ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಿಂಡಂಗಯಿದರೆಡೆಯ ತೋರುವಳಲ್ಲದೆ ಸೂಳೆ, ಗಂಡಂಗಯಿದರೆಡೆಯ ತೋರುವಳೆ ಹೆಂಡತಿ ? ಆ ಕಳ್ಮಂಡ ಷಂಡ ಸವುಂಡ ಅಂಡರಂತೆ ಕಂಡಕಂಡುದ ಪೂಜಿಸುವ ಭಂಡ ಮುಂಡೆ ಮೂಕೊರೆಯನ ಮುಖವ ನೋಡಲಾಗದು, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಮಾಳಿಗೆಯ ಮಣ್ಣು ಮಂಟಪಕ್ಕೆ ಸರಿಯೆ ? ಆಳಿಂಗೆ ಅರಸು ಸರಿಯೆ ? ಸೂಳೆಗೆ ಪತಿವ್ರತೆ ಸರಿಯೆ ? ನಿವಾಳಿಸಿ ಬಿಟ್ಟ ವಾಳಿಮಾನವರಿಗೆ ಮೇಳವಾಡಿ ಮುಕರಿದರೆ ಭಕ್ತಿಬೆಳವಿಗೆ ಸರಿಯೆ ? ಅಗ್ಗ ಕೂಗಳಿಗೂಳರ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಮಲದ ಕುಳಿವೊಂದು ಮುಖ. ಜಲದ ಕುಳಿವೊಂದು ಮುಖ. ರಕ್ತದ ಕುಳಿವೊಂದು ಮುಖ. ಕೀವು ಕ್ರಿಮಿ ಕೀಟಕ ಜಂತು ತುಂಬಿಪ್ಪ ಕುಳಿವೊಂದು ಮುಖ. ವಾತ ಪಿತ್ತ ಶ್ಲೇಷ್ಮ ಸಂಯೋಗದಲ್ಲಿ ಸರ್ವದೋಕುಳಿ ಮುಖವಾಗಿದೆ ನೋಡಾ. ಕಿವಿಯಲ್ಲಿ ಕುಗ್ಗಿ, ಕಣ್ಣಿನಲ್ಲಿ ಜುರಿ, ಮೂಗಿನಲ್ಲಿ ಸಿಂಬಳ, ಹಲ್ಲಿನಲ್ಲಿ ಕಿಣಿ, ಉರದಲ್ಲಿ ಮಾಂಸದ ಗ್ರಂಥಿ, ಅಮೇಧ್ಯದ ಹುತ್ತ, ಒಳಗೆ ಕರುಳ ಚಪ್ಪಳಿಗೆ ಹೊರಗೆ ಚರ್ಮದ ಹೊದಿಕೆ. ಈ ಹೆಣ್ಣು ರೂಪಿನ ಬಣ್ಣದ ಕಾಯವ ಕಂಡು ಕಣ್ಣನಟ್ಟು ಮನಮುಟ್ಟಿ ಮರುಳಾದರಣ್ಣಗಳು. ಮುಕ್ಕಣ್ಣ ನಿಮ್ಮನರಿಯದೆ ಬಣ್ಣದ ಹಿರಿಯರು ಭಕ್ತರು ಭ್ರಮೆಗೊಂಡರೆ ನಾನು ನೋಡಿ ಹೇಸಿ ನಾಚಿ ಕಡೆಗೆ ತೊಲಗಿದೆನಯ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಮಲಮೂತ್ರದ ಬಿಲದಲ್ಲಿ ಕೆಲಗಯ್ಯನಿಕ್ಕಿ, ಮಾಂಸದ ಮೊಟ್ಟೆಯ ಬಲಗೈಯೊಳಿಡಿದು, ಎಲುವಿನ ಮೇಲಣ ಚರ್ಮವ ಅಧರ ಮಧುರವೆಂದು ನಿತ್ಯ ಕಡಿತಿಂಬ ಹೊಲೆಯರಿಗೆ ಎಲ್ಲಿಯದೊ ಶಿವಾಚಾರ ಕುಲಾಚಾರ ? ಶೀಲ ವ್ರತ ನೇಮ ನಿತ್ಯ ಶಿವದ್ರೋಹಿಗೆಲ್ಲಿಯದೊ ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಮಿಥ್ಯಾದೇವತೆಯ ಸೂಳೆ ಅತ್ತಿಗೆ ನಾದಿನಿ ಅತ್ತೆ ತೊತ್ತು ಅಕ್ಕ ತಂಗಿ ಹೆತ್ತತಾಯೆಂದರಿಯದೆ ತರ್ಕೈಸಿಕೊಂಬ ತೊತ್ತಿನ ಮಕ್ಕಳಿಗೆ ನಿರ್ವಾಣಲಿಂಗದ ಪಾದಸೇವೆಯೆಲ್ಲಿಯದೊ? ಇಲ್ಲ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಮತವಲ್ಲ, ಹೆಣ್ಣ ಹಿಡಿದು ತನ್ನ ಮುನ್ನಿನ ಗುರುವಂ ಬಿಟ್ಟ ಕುನ್ನಿಗಳಿರ ನೀವು ಕೇಳಿರೊ. ನಿಮಗೆ ಗುರುವಿಲ್ಲ. ಅದೇನು ಕಾರಣವೆಂದರೆ, ಅವಳಿಗೆ ಪಾದೋದಕ ಪ್ರಸಾದವಿಲ್ಲ ; ಅವಳಿಗೆ ಮತವಿಲ್ಲ ; ಧರ್ಮದ ದಾರಿಯೆಲ್ಲಾ ದುರ್ಧರ. ಆ ದುರಾಚಾರಿಯನಾಳುವ ಹೊಲೆಯರಿಗೆ ಗುರುಲಿಂಗಜಂಗಮದ ಪಾದೋದಕ ಪ್ರಸಾದವಿಲ್ಲ. ಅವನಿಗೆ ಆ ಹೆಂಡತಿಯೆ ತನ್ನ ಗುರುವೆಂದು ಮುನ್ನಿನ ತನ್ನ ಗುರುವ ಬಿಡುವ ಗನ್ನಘಾತಕ ಕುನ್ನಿ ಕುಲಹೀನರಿಗೆ ಭಕ್ತಿಮುಕ್ತಿಯೆಲ್ಲಿಯದೊ ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಮಂಡಲದೊಳಿರ್ದು ಪರಸಮಯವ ಗೆದ್ದು, ಕೈಲಾಸದೊಳಿದ್ದ ಶರಣರ ಕೊಂಡಾಡಿ ಕುಣಿಕುಣಿದಾಡಿ ಸುಖದೊಳು ಮುಳುಗಾಡಿ ಬಾಳುವ ಭಕ್ತರು ನೀವು ಕೇಳಿರೊ. ಖಂಡೇಂದುಧರನು ಕದ್ದು ಮರೆಹೊಕ್ಕರೆ ಕೊಡದೆ ಮಡದಿ ಮಕ್ಕಳು ಮಂಡೆಯ ಹಂಗಿಲ್ಲದೆ ಸೂಲಕೆ ಬಿದ್ದು ಚಿಗುರಿಸಿ ಮೆರದರು ನಮ್ಮ ಗುಂಡಬ್ರಹ್ಮಯ್ಯಗಳಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ