ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸೆರಗೊಡ್ಡಿ ಬೇಡಿಕೊಂಬೆನು ಸರಿದಪ್ಪನು ಪೇಳದೆ ನೆರೆಬಲ್ಲ ಗುರುಹಿರಿಯರು ಭಕ್ತ ವಿರಕ್ತರುವೊಪ್ಪುವುದು. ಅಮ್ಮವ್ವೆ ರೆಮ್ಮವ್ವೆ ವೈಜವ್ವೆ ನಿಂಬವ್ವೆ ದುಗ್ಗಳವ್ವೆ ಮಾಂಗಾಯಕ್ಕರಸಿಗಳು ನೀಲಲೋಚನೆ ಕೋಳೂರ ಕೊಡಗೂಸು ಹೇರೂರ ಹೆಣ್ಣು ಕದಿರರೆಬ್ಬವ್ವೆ ಪಿಟ್ಟವ್ವೆ ಸತ್ಯಕ್ಕ ಇಂತೀ ತೆತ್ತೀಸಕೋಟಿ ಸತ್ಯಶರಣರು ಈ ವಚನದ ಅರ್ಥವ ಮಾಡಿ ಅನುಭವಿಸಿ ನಿಮ್ಮ ಶಿಶುವೆಂದು ಕರಿಯಬಸವನ ಎತ್ತಿಕೊಂಬುದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಸೃಷ್ಟಿಯೊಳು ಭೋರಿಟ್ಟು ಹರಿವ ಶರಧಿಯ ಕಂಡು ಅಂಗದಟ್ಟವ ಹಾಕಿ ದಾಟಿ ಸರ್ವರಿಗೆ ಲಿಂಗವ ಕಟ್ಟಿ ಪ್ರವುಡನ ಪಟ್ಟದಾನೆಗೆ ಭಸಿತವನಿಟ್ಟು ನಿಲಿಸಿದ ಕರಸ್ಥಲದದೇವರಿಗೆ ಮಿಡಿಬೀರದೆ ಲಿಂಗವಕಟ್ಟಿ ಕಡೆಗಿಟ್ಟರೆ ಪ್ರಾಣಹೋದ ಬಳಿಕ ಆ ಲಿಂಗವ ಕಟ್ಟಿದರೆ ಬದುಕುವ ಪ್ರಾಣಲಿಂಗಾಂಗಿ ಮರುಳಶಂಕರದೇವರಿಗೆ ಶರಣು ಶರಣಾರ್ಥಿ ಅಖಂಡಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಸದಾವರ್ತೆಯಕೊಡುವ ಸದಾವರ್ತಿಗಳು ನೀವು ಕೇಳಿರೊ. ಉದಯಾಸ್ತಮಾನದೊಳು ಬಂದವರ ಸದನದ ಮುಂದೆ ನಿಲಿಸಿಕೊಂಡು ಹದವಿಗೆ ಹಾಕಿ ಮಾಡುವ ಮಾಟ ಸದಾವರ್ತೆಯೆ ? ಅಲ್ಲ. ಇದು ಕಾರಣ ಬಂದ ಬರವ ನಿಂದ ನಿಲುಕಡೆಯನರಿತು ಮಾಡುವುದೆ ಸದಾವರ್ತೆ. ಇಂತಲ್ಲದಿದ್ದರೆ ಅದು ಸದಾವರ್ತೆಯಲ್ಲ. ಅವನ ಮನೆಯ ಅನ್ನ ಸೆದೆ ಸೊಪ್ಪು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಸಟ್ಟುಗ ಸವಿಯ ಬಲ್ಲುದೆ ? ಅಟ್ಟ ಮಡಕೆ ಉಣ್ಣಬಲ್ಲುದೆ ? ಕನಿಷ* ಹೀನ ಲಿಂಗದ ಕಟ್ಟಳೆಗೆ ಬರಬಲ್ಲನೆ ? ಕರಕಷ್ಟ ಹೀನರಿರಾ ಸುಮ್ಮನಿರಿರೊ. ಸೂಳೆಯ ಮಕ್ಕಳಿರ ಕಟ್ಟಳೆಗೆ ಬರದೆ, ಘನದಲ್ಲಿ ಮನಮುಟ್ಟಿ ಹಿಮ್ಮೆಟ್ಟದೆ ಆವನಿದ್ದಾತನೆ ಅಚ್ಚ ಭಕ್ತನೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಸುರತರು ತರುಗಳೊಳಗಲ್ಲ. ಸುರಧೇನುವದು ಪಶುವಿನೊಳಗಲ್ಲ. ಪರುಷ ಪಾಷಾಣದೊಳಗಲ್ಲ. ಶಿಷ್ಯನ ಭಾವಕ್ಕೆ ಗುರು ನರನಲ್ಲ. ನರನೆಂದರೆ ನರಕ ತಪ್ಪದು. ಗುರುವೆ ಪರಶಿವನೆಂದು ಭಾವಿಸಬಲ್ಲಡೆ ಆತನೆ ಶಿಷ್ಯನೆಂಬೆ, ಆತನೆ ಭಕ್ತನೆಂಬೆ, ಅಲ್ಲದಿರ್ದಡೆ ಭವಿಯೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ