ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಕ್ಷೆ ಕರಸ್ಥಲ ಉತ್ತಮಾಂಗ ಉರಸ್ಥಲ ಮೊದಲಾದ ಸ್ಥಾನಂಗಳಂ ಶುದ್ಧವ ಮಾಡಿ, ``ಯಾ ತೇ ರುದ್ರ ಶಿವಾತನೂರಘೋರಾ[s] ಪಾಪಕಾಶಿನೀ ಎಂಬ ಶಿವಲಿಂಗಮೂರ್ತಿಯಂ ಸ್ಥಾಪಿಸಿ, ತತ್‍ಶಿಷ್ಯನ ಶರೀರವೆ ನಡೆದೇವಾಲಯವೆಂಬಂತೆ ಶ್ರೀಗುರು ಪಾವನವ ಮಾಡಿ ತೋರಿದನಾಗಿ ಅಂಗದ ಮೇಲೆ ಲಿಂಗವುಳ್ಳವರ ಕಂಡು ಮರಳಿ ಮಾನವರೆಂದಡೆ ನಾಯಕನರಕ ತಪ್ಪದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಕೇಳಾ ಹೇಳುವೆನು: ಮಹಾಘನಲಿಂಗಭಕ್ತನು ಆಚರಿಸುವ ಸದ್ವರ್ತನನಿರ್ಣಯವ, ಅದು ಪರಶಿವಲಿಂಗದ ನಿತ್ಯಪದದ ಮಾರ್ಗ: ಗೌರವಂ ಲೈಂಗಿಕಂ ಚಾರಂ ಪ್ರಸಾದಂ ಚರಣಾಂಬುಕಂ ಭೌಕ್ತಿಕಂ ಚ ಮಯಾ ಪ್ರೋಕ್ತಂ ಷಡ್ವಿಧಂ ವ್ರತಮಾಚರೇತ್ ಗುರುದೇವಃ ಶಿವಃ ಸಾಕ್ಷಾತ್ ತಚ್ಚಿಷ್ಯೋ ಜ್ಞಾನಸಾರವಿತ್ ತ್ರಿವಿಧಂ ಹೃದಿ ಸಂಭಾವ್ಯ, ಕೀರ್ತಿತಂ ಗೌರವಂ ವ್ರತಂ ಗುರುಣಾ ಚಾರ್ಪಿತಂ ಲಿಂಗಂ ಪ್ರಾಣಲಿಂಗಂ ಪ್ರಕಥ್ಯತೇ ತಥೈವ ಭಾವನಾದ್ವೈತಂ ತದ್ವ್ರತಂ ಲೈಂಗಿಕಂ ಸ್ಮøತಂ ಗುರುಲಿಂಗಚರಾಧೀನಂ ನಿರ್ಮಾಲ್ಯಂ ಭೋಜನಾದಿಕಂ ತಸ್ಯಾನುಭಾವನಂ ದೇವಿ ತತ್ಪರಂ ವ್ರತಮುತ್ತಮಂ ಗುರುಪಾದಾಬ್ಜಸಂಭೂತಂ ಉಜ್ಜಲಂ ಲೋಕಪಾವನಂ ತಜ್ಜಲಸ್ನಾನಪಾನಾದಿ ತದ್ವ್ರತಂ Z್ಪರಣಾಂಬುಕಂ|| ಗುರುಲಿಂಗಚರಾಣಾಂ ಚ ಪ್ರಸಾದಂ ಪಾದವಾರುಣಂ| ಪರ್ಯಾಯಭಜನಂ ಭಕ್ತ್ಯಾ ತದ್ವ್ರತಂ ಸ್ಮøತಂ|| ಕ್ರಿಯಾದ್ವೈತಂ ನ ಕರ್ತವ್ಯಂ ಭಾವಾದ್ವೈತಂ ಸಮಾಚರೇತ್| ಕ್ರಿಯಾಂ ನಿರ್ವಹತೇ ಯಸ್ತು ಭಾವಶುದ್ದಂ ತು ಶಾಂಕರಿ|| ಎಚಿದುದಾಗಿ, ಪೂಜಿತೈಃ ಶಿವಭಕ್ತೈಶ್ಚ ಪರಕರ್ಮ ಪ್ರಪಚಿಚಿತಂ| ಪುಣ್ಯಸ್ಸಶಿವಧರ್ಮಃ ಸ್ಯಾತ್ ವಜ್ರಸ್ರಚಿಸ್ಸಮಬ್ರವೀತ್|| ಪಾತ್ರಶಾಸನಯೋರ್ಮಧ್ಯೇ ಶಾಸನಂ ತು ವಿಶಿಷ್ಯತೇ| ತಸ್ಮಾತ್ ಶಾಸನಮೇವಾದೌ ಪೂಜ್ಯತೇ ಚ ಶವೋ ಯಥಾ|| ಗುಣವತ್ಪಾತ್ರಪ್ರಜಾಯಾಂ ವರಂ ಶಾಸನಪೂಜನಂ| ಶಾಸನಂ ಪೂಜಾಯೇತ್ತಸ್ಮಾಸವಿZ್ಫರಂ ಶಿವಾಜÐಯಾ|| ಸ ನರೋ ಭೃತ್ಯಸದ್ಭಕ್ತಃ ಪತಿಕರ್ಮಾ ಚ ಜಂಗಮಃ| ರೂಪಂ ಚ ಗುಣಶೀಲಂ ಚ ಅವಿZ್ಫರಂ ಶುಭಂ ಭವೇತ್|| ಗುಣೋಗುಣಶ್ಚ ರೂಪಂ ಚ ಅರೂಪಂ ಚ ನ ವಿದ್ಯತೇ ಪಶ್ಶತ್ಯಮೋಹಭಾವೇನ ಸ ನರಃ ಸುಖಮೇಧತೇ ದುಶ್ಶೀಲಃ ಶೀಲಸರ್ವಜ್ಞಂ ಮೂರ್ಖಭಾವೇನ ಪಶ್ಯತಿ ಪಶ್ಯಂತಿ ಲಿಂಗಭಾವೇನ ಸದ್ಭಕ್ತಾ ಮೋಕ್ಷಭಾವನಾಃ ಯಥಾ ಲಿಂಗಂ ತಥಾ ಭಾವಃ ಸತ್ಯಂ ಸತ್ಯಂ ನ ಸಂಶಯಃ ಯಥಾ ಭಕ್ತಿಸ್ತಥಾ ಸಿದ್ಧಿಃ ಸತ್ಯಂ ಸತ್ಯಂ ನ ಸಂಶಯಃ ಸತ್ಯಭಾವಿ ಮಹಾಸತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ ಮಿಥ್ಯಭಾವೀತ್ವಹಂ ಮಿಥ್ಯಾ ಸತ್ಯಂ ಸ್ಯಾಚ್ಚಿವಲಕ್ಷಣಂ ದಕ್ಷಿಣೇ ತು ಮಹಾದೇವೇ ಪದಾರ್ಥೇ ಕಿಂ ಪ್ರಯೋಜನಂ ಅದಕ್ಷೇ ತು ಮಹಾದೇವೇ ಪದಾರ್ಥೇ ಕಿಂ ಪ್ರಯೋಜನಂ ಅರಿರ್ಮಿತ್ರಂ ವಿಷಂ ಪಥ್ಯಂ ಅಧರ್ಮೋ ಧರ್ಮವದ್ಭವೇತ್ ಪ್ರಸನ್ನ ಏವ ದೇವೇ ತು ವಿಪರೀತಂ ಭವೇದ್ಧೃವಂ ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಚ್ಯತೆ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಪಲಂ ಭವೇತ್ ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋ[s]ಪಿ ವಾ ತಸ್ಮೈ ದೇಯಂ ತತೋ ಗ್ರಾಹ್ಯಂ ಸಃ ಪೂಜ್ಯಶ್ಚ ಯಥಾ ಹ್ಯಹಂ ಸದ್ಗುರುರ್ಭಾವಲಿಂಗಂ ಚ ತಲ್ಲಿಂಗಂ ಚಿತ್ಸ್ವರೂಪಕಂ ತದ್ಭಾವಶುದ್ಧಿಸಿದ್ಧಸ್ಯ ಸದ್ಯೋನ್ಮುಕ್ತಿಃ ಸುಖಂ ಭವೇತ್ ಗುರುಃ ಪರಶಿವಶ್ಚೈವ ಜಂಗಮೋ ಲಿಂಗಮೇವ ಚ ತದ್ಭಾವಶುದ್ಧಿಸಿದ್ಧಸ್ಯ ಸದ್ಯೋನ್ಮುಕ್ತಿಃ ಸುಖಂ ಭವೇತ್ ಲಿಂಗಾಂಗೀ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ .................................................................. ತತ್ತ್ವದೀಪಿಕಾಯಾಂ ಪ್ರಸಾದೋ ಮುಕ್ತಿಮೂಲಂ ಚ ತತ್ಪ್ರಸಾದಸ್ತ್ರಿಧಾ ಮತಃ ಶಿವಃ ಸರ್ವಾಧಿದೇವಃ ಸ್ಯಾತ್ ಸರ್ವಕರ್ಮ ಶಿವಾಜ್ಞಯಾ ತತ್ತ್ವದೀಪಿಕಾಯಾಂ ಮಾಹೇಶ್ವರಸ್ಯ ಸಂಗಾದ್ಧಿ ಶಿವಯೋಗಂ ಲಭೇನ್ನರಃ ಪ್ರಸಾದಂ ತ್ರಿವಿಧಂ ಗ್ರಾಹ್ಯಂ ಮಹಾಪಾಪವಿನಾಶಕಂ ತತ್ತ್ವದೀಪಿಕಾಯಾಂ ಧನಪುತ್ರಕಲತ್ರಾದಿಮೋಹಂ ಸಂತ್ಯಜ್ಯ ಯೋ ನರಃ ಶಿವಭಾವೇನ ವರ್ತೇತ ಸದ್ಯೋನ್ಮುಕ್ತಸ್ಸುಖೀ ಭವೇತ್ ಪ್ರಾಣಲಿಂಗೇತ್ವವಿಶ್ವಾಸಾತ್ ಭಕ್ತಿಮುಕ್ತಿದ್ವಯಂ ನ ಚ ಪ್ರಾಣಲಿಂಗಸ್ಯ ವಿಶ್ವಾಸಾತ್ ಸಿದ್ದಿಃ ಸ್ಯಾತ್ ಭಕ್ತಿಮುಕ್ತಿದಾ ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಮುಪಾಸತೇ ಸ ನರಃ ಸ್ವರ್ಗಮಾಪ್ನೋತಿ ಗಣತ್ವಂ ನ ಪ್ರಯುಜ್ಯತೇ ಪ್ರಾಣಲಿಂಗಸಮಾಯುಕ್ತಃ ಪರಹಸ್ತಸಮರ್ಚನಾತ್ ತತ್ಪೂಜಾ ನಿಷ್ಫಲಾ ದೇವಿ ರೌರವಂ ನರಕಂ ವ್ರಜೇತ್ ಪ್ರಾಣಲಿಂಗಸಮಾಯುಕ್ತಃ ಪರಹಸ್ತೇ ದದಾತಿ ಚೇತ್ ನಿಮಿಷಾರ್ಧವಿಯೋಗೇನ ವಿಶೇಷಂ ಪಾತಕಂ ಭವೇತ್ ಪ್ರಾಣಲಿಂಗಸಮಾಯುಕ್ತ ಏಕಭುಕ್ತೋಪವಾಸತಃ ಗುರುಲಂಘನಮಾತ್ರೇಣ ಪೂಜಾ ಯಾ ನಿಷ್ಪಲಾ ಭವೇತ್ ಇಷ್ಟಲಿಂಗಂ ಸಮುತ್ಸೃಜ್ಯ ಅನ್ಯಲಿಂಗಸ್ಯ ಪೂಜನಾತ್ ಸ್ವೇಷ್ಟಂ ನ ಲಭತೇ ಮತ್ರ್ಯಃ ಪರಂ ತತ್ತ್ವಂ ನಿಹತ್ಯಸೌ ಅತ್ಯಂತಮಹಿಮಾರೂಢಂ ಶಿವಮಾಹಾತ್ಮ್ಯವಿಸ್ತರಂ ಯೋ[s]ಪಿ ದೃಷ್ಟ್ವಾಪ್ಯವಿಶ್ವಾಸೀ ಸ ಭಕ್ತೋ ನರಕಂ ವ್ರಜೇತ್ ಅಥ ಯೋ ಯಾದವ ಶ್ಚೈವ ರಾಜಾನಶ್ಯವೋ ಗ್ರಹಾ ನೈವ ಪೀಡ್ಯಸ್ತು ಯತ್ಕೃತ್ವಾ ನರಂ ಹಾರಪರಾಯಣಂ ಹಿರಣ್ಯರೂಪದೇಹಸ್ತಂ ಹಿರಣ್ಯಪತಿಪ್ರಾಣಿನಾಂ ಆಶಾದನ್ಯಂ ಹಿರಣ್ಯಂ ಚ ತದ್ದೇಹಂ ಲಿಂಗವರ್ಜಯೇತ್ ಘೃಣಾಮೂರ್ತಿರ್ಮಹಾದೇವೋ ಹಿರಣ್ಯೋದ್ಭಾಹು ಶಂಕರಃ ವರದಾಭಯ ಮತ್ಸ್ವಾಮಿನ್ ಯೇ ಆಶಾದನ್ಯಂ ವಿವರ್ಜಯೇತ್ ಆಶಾ ಚ ನರಕಂ ಚೈವ ನಿರಾಶಾ ಮುಕ್ತಿರೇವ ಹಿ ಆಶಾನಿರಾಶಯೋರ್ನಾಸ್ತಿ ತತ್ಸುಖಸ್ಯ ಸಮಂ ಪರಂ ಶಿವರಹಸ್ಯೇ ಜಪಶ್ರಾಂತಃ ಪುನಧ್ರ್ಯಾಯೇತ್ ಧ್ಯಾನಶ್ರಾಂತಃ ಪುನರ್ಜಪೇತ್ ಜಪಧ್ಯಾನಾದಿಯೋಗೇನ ಶಿವಃ ಕ್ಷಿಪ್ರಂ ಪ್ರಸೀದತಿ ಗಚ್ಚನ್ ತಿಷ*ನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ ಶುಚಿರ್ವಾಪ್ಯಶುಚಿರ್ವಾಪಿ ಶಿವಂ ಸರ್ವತ್ರ ಚಿಂತಯೇತ್ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋ[s]ಪಿ ವಾ ಯಸ್ಸ್ಮರೇತ್ ಸತತಂ ರುದ್ರಂ ಸ ಬಾಹ್ಯಾಭ್ಯಂತರಃ ಶುಚಿಃ ದುರ್ಲಭಂ ಮಾನುಷಂ ಜನ್ಮ ವಿವೇಕಸ್ತ್ವತಿದುರ್ಲಭಃ ದುರ್ಲಭಾ ಚ ಶಿವೇ ಭಕ್ತಿಃ ಶಿವಜ್ಞಾನಂ ತು ದುರ್ಲಭಂ ಇಂ್ರಯಪ್ರೀತಿದಾತಾರಃ ಪುಮಾಂಸೋ ಬಹವಃ ಕಿಲ ಶಿವಜ್ಞಾನಾರ್ಥದಾತಾರಃ ಪುಮಾಂಸೋ ಲೋಕದುರ್ಲಭಾಃ ಲಿಂಗಭಕ್ತ್ಯಾ ಮನಃ ಪೂತಂ ಅಂಗಂ ಪೂತಂ ತು ದೇಶಿಕಾತ್ ಭಾವಸ್ತು ಜಂಗಮಾತ್ ಪೂತಸ್ತ್ರಿವಿಧಾ ಭಕ್ತಿರುತ್ತಮಾ ಅಷ್ಟವಿಧಾರ್ಚನಂ ಲಿಂಗೇ ಅಷ್ಟಭೋಗಸ್ತು ಜಂಗಮೇ ಲಿಂಗೇ ಷೋಡಶೋಪಚಾರಾಃ ಸರ್ವೇ ತಾತ್ಪರ್ಯಜಂಗಮೇ ಮನೋ ಲೀನಂ ಮಹಾಲಿಂಗೇ ದ್ರವ್ಯಂ ಲೀನಂ ತು ಜಂಗಮೇ ತನುರ್ಲೀನೋ ಗುರೌ ಲಿಂಗೇ ಇತಿ ಭಕ್ತಸ್ಯ ವೈ ಧೃವಂ ಸಕಲಂ ಭಕ್ತರೂಪಂ ಚ ನಿಷ್ಕಲಂ ಶಿವರೂಪಕಂ ಸಕಲಂ ನಿಷ್ಕಲಂ ಮಿಶ್ರಂ ಚರರೂಪಂ ವಿಧೀಯತೇ ಸತ್ಕ್ರಿಯಾಂ ಪೂಜಯೇತ್ಪ್ರಾತರ್ಮಧ್ಯಾಹ್ನೇ ಭೋಜನಾವಧಿಂ ಸಾಯಂಕಾಲೇ ಮಹಾಪೂಜಾಂ ತತ್ಕ್ರಮಸ್ತು ವಿಶಿಷ್ಯತೇ ಮನಃಪೂತಾರ್ಚನಂ ಭಕ್ತ್ಯಾ ಪ್ರಾತಃಕಾಲವಿಧಿಕ್ರಮಃ ಸುಜಲಂ ಸುರಸಂ ಚೈವ ಯಥಾಸಂಭವದ್ರವ್ಯಕಂ ಅರ್ಪಯೇಚ್ಚರಲಿಂಗಾಯ ಮಧ್ಯಾಹ್ನೇ ಪೂಜನಕ್ರಮಃ ಗಂಧಂ ಪುಷ್ಪಂ ಚ ಕರ್ಪೂರಂ ಚಂದನಂ ಲೇಪನಂ ತಥಾ ಅರ್ಪಯೇತ್ ಫಲತಾಂಬೂಲಂ ಸಂಧ್ಯಾಪೂಜಾರ್ಚನಾವಿಧಿಕ್ರಮಃ ಧೂಪಮುಷ್ಣಾಧಿಕಂ ಸರ್ವಂ ಪ್ರಾತಃಕಾಲಾರ್ಚನಾವಿಧಿಃ ಪೂಜೋಪಚಾರಸ್ಸರ್ವೇಷಾಂ ಶೈತ್ಯಂ ಮಧ್ಯಾಹ್ನಸಂಧಿಷು ತ್ರಿಸಂಧ್ಯಾ ತ್ರಿಷು ಕಾಲೇಷು ಉಷ್ಣಂ ನೈವೇದ್ಯಮುತ್ತಮಂ ಯಥಾಸಂಭವಂ ಸಂಧ್ಯಾಯಾಂ ನಾದಾದೀನಿ ವಿಧಿಕ್ರಮಾತ್ ಶರಸಂಯುಕ್ತಪೂಜಾಯಾಂ ಕೇವಲಂ ನರಕಂ ಭವೇತ್ ನಿಶ್ಶಠಃ ಪೂಜಕಶ್ಚೈವ ಕೇವಲಂ ಮುಕ್ತಿಕಾರಣಂ ಅಷ್ಟಾದಶಾನಾಂ ಜಾತೀನಾಂ ಶಠಕರ್ಮಸ್ವಭಾವತಃ ನಿಶ್ಯಠಾಃ ಕುಲಮರ್ಯಾದಾಃ ಸದ್ಭಕ್ತಾಶ್ಚ ಶಿವಪ್ರಿಯಾಃ ಲಿಂಗಧಾರೀ ಮಹಾಲಿಂಗಂ ನ ಭೇದೋ ತತ್ರ ದೃಶ್ಯತೇ ಸದ್ವೈತ್ತೋ ಭೃತ್ಯರೂಪಶ್ಚ ಸತ್ಯಂ ಸತ್ಯಂ ಸಮೋ ನ ಚ ಕರ್ತೃಭೃತ್ಯಸ್ಯ ಸನ್ಮಾರ್ಗದುರ್ಮಾರ್ಗಸಮಭಾವತಃ ಅಹಂಕಾರೋ ಮಹಾಪಾಪಂ..... ಜನ್ಮಾಂತರಸಹಸ್ರೇಷು ತಪೋಧ್ಯಾನಪರಾಯಣೈಃ ನರಾಣಾಂ ಕ್ಷೀಣಪಾಪಾನಾಂ ಶಿವೇ ಭಕ್ತಿಃ ಪ್ರಜಾಯತೇ ತತೋ ವಿಷಯವೈರಾಗ್ಯಂ ವೈರಾಗ್ಯಾತ್ ಜ್ಞಾನಸಂಭವಃ ಜ್ಞಾನೇನ ತು ಪರಾ ಭಕ್ತಿಃ ಪ್ರಸಾದಸ್ತದನಂತರಂ ಪ್ರಸಾದಾನ್ಮುಚ್ಯತೇ ಜಂತುರ್ಮುಕ್ತಃ ಶಿವಸಮೋ ಭವೇತ್ ಅಸಾರೇ ದಗ್ಧಸಂಸಾರೇ ಸಾರಂ ದೇವಿ ಶಿವಾರ್ಚನಂ ಸತ್ಯಂ ವಚ್ಮಿ ಹಿತಂ ವಚ್ಮಿ ವಚ್ಮಿ ಪಥ್ಯಂ ಪುನಃ ಪುನಃ ಉಪಾಧಿಃ ಸ್ಯಾನ್ಮಹಾಭಕ್ತಿರುಪಾಧಿಸ್ಯಾತ್ಪ್ರಸಾದಕಃ ಉಪಾಧಿಃ ಸ್ಯಾತ್ಕ್ರಿಯಾಸ್ಸರ್ವಾಶ್ಯಿವಸ್ಯಾಸ್ಯಾ[s] ಪ್ರಸಾದತಃ ನಿುಪಾಧಿಕಮದ್ಭಕ್ತಿರ್ನಿರುಪಾಧಿಕಪ್ರಸಾದತಃ ನಿರೂಪಾಧಿಕ್ರಿಯಾಸ್ಸರ್ವಾಃ ಶಿವಃ ಶೀಘ್ರಂ ಪ್ರಸೀದತಿ ದಿನೇ ದಿನೇ ವಿಶೇಷಂ ಚ ಮಾಸೇ ಮಾಸೇ ಮಹಾದ್ಭುತಂ ವತ್ಸರೇ ವತ್ಸರೇ ಚೋದ್ಯಂ ಸದ್ಭಕ್ತಸ್ಯಾಭಿವರ್ಧನಂ ದಿನೇ ದಿನೇ ವಿಶೇಷಂ ಚ ಮಾಸೇ ಮಾಸೇ ಹಿ ದೃಶ್ಯತಾಂ ವತ್ಸರೇ ವತ್ಸರೇ ನಷ್ಟಾ ಮಹಾವಾಸಕ್ರಿಯಾಸ್ತಥಾ ದಾಸೋ[s]ಹಂ ಚ ಮಹಾಖ್ಯಾತಿರ್ದಾಸೋ[s]ಹಂ ಲಾಭ ಏವ ಚ ದಾಸೋ[s]ಹಂ ಚ ಮಹತ್ಪೂಜ್ಯಂ ದಾಸೋ[s]ಹಂ ಸತ್ಯಮುಕ್ತಿದಂ ಸದ್ಭಕ್ತಸಂಗಸಿದ್ಧಿಃ ಸ್ಯಾತ್ ಸರ್ವಸಿದ್ಧಿರ್ನ ಸಂಶಯಃ ಭಕ್ತಿಜ್ರ್ಞಾನಂ ಚ ವೈರಾಗ್ಯಂ ವರ್ಧತಾಂ ಚ ದಿನೇ ದಿನೇ ಮಹತ್ಸುಖಂ ಮಹಾತೋಷೋ ಲಿಂಗಭಕ್ತ್ಯಾ ಯಥಾ ಶಿವೇ ಪ್ರಾಣಲಿಂಗಪ್ರತೀಕಾರಂ ಕುರ್ವಂತೀಹ ದುರಾತ್ಮನಃ ಅತ್ಯುಗ್ರನರಕಂ ಯಾಂತಿ ಯುಗಾನಾಂ ಸಪ್ತವಿಂಶತಿ ಹುತಭುಗ್ಪತಿತಾಂಭೋಜಗತಿಃ ಪಾತಕಿನಾಂ ಭವೇತ್ ಸುಜ್ಞಾನ ಸದ್ಭಕ್ತಿ ಪರಮವೈರಾಗ್ಯಕ್ಕೆ ಶಿವನೊಲಿವನಲ್ಲದೆ ಸಾಮಾನ್ಯ ತಟ್ಟು ಮುಟ್ಟು ತಾಗು ನಿರೋಧದಲ್ಲಿ ಅನುಸರಿಸಿದಡೆ ಶಿವ ಮೆಚ್ಚುವನೆ ? ಸತ್ಯಶುದ್ಧ ನಿತ್ಯಮುಕ್ತ ಶರಣರು ಮೆಚ್ಚುವರೆ? ಶಿವನೊಲವು ಶರಣರೊಲವು ಸೂರೆಯೇ? ದೇವದಾನವ ಮಾನವರಂತೆ ಶಿವನಲ್ಲಿ ಭಕ್ತಿಯನು ಅನುಸರಿಸಿ ನಡೆವುದು ಭಕ್ತಿಯೇ ಅಲ್ಲ. ತಾಮಸ ರಾಜಸ ಉಳ್ಳುದು ಭಕ್ತಿಯ ಕುಳವಲ್ಲ, ಸದ್ಭಕ್ತಿಗೆ ಸಲ್ಲದು. ಗುರು ಲಿಂಗ ಜಂಗಮಕ್ಕೆ ಮರುಗಿ ತ್ರಿವಿಧಪದಾರ್ಥವ ಮನೋವಾಕ್ಕಾಯದಲ್ಲಿ ವಂಚನೆಯಿಲ್ಲದೆ ಮನ ಧನವನರ್ಪಿಸಿ ಮನ ಮುಟ್ಟಿದಡೆ ಗುರು ಲಿಂಗ ಜಂಗಮದ ಘನಮಹಿಮೆಯ ವೇದಪುರಾಣಾಗಮಂಗಳಿಂ ಗುರುವಾಕ್ಯದಿಂ ಪುರಾತನರ ಮತದಿಂದರಿದು ಮರೆವುದು ಜ್ಞಾನವಲ್ಲ. ಅರಿದು ಮರೆವುದು ಶ್ವಾನಜ್ಞಾನವಲ್ಲದೆ ಇಂತಪ್ಪ ಅಜ್ಞಾನಕ್ಕೆ ಒಲಿವನೇ ಶಿವನು? ಮೆಚ್ಚುವರೇ ಶರಣರು? ಶ್ರೀಗುರುಲಿಂಗಜಂಗಮವೊಂದೆಂಬರಿವು ಕರಿಗೊಂಡು ಸದ್ಭಾವದಿಂ ಭಾವಿಸಿ ಭಾವಶುದ್ಧಿಯಾದುದು ಸುಜ್ಞಾನ. ಗುರುಲಿಂಗಜಂಗಮದ ಅರ್ಚನೆ ಪೂಜನೆ ಅರ್ಪಿತ ದಾಸೋಹಕ್ರೀವಿಡಿದು ಸಂಸಾರಕ್ರೀ ಪರಧನ ಪರಸ್ತ್ರೀ ಅನ್ಯದೈವ ಭವಿಯನು ಅನುಸರಿಸಿ ಹಿಡಿದುದು ವೈರಾಗ್ಯವೇ ? ಅಲ್ಲ, ಅದು ಮರ್ಕಟ ವೈರಾಗ್ಯ. ಇವ ಬಿಟ್ಟು ಸದ್ಭಕ್ತಿ ಸಮ್ಯಗ್‍ಜ್ಞಾನ ಪರಮವೈರಾಗ್ಯಯುತನಾಗಿ ಗುರುಲಿಂಗಜಂಗಮಕ್ಕೊಲಿದು ಒಲಿಸುವುದು, ಸದ್ಭಕ್ತಿಪ್ರಸಾದಮುಕ್ತಿಯ ಹಡೆವುದು. ಈ ಸತ್ಕ್ರಿಯಾಭಕ್ತಿಯುಳ್ಳಡೆ ಲೇಸು, ಅಲ್ಲದಿದ್ದಡೆ ಸಾವುದೇ ಲೇಸಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕುಲಕಷ್ಟಮತಿಹೀನನಿಗೆ ಉಪದೇಶವ ಕೊಡಲಾಗದು ವಿಭೂತಿಯ ನೀಡಲಾಗದು, ಕರ್ಣಮಂತ್ರವ ಹೇಳಿ ಲಿಂಗವ ಕಟ್ಟಲಾಗದು. ಕ್ಟದರೂ ಹಿಂದಣ ಪೂರ್ವಜನ್ಮವ ಬಿಡದಿದ್ದಡೆ ಹೊಲೆಯರ ಮನೆಯ ಶ್ವಾನಬಳಗದಂತೆ. ಕುಲಕಷ್ಟನಾದಡೆಯೂ ಆಗಲಿ ಉಪದೇಶವ ಕೊಡಲಿ, ವಿಭೂತಿಯ ನೀಡಲಿ ಕರ್ಣಮಂತ್ರವ ಹೇಳಲಿ, ಲಿಂಗವ ಕಟ್ಟಲಿ, ಕಟ್ಟಿದಡೆ, ಸ್ವಪ್ನ ಜಾಗ್ರದಲ್ಲಿ ಶಿವಜ್ಞಾನಿಯಾಗಿದ್ದಡೆ ಲೋಕಕ್ಕೆ ಆತನೇ ಉಪದೇಶಕರ್ತ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕೊಡುವ ಲಿಂಗವನು ಬೇಡಿಕೊಳಲರಿಯದೆ ಕೊಡದ ಮಾನವರನಾಸೆಗೈದ ಲಿಂಗವಂತನನೇನೆನಬಹುದು? ಕೊಟ್ಟನು ನೋಡಿರೆ ಲಿಂಗವು, ಮಾರ್ಕಂಡೇಯಂಗೆ ಮಳೆಯರಾಜಂಗೆ ಆಯುಷ್ಯವ. ಕೊಟ್ಟನು ನೋಡಿರೆ ಲಿಂಗವು, ಲಿಂಗವಂತರು ಕುಡ ಹೇಳಿದವರಿಗೆ ಆಯಷ್ಯವ. ಮುಸುಟೆಯ Zõ್ಞಡಿರಾಯ, ಮಡಿವಾಳ ಮಾಚಿದೇವರು ಬಸವರಾಜದೇವರು ಹೇಳಿದವರಿಗೆ ಆಯುಷ್ಯವ ಕೊಟ್ಟನು ನೋಡಿರೆ, ಚೋಳಂಗೆ ಹೊನ್ನಮಳೆಯನೂ, ದಾಸಂಗೆ ತವನಿಧಿಯನೂ ದೇವದಾನವ ಮಾನವರಿಗೆ ಇಚ್ಛೆಯನರಿದು. ಬೇಡಿದವರಿಗೆ ಬೇಡಿದ ಪದವ ಕೊಟ್ಟ ಆಯುಷ್ಯ ಭಾಷೆಯ ಫಲವ ನೋಡಯ್ಯಾ: ಲಿಂಗವೂ ಸಾಧ್ಯವಾಯಿತ್ತು, ಗುರುಲಿಂಗವೆಂದರಿದು ಲಿಂಗಾರ್ಚನೆಯ ಮಾಡಿದ ಫಲವ ನೋಡಯ್ಯಾ. ಜಂಗಮ ಸಾಧ್ಯವಾಯಿತ್ತು, ಲಿಂಗ ಜಂಗಮವೆಂದರಿದು ಜಂಗಮಾರ್ಚನೆಯ ಮಾಡಿದ ಫಲವ ನೋಡಯ್ಯಾ. ಪ್ರಸಾದ ಸಾಧ್ಯವಾಯಿತ್ತು, ಪ್ರಸಾದ ಪ್ರಜ್ಞಾನಪರ ಕೇವಲ ಮುಕ್ತಿಯೆಂದು ಗ್ರಹಿಸಿದ ಫಲವ ನೋಡಯ್ಯಾ. ಶ್ರೀಗುರು ಲಿಂಗ ಜಂಗಮ ಒಂದೇ ಎಂದು ಪ್ರಸಾದ ಒಂದೇ ಎಂದು ಅರಿದೆನು. ಇದೇ ಜ್ಞಾನ, ಇದೇ ಮುಕ್ತಿ, ಇದೇ ಪದ, ಇದೇ ಮಹಾಫಲ. ಇನ್ನು ಮೇಲೆ ಈ ಪದಕ್ಕೆ ಪದ ಉಂಟೇ? ಈ ಫಲಕ್ಕೆ ಫಲ ಉಂಟೇರಿ ಇಲ್ಲ. ನಿಮ್ಮಾಣೆ ಇದೇ ಮಹತ್ಪರಿಣಾಮವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕರಸ್ಥಲದಲ್ಲಿ ಶಿವಲಿಂಗವ ಬಿಜಯಂಗೈಸಿಕೊಂಡು ಕಣ್ಣ ಮುಚ್ಚಿ, ಬಾಯ ತೆರೆದು, ಅನ್ಯವ ನೆನೆವನ್ನಬರ ಇನ್ನು ಲಿಂಗದ ಮರ್ಮವನರಿದುದಿಲ್ಲ. ಉಂಟಾದುದ ಹುಸಿಮಾಡಿ, ಇಲ್ಲದುದ ನೆನೆದಡೆ ಅದು ಸಹಜವಾಗಬಲ್ಲುದೆ ? ದೇವದೇಹಿಕ ಭಕ್ತ, ಭಕ್ತದೇಹಿಕ ದೇವನೆಂದುದಾಗಿ, ತನ್ನೊಳಗೆ ಲಿಂಗ, ಲಿಂಗದೊಳಗೆ ತಾನು, ನೆನೆಯಲಿಲ್ಲ, ನೆನೆಯಿಸಿಕೊಳ್ಳಲಿಲ್ಲವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ರಾಗ ದ್ವೇಷವೆನಿಪ ಒಡಲಿರೆ, ರಾಗ ದ್ವೇಷ ಗಮಾನಾಗಮನಂಗಳಿರುತ್ತಿರೆ, ಬ್ರಹ್ಮವಾನೆಂಬ ಬರಿಯ ವಾಗದ್ವೈತದಲ್ಲಿ ಫಲವಿಲ್ಲ. ನಂಬು, ಸುಖಸಾಗರವನ?, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ.
--------------
ಉರಿಲಿಂಗಪೆದ್ದಿ
ಕಾಮಧೇನು ಕಾಮಿಸಿದುದ ಕುಡದಿರ್ದಡೆ ಆ ಕಾಮಧೇನು ಬಂಜೆ ಆಕಳಿಂದ ಕಷ್ಟ ನೋಡಾ. ಕಲ್ಪತರು ಕಲ್ಪಿಸಿದುದ ಕುಡದಿರ್ದಡೆ ಆ ಕಲ್ಪತರು ತರಿತಾರಿ ಬೊಬ್ಬುಲಿಯಿಂದವೂ ಕಷ್ಟ ನೋಡಾ. ಚಿಂತಾಮಣಿ ಚಿಂತಿಸಿದುದ ಕುಡದಿರ್ದಡೆ ಆ ಚಿಂತಾಮಣಿ ಗಾಜುಮಣಿಯಿಂದವೂ ಕರಕಷ್ಟ ನೋಡಾ. ಶ್ರೀಗುರುಕಾರುಣ್ಯವ ಪಡೆದು ಸದ್ಭಕ್ತನಾಗಿ ಶ್ರೀಗುರುಲಿಂಗಜಂಗಮಕ್ಕೆ ಪ್ರೀತಿಯಿಂದ ದಾಸೋಹವ ಮಾಡದಿರ್ದಡೆ ಆ ಭಕ್ತನು ಲೋಕದ ಭವಿಗಳಿಂದವೂ ಕರಕಷ್ಟ ನೋಡಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಮಧೇನು ಕಲ್ಪತರು ಚಿಂತಾಮಣಿ ಪರುಷ ಮೊದಲಾದ ಮಹಾವಸ್ತುಗಳ ಮುಂದಿಟ್ಟುಕೊಂಡು ಕಾಮಿಸುವ ಮನಸಿನೊಳಗಿರುತ ಇದಾನೆ ಕಾಣಾ, ಈ ಕೊಡುವ ಗುಣವುಳ್ಳ ಮಹಾಶಿವನು. ಹಿರಣ್ಯಪತಿ ಹಿರಣ್ಯಬಾಹು ವರದಹಸ್ತನು ಅಭಯಹಸ್ತನು ಮಹಾದೇವನಿದಾನೆ. ಒಲಿಯಲರಿಯಿರಿ ಒಲಿಸಲರಿಯಿರಿ ಬೇಡಲರಿಯಿರಿ ಕೊಡಲರಿಯಿರಿ, ಕೊಂಡು ಪ್ರಯೋಗಿಸಲರಿಯಿರಿ. ನೀವು ಕೊಳಲರಿಯಿರಲ್ಲದೆ, ಶಿವನೇನೂ ಕೊಡಲರಿಯನೆ ? ಅಂಗಭೋಗಕ್ಕೆಂದಡೆ ಕೊಡನು, ಲಿಂಗಭೋಗಕ್ಕೆಂದಡೆ ಕೊಡುವನು. ಇದು ಸತ್ಯ ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಕೇಳಿದಾತ ಶಂಕರದಾಸಿಮಯ್ಯ, ಹೇಳಿದಾತ ಸಕಳೇಶಮಾದಿರಾಜಯ್ಯ, ಕಂಡಾತನಲ್ಲಮಪ್ರಭು, ಉಂಡಾತ ನಿಜಗುಣನು. ಇಂತೀ ನಾಲ್ವರ ಕಂಡುನಾಚಿದಾತನಜಗಣ್ಣನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಕ್ಷುಧೆಯಾರ್ಥ ಎತ್ತರಹದಲ್ಲಿ ಇಂಬಿಟ್ಟಡೆ ಅದಕ್ಕದು ವರ್ಮಕಳೆ ಅದಕ್ಕದು ಸಂತಾನವೇ ಅಯ್ಯಾರಿ ಜಲದ ಬಿಂದುವಿನಲ್ಲಿ ಹುಟ್ಟಿಸಿ ಜಗವ ಲೋಲಾಡಿಸಿದೆಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕರುವಿನ ರೂಪಿಂಗೆ ಒಳಗೊಂದು ಹೊರಗೊಂದಲ್ಲದೆ ಪರುಷದ ರೂಪಿಂಗೆ ಒಳಗೊಂದು ಹೊರಗೊಂದುಂಟೆ ? ಅಲ್ಲ, ನಿಲ್ಲು, ಮಾಣು, ಪರೀಕ್ಷಿಸಿ ನೋಡಾ. ಪಂಚಭೂತಸಮ್ಮಿಶ್ರನಾದಡೆ ದೇವ ದಾನವರೊಳಗಾದ ಪ್ರಕೃತಿಕಾಯವಾದಾ ತನುವಿಂಗೆ ಒಳಗೊಂದು ಹೊರಗೊಂದು ಅದೂ ಕ್ರಿಯಾಕರ್ಮ ಬೇರೆ ದ್ವಂದ್ವಗ್ರಸ್ತವಾಗಿಹುದು. ಆಪ್ರಕಾರವಲ್ಲ ನೋಡಾ. ಗುರುಲಿಂಗಜಂಗಮ ಪ್ರಸನ್ನವಾದ ಪ್ರಸಾದಕಾಯ ಮಹಾಜ್ಞಾನತನು ಪ್ರಾಣಲಿಂಗ ಸ್ವಾಯತವಾಗಿಪ್ಪ ಘನತರ ಶಿವಲಿಂಗಮೂರ್ತಿ ಸರ್ವಾಂಗಲಿಂಗ ಮೂರ್ತಿಯ ಪರೀಕ್ಷಿಸಿ ನೋಡಿ, ಇಂತು ಸದ್ಗುರುಸ್ವಾಮಿ ಪ್ರಾಣಲಿಂಗಪ್ರತಿಷೆ*ಯಂ ಎಂದು ಮಾಡಿದನೋ ಅಂದೇ ಐಕ್ಯನು, ಅಂದೇ ಶರಣನು, ಅಂದೇ ಪ್ರಾಣಲಿಂಗಿ, ಅಂದೇ ಪ್ರಸಾದಿ, ಅಂದೇ ಮಾಹೇಶ್ವರ, ಅಂದೇ ಭಕ್ತನು. ಇಂದಿನ್ನಾವುದು ಹೊಸತಲ್ಲ ನೋಡಾ. ಗುರುಲಿಂಗಜಂಗಮಕ್ಕೆ ತ್ರಿವಿಧಭಕ್ತಿಯ ಮಾಡುತ್ತಿಪ್ಪ ಭಕ್ತನಾಗಿಪ್ಪನು ಪರಧನ ಪರಸ್ತ್ರೀ ಪರದೈವಂಗಳ ಬಿಟ್ಟು ಮಾಹೇಶ್ವರನಾಗಿಪ್ಪನು. ಕರ್ಮಣಾ ಮನಸಾ ವಾಚಾ ಗುರೂಣಾಂ ಭಕ್ತವತ್ಸಲಃ ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್ ಎಂಬುದನರಿದು ಈ ತ್ರಿವಿಧವನೂ ಗುರುಲಿಂಗಜಂಗಮಕ್ಕೆ ಅರ್ಪಿಸಿ ನಿರಂತರ ಪ್ರಸಾದವನವಗ್ರಹಿಸಿ ಭಕ್ತಕಾಯ ಮಮಕಾಯವೆಂಬೀ ವಾಕ್ಯದಲೂ ತನು ಶಿವತನುವೆಂದರಿದು ಸದ್ಗುರು ಪ್ರಾಣಲಿಂಗವನೇಕೀಭವಿಸಿದ ಲಿಂಗವೇ ಪ್ರಾಣವೆಂಬುದರಿದ ಬಳಿಕ ಪ್ರಾಣಲಿಂಗವೆಂದರಿದು, ಒಳಗು ಹೊರಗೆಂದರಿಯದೆ ಸರ್ವಾಂಗಲಿಂಗವೆಂದರಿದು, ಪ್ರಾಣಮಯ ಶಿವನೆಂದರಿದು ತತ್ವಮಯಶಿವನೆಂದರಿದು ಸರ್ವಕ್ರಿಯಾಕರ್ಮಂಗಳೆಲ್ಲವನೂ ಶಿವಕ್ರೀ ಎಂದರಿದು ಕರಣಂಗಳೆಲ್ಲವೂ ಶಿವಕರಣಂಗಳೆಂದರಿದು ಶಿವಪ್ರೇರಣೆಯಿಂದ ಬಂದ ಪದಾರ್ಥಂಗಳೆಲ್ಲವೂ ಸರ್ವಶುದ್ಧ ಎಂದರಿದು ಶಿವಹಸ್ತದಲ್ಲಿ ಶಿವಾರ್ಪಿತವಂ ಮಾಡಿ ರೂಪನರ್ಪಿಸಿ ಶಿವಜಿಹ್ವೆಯಲ್ಲಿ ಶಿವಾರ್ಪಿತವಂ ಮಾಡಿ ರುಚಿಯನರ್ಪಿಸಿ ಅರ್ಪಿಸಿದೆನೆಂದೆನ್ನದೆ, ಶಿವಕ್ರೀ ಎಂದರಿದು ಮಹಾಜ್ಞಾನ ಪರಿಣಾಮಪ್ರಸಾದವ ನಿರಂತರ ಗ್ರಹಿಸುವನು. ಮನೋವಾಕ್ಕಾಯದಲ್ಲಿ ಮಿಥ್ಯವ ಕಳೆದು ಜಂಗಮಲಿಂಗಕ್ಕೆ ಅಷ್ಟಭೋಗಂಗಳ ಸಲಿಸಿ ಪ್ರಸನ್ನತೆಯಂ ಪಡೆದು ಪ್ರಸನ್ನಪ್ರಸಾದವ ಪ್ರಸಾದಿಯಾಗಿ ಗ್ರಹಿಸುನವನುಫ. ಅಲಸುಗಾರನ ಭಕ್ತಿ ಅದ್ವೈತವೆಂಬ ವಾಕ್ಯಕ್ಕಂಜಿ ಸರ್ವಕ್ರೀಯಲ್ಲಿ ಎಚ್ಚತ್ತು ನಡೆವನು. ಪ್ರಾಣ ಲಿಂಗವೆಂದರಿದು, ಪ್ರಾಣಲಿಂಗಿಯಾಗಿ ಸುಖ ದುಃಖ ಭಯಾದಿ ದ್ವಂದ್ವಕರ್ಮಂಗಳು ನಾಸ್ತಿಯಾಗಿಪ್ಪನು. ಸರ್ವಕ್ರಿಯಾಕರ್ಮಂಗಳೆಲ್ಲವನೂ ಲಿಂಗದಲ್ಲಿ ಇರಿಸಿ, ಧರಿಸಿ, ಸುಖಿಸಿ, ಶರಣನಾಗಿಪ್ಪನು. ಸರ್ವಕ್ರೀಯಲ್ಲಿ ನಡೆದು ತನುಮನಧನವ ಸವೆಸಿ ಮಹಾಜ್ಞಾನವಳವಟ್ಟು, ನಿಸ್ಸಂಗಿಯಾಗಿ ಸರ್ವಕ್ರೀಯನೇಕೀಭವಿಸಿ ಕ್ರಿಯಾನಾಸ್ತಿಯಾಗಿ ಐಕ್ಯನಾಗಿಪ್ಪನು. ಕ್ರಿಯಾಕ್ರಿಯೆ ಅಂದು ಇಂದು ಎಂದೂ ಒಂದೇ ಪರಿಯಯ್ಯಾ. ಈ ವಿಚಾರ ಒಮ್ಮಿಂದೊಮ್ಮೆ ಅರಿಯಬಾರದು. ಅರಿಯದಿದ್ದರೇನುರಿ ಬಾಲ್ಯದಲ್ಲಿ ಸತಿಪತಿಗಳೂ ಮಾತಾಪಿತರುಗಳು ವಿವಾಹವ ಮಾಡುವಲ್ಲಿ ಒಮ್ಮಿಂದೊಮ್ಮೆ ಬಾಲಕ್ರಿಯಾಕರ್ಮ ರತಿಸುಖವನರಿಯಬಾರದು. ಅರಿಯದಿದ್ದರೇನು? ಬಾಲ್ಯ ಸತಿಪತಿಗಳಲ್ಲಿ ಮುಂದೆ ಯೌವನದಲ್ಲಿ ಕ್ರಿಯಾಕರ್ಮಕರದಿ ಸುಖವನರಿವಂತೆ ಶಿವಾಚಾರ ಸರ್ವಕ್ರಿಯಾ ಸಂಪನ್ನತ್ವವನೂ, ಮಹಾನುಭಾವರ ಸಂಗದಿಂದಲರಿಯಬಹುದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಮವುಳ್ಳಲ್ಲಿ ಭಕ್ತಿ ಇಲ್ಲ, ಕ್ರೋಧವುಳ್ಳಲ್ಲಿ ಭಕ್ತಿ ಇಲ್ಲ ಲೋಭವುಳ್ಳಲ್ಲಿ ಭಕ್ತಿ ಇಲ್ಲ, ಮೋಹವುಳ್ಳಲ್ಲಿ ಭಕ್ತಿ ಇಲ್ಲ ಮದವುಳ್ಳಲ್ಲಿ ಭಕ್ತಿ ಇಲ್ಲ, ಮತ್ಸರವುಳ್ಳಲ್ಲಿ ಭಕ್ತಿ ಇಲ್ಲವಯ್ಯಾ ಮಹಾ ಅರಿಷಡ್ವರ್ಗವುಳ್ಳಲ್ಲಿ ಭಕ್ತಿ ಇಲ್ಲ. ಇವು ಉಂಟಾಗಿ ಭಕ್ತರೆಂಬರು ಅದೇಕಯ್ಯರಿ ಹಗೆಯ ಸಮೂಹವಿದ್ದಲ್ಲಿ ಕೇಳಿರೆ, ಒಬ್ಬನೆಂತಿಪ್ಪನಯ್ಯಾ? ಇದು ಕಾರಣ, ಅರಿಷಡ್ವರ್ಗವುಳ್ಳಲ್ಲಿ ಭಕ್ತಿ ಇಲ್ಲ, ಭಕ್ತಿವುಳ್ಳಲ್ಲಿ ಅರಿಷಡ್ವರ್ಗಗಳಿಲ್ಲ. ಈ ಅರಿಷಡ್ವರ್ಗವಿಲ್ಲದವನೇ ಭಕ್ತ, ಇಂತಹ ಭಕ್ತದೇಹಿಕ ದೇವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಮ ಕ್ರೋಧ ಲೋಭ ಮೋಹಾದಿಗಳ ಆಗರವೆನಿಪ ಒಡಲ ಒಡತಿ ಎಳದೊಯ್ಯುತ್ತಿರಲು ವಾಗದ್ವೈತವಾ ಬೊಮ್ಮವೆಂಬೆನು. ಆಗಳೂ ಇಂದ್ರಿಯಂಗಳ ಬೆನ್ನಲಿ ಹರಿವುತ್ತ `ಸೋ[s]ಹಂ' ಎಂಬರಿವನರಿಯದೆ ಶಿವಜ್ಞಾನ ಮೊಗೆಯದೆ ವಾಗದ್ವೈತದಲ್ಲಿ ಹುರುಳಿಲ್ಲ. ನಂಬು, ಸುಖಸಾರಾಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
--------------
ಉರಿಲಿಂಗಪೆದ್ದಿ