ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದಯದಲ್ಲಿ ಉತ್ಪತ್ತಿ, ಮಧ್ಯಾಹ್ನದಲ್ಲಿ ಸ್ಥಿತಿ, ಅಸ್ತಮಾನದಲ್ಲಿ ಲಯವಪ್ಪುದು_ ಸರ್ವರಿಗೆಯೂ ಈ ವಿಧಿ ನೋಡಾ, ಇನ್ನೇತಕ್ಕೆ ತೆರಹುಂಟು ? ಮಧ್ಯಾಹ್ನದ ಸ್ಥಿತಿಯಲ್ಲಿ ಸಂಸಾರ ಪ್ರಪಂಚು ಕಾರಣ ಹೊನ್ನು ಹೆಣ್ಣು ಮಣ್ಣು ಲಾಭನಿಮಿತ್ತ ಆರಂಬ ವ್ಯವಹಾರ ಸೇವೆ ಇಂತಿವರಲೂ ಅತಿಲಯವಪ್ಪುದು ತಪ್ಪದು. ಉದಯೇ ಜನನಂ ನಿತ್ಯಂ ರಾvõ್ಞ್ರ ಚ ಮರಣಂ ತಥಾ ಅಜ್ಞಾನಂ ಸರ್ವಜಂತೂನಾಂ ತದ್ವಿಧಿಶ್ಚ ಪುನಃ ಪುನಃ ಎಂದುದಾಗಿ, ಮರಳಿ ಮರಳಿ ಈ ವಿಧಿ ನೋಡಾ. ಉತ್ಪತ್ತಿ ಸ್ಥಿತಿ ಲಯವ ಮೀರುವ ನಿತ್ಯ ಸದ್ಗುರು ಲಿಂಗ ಜಂಗಮ ಪೂಜಾಕ್ರಿಯೆ ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ನ ಸಂಶಯಃ ಇಂತೆಂದುದಾಗಿ, ತ್ರಿವಿಧಲಿಂಗಾರ್ಚನೆಯಂ ಮಾಡಲು ನಿತ್ಯಪದವಪ್ಪುದು ಸತ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ