ಅ
(37)
ಆ
(13)
ಇ
(6)
ಈ
(1)
ಉ
(1)
ಊ
(0)
ಋ
(0)
ೠ
(0)
ಎ
(13)
ಏ
(3)
ಐ
(0)
ಒ
(2)
ಓ
(8)
ಔ
(0)
ಅಂ
(8)
ಅಃ
(8)
ಕ
(13)
ಖ
(0)
ಗ
(12)
ಘ
(1)
ಙ
(0)
ಚ
(0)
ಛ
(0)
ಜ
(16)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(7)
ಥ
(0)
ದ
(7)
ಧ
(1)
ನ
(15)
ಪ
(29)
ಫ
(0)
ಬ
(8)
ಭ
(9)
ಮ
(12)
ಯ
(1)
ರ
(3)
ಱ
(0)
ಲ
(34)
ವ
(17)
ಶ
(46)
ಷ
(0)
ಸ
(28)
ಹ
(6)
ಳ
(0)
ವಚನಕಾರ: ಉರಿಲಿಂಗಪೆದ್ದಿ
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಕಾಲ: 1160
ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ ಸು. 1160. ಕಳ್ಳತನ ಮಾಡುತಿದ್ದ ಪೆದ್ದಿ ಉರಿಲಿಂಗದೇವನ ಶಿಷ್ಯನಾಗಿ ಅವನ ನಂತರ ಅದೇ ಪೀಠದ ಮುಖ್ಯಸ್ಥನಾದ. ಅಸ್ಪೃಶ್ಯ ಜನಾಂಗದ ಪೆದ್ದಿ ವಿದ್ವಾಂಸನಾಗಿ, ಅನುಭಾವಿಯಾಗಿ, ಮಠದ ಮುಖ್ಯಸ್ಥನೂ ಆದದ್ದು ಆ ಕಾಲದ ಮಹತ್ವದ ಸಂಗತಿ. ಈತನ 366 ವಚನಗಳು ದೊರೆತಿವೆ. ಕರ್ನಾಟಕದಲ್ಲಿರುವ ಅಸ್ಪೃಶ್ಯ ಜನಾಂಗಗಳಿಗೆ ಸೇರಿದ ಮಠಗಳನ್ನು ಉರಿಲಿಂಗಪೆದ್ದಿಗಳ ಮಠವೆಂದೇ ಕರೆಯುವ ರೂಢಿ ಇದೆ.
ಓಂ ನಮಃ ಶಿವಾಯ ಎಂಬುದೆ ವೇದ, ಓಂ ನಮಃ ಶಿವಾಯ ಎಂಬುದೆ ಶಾಸ್ತ್ರ, ಓಂ ನಮಃ ಶಿವಾಯ ಎಂಬುದೆ ಪುರಾಣ, ಓಂ ನಮಃ ಶಿವಾಯ ಎಂಬುದೆ ಆಗಮ, ಓಂ ನಮಃ ಶಿವಾಯ ಎಂಬುದೆ ಸಕಲಕಲೆ. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸರ್ವಜ್ಞ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಛಂದ. . ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಋಷಿ ತಾನು. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಅಧಿದೇವತೆ. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸದ್ಯೋನ್ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
ಓಂ ನಮಃ ಶಿವಾಯ ಎಂಬುದೆ ಮಂತ್ರ, ಓಂ ನಮಃ ಶಿವಾಯ ಎಂಬುದೆ ತಂತ್ರ, ಓಂ ನಮಃ ಶಿವಾಯ ಎಂಬುದೆ ಯಂತ್ರ, ಓಂ ನಮಃ ಶಿವಾಯ ಎಂಬುದೆ ವಶ್ಯ. ಇದು ಕಾರಣ, ಓಂ ನಮಃ ಶಿವಾಯ ಎಂಬುದೆ ಸಕಲಸಿದ್ಧಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಓಂ ನಮಃ ಶಿವಾಯ ಎಂಬುದೆ ಆಚಾರಲಿಂಗ, ಓಂ ನಮಃ ಶಿವಾಯ ಎಂಬುದೆ ಗುರುಲಿಂಗ, ಓಂ ನಮಃ ಶಿವಾಯ ಎಂಬುದೆ ಶಿವಲಿಂಗ, ಓಂ ನಮಃ ಶಿವಾಯ ಎಂಬುದೆ ಚರಲಿಂಗ, ಓಂ ನಮಃ ಶಿವಾಯ ಎಂಬುದೆ ಪ್ರಸಾದಲಿಂಗ, ಓಂ ನಮಃ ಶಿವಾಯ ಎಂಬುದೆ ಮಹಾಲಿಂಗ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದೆನಲು ಪರಶಿವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.