳು ಹಾಕಿ ಮುಚ್ಚುವ ನರಕಿ ನಾಯಿಗಳಿಗೆ ಶೀಲವೆಲ್ಲಿಯದೊ ? ಇಲ್ಲ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ