ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ ಪ್ರಸಾದವಾದಲ್ಲದೆ ಕೊಳ್ಳೆವೆಂಬ ಪ್ರಸಾದಿಗಳಿರಾ ನೀವು ಅರ್ಪಿಸಿದ ಪರಿಯೆಂತು ? ಪ್ರಸಾದವ ಕೊಂಡ ಪರಿಯೆಂತು ಹೇಳಿರೆ ? ರೂಪಾರ್ಪಿತವಾಯಿತ್ತು ನೇತ್ರದಿಂದ, ಮೃದು, ಕಠಿಣ, ಶೀತೋಷ್ಣಂಗಳು ಅರ್ಪಿತವಾದವು ಸ್ಪರ್ಶನದಿಂದ. ನೇತ್ರ ಹಸ್ತವೆರಡಿಂದ್ರಿಯಂಗಳಿಂದವೂ ರೂಪು ಸ್ಪರ್ಶನವೆಂಬೆರಡೆ ವಿಷಯಂಗಳರ್ಪಿತವಾದವು. ನೀವಾಗಳೇ ಪ್ರಸಾದವಾಯಿತ್ತೆಂದು ಭೋಗಿಸತೊಡಗಿದಿರಿ. ಇಂತು ದ್ರವ್ಯಂಗಳ ರಸವನೂ, ಗಂಧವನೂ, ಶಬ್ದವನೂ, ಶ್ರೋತೃ, ಘ್ರಾಣ, ಜಿಹ್ವೆಗಳಿಂದ ಮೂರು ವಿಷಯಂಗಳನೂ ಅರ್ಪಿಸದ ಮುನ್ನ ಪ್ರಸಾದವಾದ ಪರಿ ಎಂತೊ ? ಅರ್ಪಿತವೆಂದನರ್ಪಿತವ ಕೊಂಬ ಪರಿ ಎಂತೊ ? ಪ್ರಸಾದಿಗಳಾದ ಪರಿ ಎಂತೊ ಶಿವ ಶಿವಾ. ಪಂಚೇಂದ್ರಿಯಂಗಳಿಂದವೂ, ಶಿವಲಿಂಗಪಂಚೇಂದ್ರಿಯ ಮುಖಕ್ಕೆ ಪಂಚವಿಷಯಂಗಳನೂ ಅರ್ಪಿಸಬೇಕು. ಅರ್ಪಿಸಿ ಪ್ರಸಾದವ ಕೊಂಡಡೆ ಪ್ರಸಾದಿ. ಅಲ್ಲದಿರ್ದಡೆ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯೆ ಅಲ್ಲ. ಪ್ರಸಾದಿಯಲ್ಲ, ಭಕ್ತಿಯ ಪರಿಯೂ ಅಲ್ಲ. ಪೂಜಕರೆಂಬೆನೆ ಪೂಜೆಯ ಒಪ್ಪವಲ್ಲ. ಸಾಧಾರಣ ಪೂಜಕರಪ್ಪರು ಕೇಳಿರಣ್ಣಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಸಾವಧಾನಾರ್ಪಿತದಲ್ಲಿ ಸ್ವಯವಾಗರಯ್ಯ.
--------------
ಉರಿಲಿಂಗಪೆದ್ದಿ
ಆಮಿಸುವ ವಸ್ತು ಕರಸ್ಥಲಕ್ಕೆ ಬಂದ ಬಳಿಕ ಕಾಮಿಸಲೇನುಂಟುರಿ ಇನ್ನೇನ ಕಾಮಿಸುವುದಯ್ಯಾರಿ ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮೋ ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮೋ ಎಂಬ ವಸ್ತು ``ಓಂ ಯೋ ವೈ ರುದ್ರಸ್ವಭಾವಾನ್ ಅನ್ಯಚ್ಚ ಮೃತಂ ಎಂಬ ವಸ್ತು, ಸುಖಸ್ವರೂಪನು ಅಭಯಹಸ್ತನು ಶಾಂತನು ಕರುಣಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆಹ್ವಾನ ವಿಸರ್ಜನೆಗಳ ಮಾಡಲೇಕಯ್ಯ ಶರಣಂಗೆ ? ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದೆನಿಸಿದ ಬಳಿಕ ಉಂಟೆ ಲೌಕಿಕರ ಉಪಚಾರಂಗಳು ? ನಿತ್ಯನಿರಂಜನನೈಕ್ಯನೆಂಬ ನಿರೂಪದಲ್ಲಿ ಸ್ವರೂಪ ತಾನಾದ ಬಳಿಕ ಉಂಟೆ ಲೌಕಿಕರ ತನುವಿನಂತೆ ತನುಗುಣ ? ತನುಗುಣ ನಾಸ್ತಿಯಾದ ಬಳಿಕ, ಉಂಟೆ ತಾಮಸಕ್ಕೆ ಎಡೆ ? ಇಲ್ಲ. ಅದು ಹೇಗೆಂದಡೆ_ ಗುರುಕೃಪಾದೃಷ್ಟಿಯಿಂದ ತಾನೆಯಾದ ಬಳಿಕ ಇಲ್ಲಿಲ್ಲ ದೇಹಾದಿ ವಿಕಾರಂಗಳು, ಇಲ್ಲಿಲ್ಲ ಕರಣೇಂದ್ರಿಯಾದಿ ವಿಕಾರಂಗಳು. ಅದ್ವೈತವ ಮೀರಿದೆ, ಬೊಮ್ಮವ ಸಾರಿದೆ, ಸಾಕಾರವ ಹರಿದೆನು. [ಇದರಿಂದ] ನೂನೈಶ್ವರ್ಯವದುಂಟೆ ? ವಾಜ್ಮಾನಸಜಿಹ್ವೆಗೆ ಅಗೋಚರವಾಗುತಿದ್ದಂತಹ ವಸ್ತುವ ಕಂಡೆ. ಸಕಲ ಶೂನ್ಯಾತೀತವ ಎಯ್ದಿದೆ, ಸ್ವಾನುಭಾವವನೊಡಗೂಡಿದೆ. ಮಹಾಲಿಂಗದ ಬಾಧೆ ಬಂದಡೆ ಉಣ್ಣೆನು, ಉಂಡಡೆ ಕಾಣೆ, ಕಂಡಡೆ ಮುಗಿಲ ಮುಟ್ಟಿದುದರುದ್ದವ ನೋಡಾ. ಎಂದು ದೀಕ್ಷೆ ಶಿಕ್ಷೆ ಸ್ವಾನುಭಾವವ ಸಂಬಂದ್ಥಿಸಿ ಶುದ್ಧ ನಿಷ್ಕಲವಾದ ಬಳಿಕ ಮರಳಿ ಪ್ರಪಂಚಿನ ಹಂಗುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?
--------------
ಉರಿಲಿಂಗಪೆದ್ದಿ
ಆಚಾರಕರ್ಪರ, ವಿಚಾರಕರ್ಪರ, ಅವಿಚಾರಕರ್ಪರದ ನಿರ್ಣಯವಾವುದೆನಲು, ಅನ್ಯದೈವ ಭವಿಮಿಶ್ರ ಅನಾಚಾರ ಭಕ್ಷಾಭಕ್ಷ ಪೇಯಾಪೇಯ ಅನ್ಯಾಯ ಇಂತಿವರನುಸರಣಿಗೊಳ್ಳದೆ ವಿಚಾರಿಸಿ ಭಕ್ತರ ಗೃಹವ ಹೋಗುವುದೀಗ ಆಚಾರಕರ್ಪರ. ನಾನಾರೊ ? ಎಂದು ವಿಚಾರಿಸಿ ತನಗೆ ಮುಸುಕಿದ ಮಾಯಾಪಟಲದ ಭ್ರಮೆಯಂ ಪರಿದು ಶ್ರೀಗುರುವಿನ ಸದ್ಭಾವಜ್ಞಾನಮನಕರಣದಿಂ ಉದಯಿಸಿದವನಜಾತಸ್ವಯಂಭುವೆಂದರಿದು, ಆಶೆಯಾಮಿಷ ಕಾಯಗುಣ ಇಂದ್ರಿಯದುರವಣೆ ಮನೋವಿಕಾರಾದಿಗಳಿಗೆ ಸಿಲ್ಕದೆ, ಆ ಮನ ಮೊದಲಾದ ಕಾರಣಂಗಳ ತನ್ನರಿವಿನಾಜ್ಞೆಯಿಂ ಲಿಂಗದಲ್ಲಿ ನೆನಹು ನೆಲೆಗೊಳಿಸಿ, ನೋಟವನಿಮಿಷವೆನಿಸಿ, ಅನ್ಯನುಡಿ ಅನ್ಯನಡೆಯೆಲ್ಲಮಂ ಮುನ್ನವೆ ತ್ಯಜಿಸಿ, ಲಿಂಗದ ನಡೆ ನುಡಿ ಚೈತನ್ಯವಳವಟ್ಟು, ಪರಶಿವನ ಪರತತ್ವವೆ ಪರಮಕರ್ಪರ ವಿಷಯ, ಶಿಕ್ಷಾದಂಡವೆ ಕಟ್ಟಿಗೆ, ಪಂಚಭೂತಕಾಯವನುಳಿದ ಅಕಾಯವೆ ಕಂಥೆ, ಪರಮವೈರಾಗ್ಯವೆ ಯೋಗವಟ್ಟಿಗೆ, ನಿರಾಶಾಪಥವೆ ಯೋಗವಾವುಗೆ, ನಿಷ್ಕಾಮಿತವೆ ಒಡ್ಯಾಣ. ಬಿಂದುಚಲಿಸಿದ ಸಂಧಾನಗತಿ ನಿಂದು ಲಿಂಗಸಂಯೋಗದ ಸಮರತಿಯ ಮುಕ್ತ್ಯಂಗನೆಯೆನಿಸುವ ಚಿಚ್ಛಕ್ತಿಯ ಕೂಟದ ಊಧ್ರ್ವರೇತಸ್ಸಿನ ಪರಮವಿಶ್ರಾಂತಿಯೆ ಕೌಪೀನ, ಅಪ್ರಮಾಣ ಚಾರಿತ್ರ್ಯವೆ ಆಧಾರಘುಟಿಕೆ, ಲಿಂಗಗಂಭೀರದ ಮಹದೈಶ್ವರ್ಯವೆ ವಿಭೂತಿ, ನಿರುಪಾಧಿಕ ತೇಜೋಮಯವಾದ ಮಹಾಲಿಂಗದ ಪ್ರಕಾಶವೆ ಭಸ್ಮೋದ್ಧೂಳನಾಗಿ, ಆ ಭಸ್ಮೋದ್ಧೂಳನ ಪ್ರಕಾಶದಿಂ ಅಜ್ಞಾನತಮವಳಿದ ಸಜ್ಞಾನಕ್ಷೇತ್ರದಲ್ಲಿ ಸುಳಿವ ಸುಳುಹೆ ದೇಶಾಂತರವಾಗಿ ಚರಿಸುವುದೆಂತೆಂದಡೆ: ಜಂಗಮಸ್ಯ ಗೃಹಂ ನಾಸ್ತಿ ಸ ಗಚ್ಛೇತ್ ಭಕ್ತಮಂದಿರಂ ಯದಿ ಗಚ್ಛೇತ್ ಭವೇರ್ಗೇಹಂ ತದ್ಧಿಗೋಮಾಂಸಭಕ್ಷಣಂ ಎಂದುದಾಗಿ ಇಂತೀ ವಿಚಾರದಲ್ಲಿ ಸುಳಿವ ಸುಳುಹೆ ವಿಚಾರಕರ್ಪರ. ವೇದಾತೀತಾಗಮಾತೀತಃ ಶಾಸ್ತ್ರಾತೀತೋ ನಿರಾಶ್ರಯಃ ಆನಂದಾಮೃತಸಂತುಷ್ಟೋ ನಿರ್ಮಮೋ ಜಂಗಮಃ ಸ್ಮೃತಃ ಇಂತೆಂದುದಾಗಿ, ಕಾಯಗುಣವಳಿದು, ಪರಕಾಯಗುಣವುಳಿದು, ಇಂದ್ರಿಯಗುಣವಳಿದು, ಅತೀಂದ್ರಿಯತ್ವದಲ್ಲಿ ವಿಶ್ರಾಂತಿಯನೈದಿ, ರಣಗುಣವಳಿದು, ನಿರಾವರಣ ನಿರ್ಮಲ ನಿರ್ವಿಕಾರ ನಿಜಲಿಂಗದಲ್ಲಿ ನಿಶ್ಚಲಿತನಾಗಿ, ಜೀವನ ಗುಣವಳಿದು, ಪರಮಾತ್ಮಲಿಂಗದಲ್ಲಿ ಘನಚೈತನ್ಯ ತಲ್ಲೀಯವಾಗಿ, ತನಗಿದಿರಿಟ್ಟು ತೋರುವ ತೋರಿಕೆಯೆಲ್ಲವೂ ತಾನಲ್ಲದೇನು ಇಲ್ಲವೆಂದರಿದು, ಕಾಬವೆಲ್ಲವೂ ಶಿವರೂಪು, ಕೇಳುವವೆಲ್ಲವೂ ಶಿವಾನುಭಾವ, ನಡೆದುದೆಲ್ಲವೂ ಶಿವಮಾರ್ಗ, ನುಡಿದುದೆಲ್ಲವೂ ಶಿವತತ್ವ, ಕೊಡುವ ಕೊಂಬೆಡೆಯಲ್ಲಿ ಎಡೆದೆರಪಿಲ್ಲದೆ ಅಖಂಡಾದ್ವಯ ಪರಿಪೂರ್ಣಚಿದಾನಂದರೂಪ ತಾನೆಂದರಿದು, ನಿಂದ ನಿಲವೆ ಅವಿಚಾರಕರ್ಪರ. ಅದೆಂತೆಂದಡೆ: ಚರಾಚರವಿಹೀನಂ ಚ ಸೀಮಾಸೀಮಾವಿವರ್ಜಿತಂ ಸಾಕ್ಷಾನ್ ಮುಕ್ತಿಪದಂ ಪ್ರಾಹುರುತ್ತಮಂ ಜಂಗಮಸ್ಥಲಂ ಎಂದುದಾಗಿ, ಶಬ್ದ ಚಲನೆಯಿಲ್ಲದುದೆ ಲಿಂಗವೆಂದರಿದು, ಬಿಂದುಚಲನೆಯಿಲ್ಲದುದೆ ಜಂಗಮವೆಂದರಿದು, ಆ ಬಿಂದುವನೆ ಲಿಂಗಮುಖದಲ್ಲಿ ನಿಲಿಸಿ ಆ ನಾದವನೆ ಘನಚೈತನ್ಯಜಂಗಮಮುಖದಲ್ಲಿ ನಿಲಿಸಿ, ಆ ನಾದಬಿಂದುವನೊಂದು ಮಾಡಿ ನಿಂದ ನಿಲವೆ ಉಪಮಾತೀತವದೆಂತೆಂದಡೆ: ನಾದನಿಶ್ಚಲತೋ ಲಿಂಗಂ ಬಿಂದುನಿಶ್ಚಲತೋ ಚರಃ ನಾದಬಿಂದು ಸಮಾಯುಕ್ತ ಶ್ರೇಷ*ಂ ತಲ್ಲಿಂಗಜಂಗಮಂ ಎಂದುದಾಗಿ, ಮನಶ್ಚಂದಿರ ಇತ್ಯುಕ್ತಂ ಚಕ್ಷುರಾದಿತ್ಯ ಉಚ್ಯತೇ ಚಂದಿರಾದಿತ್ಯಸಂಯುಕ್ತಂ ಉತ್ತಮಂ ಜಂಗಮಸ್ಥಲಂ ಎಂದುದಾಗಿ, ಮನಸ್ಥಂ ಮನೋಮಧ್ಯಸ್ಥಂ ಮನೋಮಧ್ಯಸ್ಥ ವರ್ಜಿತಾಃ ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾ ಸುಯೋಗಿನಃ ಇಂತೆಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮ ಶರಣರಜಾತಜನಿತರು, ಅನುಪಮಚರಿತರು.
--------------
ಉರಿಲಿಂಗಪೆದ್ದಿ
ಆಯುಷ್ಯವ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ. ಭಾಷೆಯ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ. ಅಷ್ಟಮಹದೈಶ್ವರ್ಯವ ಹಿರಿದಾಗಿ ಕೊಟ್ಟಡೆ ಲಿಂಗ ಒಲಿದುದಕ್ಕೆ ಕುರುಹಲ್ಲ. ಕಾಯ ಬೆರಸಿ ಕೈಲಾಸಕ್ಕೆ ಕೊಂಡು ಹೋದರೂ ಲಿಂಗ ಒಲಿದುದಲ್ಲ. ಇವೆಲ್ಲಾ ಪೂಜಾ ಫಲಂಗಳು, ಕೈಕೂಲಿಕಾರತನವೈಸೆ. ಲಿಂಗ ಒಲಿದ ಪರಿ: ಗುರುಲಿಂಗಜಂಗಮ ಒಂದೆಂದು ಅರಿದು ನಿಶ್ಚಯ ಭಾವದಿಂ ತನು ಮನ ಧನವಲ್ಲಿಯೇ ಅರ್ಪಿಸುವುದು ಲಿಂಗ ಒಲಿದುದು. ಕಾಯಭಾವವಳಿದು ಲಿಂಗವೆಂದು ಭಾವಿಸಿ ಭಾವಸಿದ್ಧಿಯಾದುದು ಲಿಂಗ ಒಲಿದುದು. ಲಿಂಗವಲ್ಲದೆ ಇನ್ನಾವುದು ಘನ ? ಎದರಿದುವೆ ಲಿಂಗ ಒಲಿದುದು. ಲಿಂಗವಂತನೆ ಲಿಂಗವೆಂದರಿದುದು ಲಿಂಗ ಒಲಿದುದು. ಸದಾಚಾರ ಲಿಂಗ ಒಲಿದುದು. ನಿರ್ವಂಚನೆ ಲಿಂಗ ಒಲಿದುದು. ಸರ್ವಭೋಗವನು ಲಿಂಗವಂತರಿಗೆ ಭೋಗಿಸಲಿತ್ತು ಸಮಭೋಗವಲ್ಲದೆ ಲಿಂಗವಂತಗೆ ವಿಶೇಷ ಭೋಗ ತಾತ್ಪರ್ಯ ಮೋಹವಾಗದಡೆ ಲಿಂಗ ಒಲಿದುದು. ಪರಧನ ಪರಸ್ತ್ರೀ ಪರದ್ರವ್ಯ ಪರದೈವದಲ್ಲಿ ವರ್ತಿಸದಿದ್ದಡೆ ಲಿಂಗ ಒಲಿದುದು. ಲಿಂಗದಲ್ಲಿ ಭಕ್ತನಲ್ಲಿ ಅವಿನಾಭಾವವಳವಟ್ಟು ಭಾವಶುದ್ಧವಾಗಿ ಸರ್ವಕ್ರೀ ಲಿಂಗಕ್ರೀಯಾದಡೆ ಲಿಂಗ ಒಲಿದುದು ದೃಷ್ಟವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆಚಾರ ಕರ್ಪರವಳವಟ್ಟಿತ್ತು, ಶಂಕರದಾಸಿಮಯ್ಯಂಗಳಿಗೆ. ವಿಚಾರಕರ್ಪರವಳವಟ್ಟಿತ್ತು, ಸಕಳೇಶಮಾದಿರಾಜಯ್ಯಂಗಳಿಗೆ. ಅವಿಚಾರಕರ್ಪರವಳವಟ್ಟಿತ್ತು, ಅಲ್ಲಮಪ್ರಭುದೇವರಿಗೆ. ಇಂತೀ ತ್ರಿವಿಧಕರ್ಪರವಳವಟ್ಟಿತ್ತು, ನಿಜಗುಣದೇವಂಗೆ. ಇಂತೀ ನಾಲ್ವರೊಳಡಗಿತ್ತು ಜಂಗಮಸ್ಥಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಆದಿಲಿಂಗ ಅನಾದಿಶರಣನೆಂಬುದು ತನ್ನಿಂದ ತಾನಾಯಿತ್ತು ಕೇಳಿರಣ್ಣಾ. ಆದಿ ಕಾಯ, ಅನಾದಿ ಪ್ರಾಣ ಈ ಉಭಯದ ಭೇದವ ತಿಳಿದು ವಿಚಾರಿಸಿ ನೋಡಿರಣ್ಣಾ. ಅಂತು ಅನಾದಿಯ ಪ್ರಸಾದ ಆದಿಗೆ ಸಲುವುದು. ಅದೆಂತೆಂದಡೆ, ಅನಾದಿಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್ ಅನಾದೇಶ್ಚ ವಿರೋಧೇನ ತದುಚ್ಛಿಷ್ಟಂ ತು ಕಿಲ್ಬಿಷಂ ಇಂತೆಂದುದಾಗಿ, ಪ್ರಾಣಪ್ರಸಾದವಿರೋಧವಾಗಿ ಪಿಂಡಪ್ರಸಾದವ ಕೊಂಡಡೆ ಕೊಂಡುದು ಕಿಲ್ಬಿಷ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆಸರಿನ ಭಕ್ತಜಡರುಗಳು ಬೇಸತ್ತು ಜಂಗಮಕ್ಕೆರಗಿ ಪಾದಪ್ರಕ್ಷಾಲನೆಯಂ ಮಾಡಿ ಪಾದೋದಕವ ಧರಿಸುತ್ತಿರ್ಪರು. ಆವುದು ಕ್ರಮವೆಂದರಿಯರು. ಅರಿದಡೆ ಪಾದೋದಕ, ಅರಿಯದಿರ್ದಡೆ ಬರಿಯ ನೀರೆಂದರಿಯರು. ಅರಿದರಿದು ಬರುದೊರೆವೋದರು ಮಾನವರೆಲ್ಲ. ಅರಿವು ಸಾಮಾನ್ಯವೇ ? ಶಿವಾತ್ಮಕಪದದ್ವಂದ್ವಪ್ರಕ್ಷಾಲನೆ ಜಲಂ ನರಾಃ ಯೇ ಪಿಬಂತಿ ಪುನಸ್ತನ್ಯಂ ನ ಪಿಬಂತಿ ಕದಾಚನ ಇಂತೆಂಬ ವಚನವ ಕೇಳಿ ನಂಬುವುದು. ನಂಬದಿರ್ದಡೆ, ಮುಂದೆ ಭವಘೋರ ನರಕ ತಪ್ಪದು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆಯುಷ್ಯಭಾಷೆಯನು ಲಿಂಗವೆ ಕೊಡುವನಯ್ಯಾ. ಇನ್ನಾರಿಗೂ ಕಕ್ಕುಲತೆ ಬಡದಿರಿ. ಲಿಂಗವು ಕೊಡುವ ಕಂಡಾ ! ಆದಡಿನ್ನು ಮತ್ತಾರಿಂಗೂ ಕಕ್ಕುಲತೆಯ ಬಡದಿರಿ. ಲಿಂಗವಂತಂಗೆ ಕಕ್ಕುಲತೆಯಾದಡೆ ಲಿಂಗವಂತನೆನಿಸನು. ಕಕ್ಕುಲತೆಯಲ್ಲಿ ಅನ್ಯರನಾಸೆಗೈದಡೆ ಲಿಂಗವು ರಕ್ಷಿಸನು, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆತ್ಮಶುದ್ಧಿ:ಗುರು ಹಸ್ತವ ಮಸ್ತಕದಲ್ಲಿ ನ್ಯಸ್ತಮಾಡಿದನಾಗಿ. ಸ್ಥಾನಶುದ್ಧಿ:ಶಿವಲಿಂಗವಿದ್ದುದೇ ಅವಿಮುಕ್ತಕ್ಷೇತ್ರವಾಗಿ. ದ್ರವ್ಯಶುದ್ಧಿ:ಶಿವಲಿಂಗಸನ್ನಿಧಿಮಾತ್ರ ಪವಿತ್ರೀಕೃತವಾಗಿ. ಮಂತ್ರಶುದ್ಧಿ:ಹರಮಂತ್ರಮಯವಾಗಿ ಅಂಗಶುದ್ಧಿ:ನಿರ್ಮಳ ನಿರುಪಮ ಸತ್ಯಸತ್ಯ ತಾನಾಗಿ. ಇಂತು ಪಂಚಶುದ್ಧಿ ಎಂದರಿದು, ಪ್ರಾಣಲಿಂಗಸಂಬಂಧಿಯಾಗಿಪ್ಪುದೇ ಆಗಮ. ಬೇರೆ ಆಗಮವಿಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಆದಿಮಧ್ಯ ಅವಸಾನದಲ್ಲಿಯೂ ಎನ್ನನು ಆಶೆಯೇ ಗ್ರಹಿಸುತ್ತಿದೆ. ಶಿವ ಶಿವಾ, ಆಸೆಯಿಂದ ಘಾಸಿಯಾಗುತ್ತಿದ್ದೇನೆ. ಶಿವ ಶಿವಾ, ಆ ಹೊನ್ನು ಹೆಣ್ಣು ಮಣ್ಣಿನ ಆಶೆ ಘಾಸಿಮಾಡಿ ಕಾಡುತ್ತಿದೆ. ಶಿವ ಶಿವಾ, ಈ ಆಶೆಯ ಕೆಡಿಸಿ ನಿಮ್ಮ ಶ್ರೀಪಾದದಾಸೆಯೆ ನಿವಾಸವಾಗಿರಿಸಯ್ಯಾ ಎನ್ನನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆದಿ ಸಿಂಹಾಸನವಾಗಿ, ಫಣಿ ಭೂಷಣವಾಗಿ, ಕೂರ್ಮನುತ್ತಮಾಂಗವಾಗಿ, ದಿಕ್ಕರಿಗಳೆಂಟೂ ಪುಷ್ಪವಾಗಿ, ಹದಿನಾಲ್ಕು ಭುವನದೊಳಗೊಂದಾಗಿ, ಮೇರುಗಿರಿ ನಾಲ್ಕು ದಿಕ್ಕೂ ಶೃಂಗಾರವಾಗಿ, ಮೇರು ರುದ್ರನ ಹಾವುಗೆಯಾದ ಪರಿಯೆಂತೊ ? ಹೊತ್ತುದನತಿಗಳೆದು ನಿಜದೊಳಗೆ ನಿಲಬಲ್ಲಡೆ ನಿರಾಕಾರವ ನಿರ್ಮಿಸಬಾರದು. ನಿರಾಕಾರವ ನಿಯಮಿಸುವಡೆ ಕರಣಾದಿಕಂಗಳಲ್ಲಿ ಕಂದೆರದಡೆ ಜನನಕ್ಕೆ ದೂರ. ಆಕಾರದಾಯು ಆಧಾರವಾಯು ಬ್ರಹ್ಮರಂಧ್ರದೊಳಗೆ ಕಾರಣಪುರುಷ ತಾನಾಗಿದ್ದು, ಆರೈದು ಗಮನಿಸುವನಲ್ಲದೆ ಕಾಯದಿಚ್ಛೆಗೆ ನಡೆದು ಸ್ಥಿತಿಕಾಲಕ್ಕೆ ಗುರಿಯಹನಲ್ಲ. ಕಾಯ ಭೋಗಿಸುವ ಭೋಗವ ಭುಂಜಿಸುವನ್ನಕ್ಕರ ವಾಯುಪ್ರಾಣಿ ಸಾಯದಲ್ಲಾ, ಅದೇನು ಕಾರಣವೆಂದಡೆ ಕರ್ಪುರದ ಪುತ್ಥಳಿಯ ಕಿಚ್ಚಿನಲ್ಲಿ ಸುಟ್ಟು ಅಸ್ಥಿಯನರಸಲುಂಟೆ ? ಜ್ಞಾನಾಗ್ನಿಯಿಂದ ಪ್ರಾಣಭೋಗ ನಷ್ಟ, ಆಕಾರದ ಪ್ರಾಣದ ಪರಿ ನಷ್ಟ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆಶೆಯುಳ್ಳನ್ನಬರ ಆಶ್ರಯಿಸುವ ಆಶ್ರಯವು ದಾಸಿಯಿಂದ ಕರಕಷ್ಟ ಕಾಣಿರೊ ! ಆಸೆಯೆ ದಾಸಿ ಕಾಣಿರೊ, ಅಯ್ಯಾ ! ಆ ನಿರಾಶೆಯೆ ಈಶ ಪದ, ಕಾಣಿರಣ್ಣಾ ! ದಾಸತ್ವದ ಈಶತ್ವದ ಅನುವನು ವಿಚಾರಿಸಿ, ಆಶೆ ಅಡಗಿದಡೆ ಅದೆ ಈಶ ಪದ, ತಪ್ಪದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ